CrimeNEWSದೇಶ-ವಿದೇಶ

ಪೊಲೀಸರ ಕ್ರೌರ್ಯದಿಂದ ರೈಲಿಗೆ ಸಿಲುಕಿ ಎರಡೂ ಕಾಲುಗಳ ಕಳೆದುಕೊಂಡ ಬೀದಿಬದಿ ವ್ಯಾಪಾರಿ

ವಿಜಯಪಥ ಸಮಗ್ರ ಸುದ್ದಿ

ಕಾನ್ಪುರ: ಪೊಲೀಸರು ಎಸೆದ ತನ್ನ ತಕ್ಕಡಿ ತೆಗೆದುಕೊಳ್ಳಲು ರೈಲ್ವೆ ಹಳಿ ಪ್ರವೇಶಿಸಿದ ಬೀದಿಬದಿ ವ್ಯಾಪಾರಿ ಬಾಲಕ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಜರುಗಿದೆ.

ಕಾನ್ಪುರದ ಕಲ್ಯಾಣಪುರ್ ಬಳಿಯ ಸಾಹೇಬ್ ನಗರದ ನಿವಾಸಿ 17 ವರ್ಷದ ಅರ್ಸಲಾನ್ ಎರಡೂ ಕಾಲನ್ನು ಕಳೆದುಕೊಂಡ ಬಾಲಕ. ಈ ವೇಳೆ ತೀವ್ರ ಗಾಯೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಎಸ್‌ಡಿಪಿಜಿಐಗೆ ದಾಖಲಿಸಲು ವೈದ್ಯರು ಸೂಚಿಸಿದ್ದಾರೆ.

ಪ್ರತಿದಿನದಂತೆ ಶುಕ್ರವಾರ ಸಂಜೆ ಅರ್ಸಲಾನ್ ಜಿಟಿ ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಶದಬ್ ಖಾನ್ ಮತ್ತು ಹೆಡ್ ಕಾನ್ಸ್ಟೇಬಲ್ ರಾಕೇಶ್ ಕುಮಾರ್ ಅರ್ಸಲಾನ್ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೆ ತಕ್ಕಡಿಯನ್ನು ರೈಲು ಹಳಿಗಳ ಮೇಲೆ ಎಸೆದಿದ್ದಾರೆ.

ಭಯಭೀತಗೊಂಡ ಅರ್ಸಲಾನ್ ಏನನ್ನು ಯೋಚಿಸಿದೆ ಮರುಕ್ಷಣವೇ ತಕ್ಕಡಿ ಎತ್ತಿಕೊಳ್ಳಲು ರೈಲು ಹಳಿ ತಲುಪಿದಾಗ ವೇಗವಾಗಿ ಬರುತ್ತಿದ್ದ ಮೆಮು ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಆತನ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತ ಶ್ರಾವವೂ ಆಗಿದೆ.

ಕೂಡಲೇ ಜನರು ಮತ್ತು ಪೊಲೀಸರು ಆ ಬಾಲಕನ್ನು ರೈಲುಹಳಿಯಿಂದ ಎತ್ತಿಕೊಂಡು ಹೋಗುವಾಗ ಎರಡೂ ಕಾಲುಗಳು ಸಂಪೂರ್ಣ ನಜ್ಜುಗುಜ್ಜಾಗಿರುವುದನ್ನು ತೋರಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಷಯ ತಿಳಿದ ಕಾನ್ಪುರ ಪಶ್ಚಿಮ ಡಿಸಿಪಿ ವಿಜಯ್ ಧುಲ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಬದಿಯ ವ್ಯಾಪಾರಿ ಅರ್ಸಲಾನ್ ಮೇಲೆ ಹಲ್ಲೆ ನಡೆದಿರುವುದು, ಆತನ ತಕ್ಕಡಿಯನ್ನು ರೈಲು ಹಳಿಗಳ ಮೇಲೆ ಎಸೆದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಸತ್ಯ ಎಂಬುವುದು ಕಂಡುಬಂದಿದೆ. ಹೀಗಾಗಿ ಆ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಮತ್ತು ಎಸಿಪಿ ಮಟ್ಟದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ಅರ್ಸಲಾನ್‌ನ ಪರಿಸ್ಥಿತಿ ಗಂಭೀರವಾಗಿದ್ದು, ಆತನ ಕಾಲುಗಳು ತುಂಡರಿಸಿದ್ದು, ಹೆಚ್ಚಿನ ರಕ್ತ ಸೋರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಾರೆ ಪೊಲೀಸರ ರಕ್ಕಸ ನಡೆಗೆ ಬಡ ಬೀದಿಬದಿ ವ್ಯಾಪಾರಿ ಬಾಲಕನ ಕಾಲು ಶಾಶ್ವತವಾಗಿ ಹೋಗಿದ್ದು, ಆತನ ಪ್ರಾಣದ ಬಗ್ಗೆ ಯಾವುದೇ ಭರವಸೆಯೂ ಇಲ್ಲದಂತಾಗಿದೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...