NEWSನಮ್ಮಜಿಲ್ಲೆನಮ್ಮರಾಜ್ಯ

ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಯನಗರ ವಿಧಾನ ಸಭಾ ಕ್ಷೇತ್ರದ ಗುರಪ್ಪನ ಪಾಳ್ಯ ವಾರ್ಡಿನ, ಬಿಸ್ಮಿಲ್ಲ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಸಮುದಾಯ ಭವನ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಿದ್ದು ಭವನದ ನಿರ್ಮಾಣ ಕೆಲಸ ಪೂರ್ತಿ ಮಾಡಿ ಜನ ಬಳಕೆಗೆ ತೆರವು ಮಾಡಬೇಕೆಂದು ಆಮ್ ಆದ್ಮಿ ಪಕ್ಷದ ಜಯನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಸರವಣ ಒತ್ತಾಯಿಸಿದರು.

ನಿರ್ಮಾಣ ಹಂತದಲ್ಲಿ ಸ್ಥಗಿತವಾಗಿರುವ ಸಮುದಾಯ ಭವನದ ಸ್ಥಳಕ್ಕೆ ಆಮ್ ಆದ್ಮಿ ಮುಖಂಡರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಾ. ಸರವಣ, ಸಮುದಾಯ ಭವನದ ಕಾಮಗಾರಿ 4 ವರ್ಷಗಳಿಂದ ಯಾವುದೇ ರೀತಿಯ ಕೆಲಸ ಕಾರ್ಯ ನಡೆಯದೆ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ ಎಂದರು.

2020ರಲ್ಲಿ ಸಮುದಾಯ ಭವನ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ 2020ರಲ್ಲೇ ಮುಕ್ತಾಯವಾಗಿದೆ. ಈಗ ಯಾವುದೇ ಕಾರ್ಪೋರೇಟರ್ ಇಲ್ಲ, ಆದ್ದರಿಂದ ಶಾಸಕ ಸಿ.ಕೆ. ರಾಮಮೂರ್ತಿಯವರಿಗೆ ಮನವಿ ಮಾಡುತ್ತಿದ್ದು, ದಯವಿಟ್ಟು ಈ ಸಮುದಾಯ ಭವನದ ಪರಿಸ್ಥಿತಿಯನ್ನು ವೀಕ್ಷಿಸುವಂತೆ ಒತ್ತಾಯಿಸಿದರು.

ಸಮುದಾಯ ಭವನ ನಿರ್ಮಾಣವಾದರೆ ಜನಸಾಮಾನ್ಯರಿಗೆ ಮತ್ತು ಬಡವರ ಮದುವೆ, ಹುಟ್ಟುಹಬ್ಬ ಮತ್ತು ಹಲವಾರು ಕಾರ್ಯಗಳಿಗೆ ಉಪಯೋಗವಾಗಲಿದೆ. ಮದುವೆ, ನಾಮಕರಣ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಕಡಿಮೆ ದರದಲ್ಲಿ ಜನರಿಗೆ ಸಿಗಲಿದೆ, ಆದರೆ ಸಮುದಾಯ ಭವನ ಆವರಣದಲ್ಲಿ ಬಿಬಿಎಂಪಿ ಕಸ ವಿಂಗಡಿಸುವ ಕೆಲಸ ಮಾಡುತ್ತಿದ್ದು, ಡೆಂಗ್ಯೂ ಹರಡುವ ಸೊಳ್ಳೆ ಫ್ಯಾಕ್ಟರಿಯಂತಾಗಿದೆ ಎಂದರು.

ಸಮುದಾಯ ಭವನ ಜನ ಸಾಮಾನ್ಯರ ತೆರಿಗೆ ಹಣ ಯಾವುದೇ ರೀತಿಯ ಉಪಯೋಗವಾಗದೆ, ನೆನೆಗುದಿಗೆ ಬಿದ್ದಿದ್ದು, ಈ ಸಮುದಾಯ ಭವನದ ಕಾಮಗಾರಿಯನ್ನು 15 ದಿನಗಳಲ್ಲಿ ಮತ್ತೆ ಆರಂಭಿಸಿ, ಜನ ಸಾಮಾನ್ಯರಿಗೆ ಉಪಯೋಗವಾಗುವಂತೆ ಮಾಡಬೇಕು, ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಮ್ಮ ಆದ್ಮಿ ಪಾರ್ಟಿ ಬೆಂಗಳೂರು ನಗರ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಹಾಗೂ ಗುರಪ್ಪನ ಪಾಳ್ಯ ಕ್ಷೇತ್ರದ ಆಕಾಂಕ್ಷಿ ಫಿರೋಝ್ ಖಾನ್ ಮಾತನಾಡಿ, 2015ರ ಬಿಬಿಎಂಪಿ ಚುನಾವಣೆ ಬಳಿಕ ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ ಬಿಡುಗಡೆ ಹಣವನ್ನು ಸರಿಯಾಗಿ ಬಳಕೆ ಮಾಡಿದರೆ ಸಮುದಾಯ ಭವನ ನಿರ್ಮಾಣವೇ ಪೂರ್ತಿಯಾಗುತ್ತಿತ್ತು, ಆದರೆ ಭ್ರಷ್ಟಾಚಾರದ ಪರಿಣಾಮ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಅರ್ಧ ಕೆಲಸ ಮಾಡುವ ಮೊದಲೇ ಪೂರ್ತಿ ಹಣ ಖಾಲಿ ಮಾಡಿದ್ದಾರೆ, ಬಿಬಿಎಂಪಿ ಚುನಾವಣೆ ನಡೆಯದ ಮತ್ತಷ್ಟು ವಿಳಂಬವಾಗಿದೆ ಎಂದರು.

ಶಾಸಕ ಸಿ.ಕೆ. ರಾಮಮೂರ್ತಿಯವರು ಭವನ ನಿರ್ಮಾಣಕ್ಕಾಗಿ ಅಧಿವೇಶನದಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಬೇಕು, ಇದಕ್ಕೆ ಬಿಡುಗಡೆಯಾಗಿರುವ ಅನುದಾನ ಸರಿಯಾಗಿ ಬಳಕೆಯಾಗದ ಬಗ್ಗೆ ತನಿಖೆ ನಡೆಸಬೇಕು, ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಜೋಶ್ವಾ ಸೈಂಟ್, ಬೆಂಗಳೂರು ಕಾರ್ಯದರ್ಶಿ ಅಂಜನಾ ಗೌಡ, ಆನೇಕಲ್ ಮುನೇಶ್, ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ