Breaking NewsLatestNEWSStoriesಲೇಖನಗಳು

ವಿಜಯಪಥ ಸುದ್ದಿ ವೆಬ್‌ಸೈಟ್ ಪ್ರಧಾನ ಸಂಪಾದಕರಾದ ದೇವರಾಜು ಅವರ ಬಗ್ಗೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಕನ್ನಡದ ಜನಪ್ರಿಯ ಸುದ್ದಿ ವೆಬ್‌ಸೈಟ್‌ ಆಗಿದ್ದು, ರಾಜ್ಯ ಮತ್ತು ದೇಶದಲ್ಲಿ ನಡೆಯುವ ಪ್ರಮುಖ ಸುದ್ದಿಗಳನ್ನು ಒದಗಿಸುತ್ತದೆ. ಈ ವೆಬ್‌ಸೈಟ್‌ನ ಪ್ರಧಾನ ಸಂಪಾದಕರಾಗಿರುವ ದೇವರಾಜು ಅವರು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದು, ಪ್ರಸ್ತುತ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸ್ಥಾನಮಾನ ಹೊಂದಿದ್ದಾರೆ.

ದೇವರಾಜು ಅವರ ಕೊಡುಗೆಗಳು: * ಸುದ್ದಿ ವರದಿಗಾರಿಕೆ: ದೇವರಾಜು ಅವರು ವಿವಿಧ ಕ್ಷೇತ್ರಗಳಲ್ಲಿ ಸುದ್ದಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಪ್ರಕಟಿಸುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಳೆದ 19 ವರ್ಷಗಳಿಂದಲೂ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಮೈಸೂರಿನ ಪ್ರಾದೇಶಿಕ ಪತ್ರಿಕೆಗಾಳಾದ ಮೈಸೂರು ಮಿತ್ರ, ಪ್ರಜಾನುಡಿ ಹಾಗೂ ರಾಜ್ಯ ಪತ್ರಿಕೆಗಳಾದ ಹೊಸ ದಿಗಂತ, ವಿಜಯವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಹಾಗೂ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿರುವ ಇವರು 2019ರ ನವೆಂಬರ್ 1ರಂದು ವಿಜಯಪಥ ಕನ್ನಡದ ಜನಪ್ರಿಯ ಸುದ್ದಿ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ನಿರಂತರವಾಗಿ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕಾರಣರಾಗುತ್ತಿದ್ದಾರೆ.

* ಕನ್ನಡ ಪತ್ರಿಕೋದ್ಯಮದ ಬೆಳವಣಿಗೆ: ವಿಜಯಪಥದ ಮೂಲಕ ಕನ್ನಡ ಭಾಷೆಯಲ್ಲಿ ಗುಣಮಟ್ಟದ ಸುದ್ದಿಗಳನ್ನು ಒದಗಿಸುವ ಮೂಲಕ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕಾರಣರಾಗುತ್ತಿದ್ದಾರೆ.

ಜವಾಬ್ದಾರಿ: ಸಮಾಜದ ವಿವಿಧ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವಿಜಯಪಥದ ಮೂಲಕ ಮಾಡುತ್ತಿದ್ದಾರೆ.

ವೆಬ್‌ಸೈಟ್ ವಿಶೇಷತೆಗಳು: “ವಿವಿಧ ವಿಭಾಗಗಳು: ಪ್ರಮುಖವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರ ಸಮಸ್ಯೆ, ಭ್ರಷ್ಟಾಚಾರ, ರಾಜಕೀಯ, ಆರ್ಥಿಕ, ಸಾಮಾಜಿಕ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುದ್ದಿಗಳನ್ನು ಪಭಟಿಸಲಾಗುತ್ತಿದೆ. ಇನ್ನು ವಿಜಯಪಥ ಪತ್ರಿಕೆಯಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ ನಿಲ್ದಾಣಗಳಲ್ಲಿ ನಿರ್ವಾಹಕರಿಂದ ಟಿಸಿಗಳು ಇತರೆ ಸಿಬ್ಬಂದಿಗಳು ಪಡೆಯುತ್ತಿದ್ದ 5-10ರೂ.ಗಳ ಲಂಚವನ್ನು ಬಿಎಂಟಿಸಿಯ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಶೇ.100ರಷ್ಟು ಮುಕ್ತಗೊಳಿಸಿದ ಕೀರ್ತಿಗೆ ಪತ್ರಿಕೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ.

ತಾಜಾ ಸುದ್ದಿ: ಘಟನೆ ನಡೆದ ತಕ್ಷಣ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ತಾಜಾ ಮಾಹಿತಿಯನ್ನು ಒದಗಿಸುತ್ತದೆ.

ವಿಶ್ಲೇಷಣಾತ್ಮಕ ಲೇಖನಗಳು: ಸುದ್ದಿಗಳಿಗೆ ಸಂಬಂಧಿಸಿದ ವಿಶ್ಲೇಷಣಾತ್ಮಕ ಲೇಖನಗಳು ಮತ್ತು ವರದಿಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಆಳವಾದ ತಿಳಿವಳಿಕೆಯನ್ನು ನೀಡುತ್ತದೆ.

ವಿಜಯಪಥ ಮತ್ತು ದೇವರಾಜು ಅವರ ಕೊಡುಗೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ಅನ್ನು ನೇರವಾಗಿ ಭೇಟಿ ಮಾಡಬಹುದು.
ವಿಜಯಪಥ ವೆಬ್‌ಸೈಟ್‌: https://vijayapatha.in/ ಭೇಟಿ ನೀಡಿ

Megha
the authorMegha

Leave a Reply

error: Content is protected !!