Vijayapatha - ವಿಜಯಪಥ > Blog > NEWS > Crime > KSRTC ಬಸ್- ಜೀಪ್ ನಡುವೆ ಅಪಘಾತ: ಜೀಪ್ ಚಾಲಕ ಸೇರಿ ನಾಲ್ವರು ಮೃತ
KSRTC ಬಸ್- ಜೀಪ್ ನಡುವೆ ಅಪಘಾತ: ಜೀಪ್ ಚಾಲಕ ಸೇರಿ ನಾಲ್ವರು ಮೃತ
Deva02/01/2024
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಜೀಪ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರಿನ RTO ಕಚೇರಿ ಬಳಿ ನಡೆದಿದೆ.
ಅಂತರಸಂತೆ ಜಿ.ಆರ್.ಕಾಲೋನಿ ನಿವಾಸಿಗಳಾದ ರಾಜೇಶ್, ಲೋಕೇಶ್, ಸೋಮೇಶ್ ಮತ್ತು ಕಾರು ಚಾಲಕ ಮೃತರು ಎಂದು ತಿಳಿದು ಬಂದಿದೆ.
ಕೆಎಸ್‌ಆರ್‌ಟಿಸಿ ಬಸ್ ವಿರಾಜಪೇಟೆಯಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಅತ್ತ ಜೀಪ್ನಲ್ಲಿದ್ದವರು ಶುಂಠಿ ಕೀಳಲು ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)
Related
Deva
Leave a reply