ವಿರಾಜಪೇಟೆ : 2010ರಲ್ಲಿ ಕಾರು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಡುವೆ ಸಂಬಂಧಿಸಿದ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ನೀಡದೆ ಮಾರ್ಗ ಬದಲಿಸಿ ಓಡಿಸುತ್ತಿದ್ದ ಬಸ್ಅನ್ನು ಪತ್ತೆ ಹಚ್ಚಿದ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ನ್ಯಾಯಾಲಯ KSRTC Bus seize ಮಾಡಿರುವುದು. 2010ರಲ್ಲಿ ಹುಣಸೂರಿನಲ್ಲಿ ಕಾರು ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ನಡೆದಿತ್ತು. ಹೀಗಾಗಿ ಫಾತೀಮಾ ಅಪ್ಸರ್ ಎಂಬುವರು ಕೆಎಸ್ಆರ್ಟಿಸಿ ವಿರುದ್ಧ ಅಪಘಾತ ವಿಮೆ ಪರಿಹಾರಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಪರಿಹಾರ ನೀಡಲು ಕೆಎಸ್ಆರ್ಟಿಸಿಗೆ 2020ರಲ್ಲಿ ಆದೇಶ ಹೊರಡಿಸಿತ್ತು.
ಇತ್ತ ಜಿಲ್ಲಾ ನ್ಯಾಯಲಯದ ತೀರ್ಪನ್ನು ಪ್ರಶ್ನಿಸಿ ಕೆಎಸ್ಆರ್ಟಿಸಿ ನಿಗಮವು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನೇ ರಾಜ್ಯ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಅಪಘಾತ ವಿಮೆ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದ ಕೆಎಸ್ಆರ್ಟಿಸಿ ನಿಗಮವು, ಪರಿಹಾರ ನೀಡದೆ ಎಷ್ಟೇ ಸಮಯಾವಕಾಶ ನೀಡಿದರೂ ಕೋರ್ಟ್ ಆದೇಶವನ್ನು ಉಲ್ಲಂಘಿಸಿತ್ತು.
ಅಲ್ಲದೆ ನಿಗಮವು ಆ ಬಸ್ ಮಾರ್ಗವನ್ನೇ ಬದಲಿಸಿತ್ತು. ಆದರೆ ಕೊಳ್ಳೇಗಾಲದಿಂದ ವಿರಾಜಪೇಟೆ ಪಟ್ಟಣಕ್ಕೆ ಬಂದಿದ್ದ ಬಸ್ಅನ್ನು ವಿರಾಜಪೇಟೆ ಕೋರ್ಟ್ ಸಿಬ್ಬಂದಿ ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಈ ವಿಷಯವನ್ನು ಚಾಲಕ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ನ್ಯಾಯಾಲಯವು ಅಪಘಾತದ ಪರಿಹಾರ ಹಣ ಕೊಟ್ಟು ವಾಹನ ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.