
ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಶಿಕ್ಷಣ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡಬೇಕು ಎಂದು ಕಿರುತೆರೆ ನಟ ರಂಗಕರ್ಮಿ ಟಿ.ಎಸ್. ಸೇತುರಾಮ್ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಪ್ರಬುದ್ಧ ಪ್ರತಿಷ್ಠಾನದ ಫಸ್ಟ್ ಕ್ರೈ ಇಂಟಲಿಟಾಟ್ಸ್ ಶಾಲೆಯ ಎರಡನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಉತ್ತಮವಾದ ಕೆಲಸ ಮಾಡುತ್ತಿರುವ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ, ಅದೇ ರೀತಿ ಮಕ್ಕಳಿಗೆ ಪೋಷಕರು ಹಾಗೂ ತಂದೆ ತಾಯಿಗಳು ಉತ್ತಮವಾದ ಸಂಸ್ಕಾರ ನೀಡಿ ಭವಿಷ್ಯದ ನಾಗರಿಕರನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳನ್ನು ಕೇವಲ ಅಂಕಗಳಿಸುವ ರೋಬೋಟ್ ಯಂತ್ರಗಳನ್ನಾಗಿ ತಯಾರುಮಾಡದೆ ಪಠ್ಯದ ಜತೆಗೆ ಮಾನವೀಯ ಮೌಲ್ಯಗಳು ಹಾಗೂ ಪರೋಪಕಾರ ಗುಣಗಳನ್ನು ತುಂಬಿ ಸಮಗ್ರವಾಗಿ ಮಕ್ಕಳ ವ್ಯಕ್ತಿತ್ವ ವಿಕಾಸವಾಗುವಂತೆ ಮಾಡಿ ಸಾಧನೆ ಮಾಡಲು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ತಂದೆ ತಾಯಿಗಳು ಹಾಗೂ ಗುರು ಹಿರಿಯರಿಗಿಂತ ಬೇರೆ ಯಾವುದೇ ದೇವರಿಲ್ಲ ಎಂಬ ಸತ್ಯವನ್ನು ಸಾರಿ ಹೇಳಬೇಕು ಎಂದು ಸೇತುರಾಮ್ ಕಿವಿ ಮಾತು ಹೇಳಿದರು.
ಲೆಫ್ಟಿನೆಂಟ್ ಕರ್ನಲ್ ತಹಶೀಲ್ದಾರ್ ಡಾ.ಅಶೋಕ್ ಹಾಗೂ ನಾಡಿನ ನ್ಯಾಯವಾದಿ ಡಾ. ರಮಾ ಐಯ್ಯರ್ ಹಾಗೂ ಕಿರುತೆರೆ ಕಲಾವಿದರಾದ ಸೇತುರಾಮ್ ಅವರಿಗೆ “ದೇವ ತುಷ್ಟ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ತಹಸೀಲ್ದಾರ್ ಡಾ.ಅಶೋಕ್, ಪ್ರತಿಷ್ಠಾನದ ಅಧ್ಯಕ್ಷ ಗೋಪಾಲ ಕೃಷ್ಣ ಅವಧಾನಿಗಳು, ಉಪಾಧ್ಯಕ್ಷೆ ಭಾರತೀಪುರ ಕೌಸ್ತುಭಾ ಭಾರತೀಪುರಂ, ಮುಖ್ಯಶಿಕ್ಷಕಿ ನಿವೇದಿತಾ ಮಾತನಾಡಿದರು. ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ರಂಜಿಸಿತು.