NEWSನಮ್ಮಜಿಲ್ಲೆನಮ್ಮರಾಜ್ಯ

ಗ್ರೀನ್ ಬರ್ಡ್ಸ್ ಠೇವಣಿದಾರರ ಹೋರಾಟದ ಸಾಧನೆ: ನೂರಾರು ಕೋಟಿ ರೂ. ಆಸ್ತಿ ಹರಾಜು ಪ್ರಕ್ರಿಯೆಗೆ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಲಕ್ಷಾಂತರ ಕೂಲಿ ಕಾರ್ಮಿಕರು, ಬಡವರು, ರೈತರು ಠೇವಣಿ ಮಾಡಿ ಹೂಡಿಕೆ ಮಾಡಿದ್ದ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿ ವಂಚನೆ ಪ್ರಕರಣದ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡಿದ ಸಾಧನೆಯಿಂದ ಗ್ರೀನ್ ಬರ್ಡ್ಸ್ ಸಂಸ್ಥೆಯ ಆಸ್ತಿಗಳ ಹರಾಜು ಪ್ರಕ್ರಿಯ ಮುಂದಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಇಂದು (ಜ.5) ಕುವೆಂಪು ಉದ್ಯಾನವನದ ಬಳಿ ಆಯೋಜಿಸಿದ್ದ ಮೈಸೂರು ಜಿಲ್ಲೆಯ ಗ್ರೀನ್ ಬರ್ಡ್ಸ್ ಠೇವಣಿದಾರರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 150 ಕೋಟಿ ರೂಪಾಯಿ ಆಸ್ತಿ ಹರಾಜಿಗೆ ರಾಜ್ಯ ಸರ್ಕಾರ ನೇಮಕ ಮಾಡಿದ ವಿಶೇಷ ಪ್ರಾಧಿಕಾರದ ಮುಖ್ಯಸ್ಥ ಆದಿತ್ಯ ಬಿಸ್ವಾಸ್ ಆಸ್ತಿ ಹರಾಜು ಪ್ರಕ್ರಿಯೆ ನಡೆಸಲು ಬಹಿರಂಗ ಪ್ರಕಟಣೆ ಹೊರಡಿಸಿದ್ದಾರೆ.

ಆದರೆ ಪ್ರಕಟಣೆ ಹೊರಡಿಸಿರುವ ಆಸ್ತಿಗಳ ಮೌಲ್ಯ ಇಂದು ದುಪ್ಪಟ್ಟು ಏರಿಕೆಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸ್ಪರ್ಧಾತ್ಮಕವಾಗಿ ಖರೀದಿ ಮಾಡಿದರೆ ಸುಮಾರು 1,40,000 ಠೇವಣಿ ದಾರರಿಗೆ ಹೂಡಿಕೆ ಮಾಡಿರುವ ಠೇವಣಿ ಹಣ ಖಚಿತವಾಗಿ ಸಿಗುತ್ತದೆ ಹಾಗೂ ಆಸ್ತಿಗಳು ಕೂಡ ಫಲವತ್ತಾದ ಭೂಮಿಯಾಗಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ.

ತಮ್ಮೆಲ್ಲರ ನಿರಂತರ ಹೋರಾಟದ ಫಲದಿಂದ ವಂಚನೆಗೆ ಒಳಗಾಗಿದ್ದ ಒಂದು ಲಕ್ಷ ಅರವತ್ತು ಸಾವಿರ ಗ್ರಾಮೀಣ ಬಡ ಜನರಿಗೆ, ಮಹಿಳೆಯರಿಗೆ, ಠೇವಣಿ ಹಣ ವಾಪಸ್ ಬರುವ ಸೂಚನೆಗಳು ಕಂಡುಬರುತ್ತಿವೆ. ಈ ಬಗ್ಗೆ ಠೇವಣಿದಾರರು ಚಿಂತನೆ ನಡೆಸಿ ಹೆಚ್ಚು ಜನ ಹರಾಜು ಖರೀದಿಯಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಇದೇ ತಿಂಗಳು 12 ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹುರ ಮುಖ್ಯರಸ್ತೆಯಲ್ಲಿರುವ ಮಾದಾಪುರ ಗ್ರಾಮದ ತೆಂಗು, ಅಡಿಕೆ ತೋಟ ಹಾಗೂ ನಂಜನಗೂಡು ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಕೌಲಂದೆ ಗ್ರಾಮದಲ್ಲಿ ಸುಮಾರು 6 ಎಕರೆ ತೆಂಗಿನ ತೋಟ ಫಲವತ್ತಾದ ಭೂಮಿಯನ್ನು ಹರಾಜು ನಡೆಯುತ್ತಿದ್ದು ಆನ್ಲೈನ್ ನಲ್ಲಿ ಅರ್ಜಿ ಹಾಕಿಕೊಂಡು ಇದರ ಸದುಪಯೋಗವನ್ನು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ತಾಲೂಕಿನ ಜನತೆ ಖರೀದಿಯಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬರಡನಪುರ ನಾಗರಾಜ್, ಪುರ ಜಗದೀಶ್, ತಿ. ನರಸೀಪುರ ರೂಪ, ಪುಷ್ಪ, ತಗಡೂರು ಮಾದೇವಪ್ಪ, ಬ್ಯಾಳಾರ್ ಉಮೇಶ್, ಚಿನ್ನಂಬಳ್ಳಿ ನಿಂಗಣ್ಣ, ನಂಜನಗೂಡು ಗೀತಮ್ಮ, ತಗುಡೂರ್ ಗಿರಿಜಮ್ಮ, ಮಸಣಮ್ಮ, ಅರ್ತಲೆ ರಾಜು, ಕೆ.ಆರ್.ನಗರ ಕೆಎಂಎಸ್, ಹುಣಸೂರು ನಂದನ್ ಕುಮಾರ್, ಕೆ.ಆರ್. ಪೇಟೆ ಮಂಜು, ಎಚ್.ಡಿ.ಕೋಟೆ ಚಿಕ್ಕರಂಗನಾಯಕ, ಶಿವರಾಜ್, ನೂರಾರು ಠೇವಣಿದಾರರು, ಗ್ರೀನ್ ಬರ್ಡ್ಸ್ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿ ಸದಸ್ಯರು ಇದ್ದರು.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ