NEWSನಮ್ಮಜಿಲ್ಲೆನಮ್ಮರಾಜ್ಯ

ವಾಯು ಮಾಲಿನ್ಯ ತಡೆಗಟ್ಟುವ ನೆಪದಲ್ಲಿ BMTC ಖಾಸಗಿ ಮಾಡಲು ಹೊರಟ ಸರ್ಕಾರ ನಡೆ ಖಂಡನೀಯ: CITU

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಾಯು ಮಾಲಿನ್ಯವನ್ನು ತಡೆಗಟ್ಟು ಉದ್ದೇಶದಿಂದ BMTC ನಿಗಮಕ್ಕೆ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆ ಮಾಡುವುದನ್ನು ಹಾಗೂ ಬೆಂಗಳೂರಿನ ಪ್ರಯಾಣಿಕರಿಗೆ ಸಂಸ್ಥೆಯ ಮೂಲಕ ಸಂಪೂರ್ಣವಾಗಿ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಿ ಸಾರಿಗೆ ಸೇವೆ ಒದಗಿಸುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಸಾರಿಗೆ ಸಚಿವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಫೆಡರೇಷನ್ (CITU) ಅಧ್ಯಕ್ಷ ಎಚ್‌.ಡಿ. ರೇವಪ್ಪ ತಿಳಿಸಿದ್ದಾರೆ.

ಆದರೆ, ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿ ಮಾಲೀಕತ್ವದಲ್ಲಿ ಸೇರ್ಪಡೆ ಮಾಡಿ ಖಾಸಗಿ ಚಾಲಕರು, ನಿರ್ವಹಣೆಯನ್ನು ಖಾಸಗಿಯಾಗಿಸಿ ನಮ್ಮ ಡಿಪೋಗಳ ಮೂಲಕ ಕಾರ್ಯಾಚರಣೆ ಮಾಡುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಕೇಂದ್ರದ BJP ಸರ್ಕಾರ ವಾಯು ಮಾಲಿನ್ಯವನ್ನು ನಿಯಂತ್ರಣ ಮಾಡುವ ಉದ್ದೇಶದ ಹೆಸರಿನಲ್ಲಿ FAME-2 ಯೋಜನೆಯಡಿ ಖಾಸಗಿ ಮಾಲೀಕರಿಗೆ 40 ಲಕ್ಷ ರೂ.ಗಳು ಮತ್ತು ಇದರ ಜತೆಗೆ ರಾಜ್ಯ ಸರ್ಕಾರವೂ ಅನುದಾನ ನೀಡಿ ಖಾಸಗಿಯವರ ಮಾಲೀಕತ್ವದಲ್ಲಿನ ಎಲೆಕ್ಟ್ರಿಕ್ ಬಸ್ಸುಗಳನ್ನು BMTC ಯಲ್ಲಿ ಕಾರ್ಯಾಚರಣೆ ಮಾಡಿಸಿ BMTC ನಿಗಮ ಅವರಿಗೆ ಕಿ.ಮೀ.ಗೆ ಈಗ ರೂ. 41 ಗಳನ್ನು ನೀಡಬೇಕು, ಇದು ಮುಂದೆ ಹೆಚ್ಚಳ ಆಗಬಹುದು ಎಂಬ ಒಪ್ಪಂದ ಮಾಡಿ ಕಾರ್ಯಾಚರಣೆ ಮಾಡುವ ಯೋಜನೆ ರೂಪಿಸಿದೆ.

ಈ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮೆಲ್ಲರ ತೆರಿಗೆ ಹಣವನ್ನು ಖಾಸಗಿಯವರಿಗೆ 50 ಲಕ್ಷಕ್ಕೂ ಮಿಗಿಲಾಗಿ ಅನುದಾನ ಕೊಟ್ಟು ಆ ಬಸ್ಸುಗಳು ಕಾರ್ಯಾಚರಣೆ ಮಾಡಿ ಅವರ ಲಾಭಕ್ಕಾಗಿ 1 ಕಿ.ಮೀ. ಗೆ ರೂ.41 ಗಳನ್ನು ಖಾತ್ರಿಯಾಗಿ BMTC ನಿಗಮ ನೀಡಿ – ನಮ್ಮ ಘಟಕಗಳಲ್ಲಿಯೇ ಜಾಗ ಕೊಟ್ಟು ಕಾರ್ಯಾಚರಣೆ ಮಾಡುವ ಉದ್ದೇಶವೇನಿದೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಇಂತಹ ನೀತಿಗಳ ಹಿಂದೆ ಖಾಸಗಿಯವರಿಗೆ ಈ ದೇಶದ ಜನರ ತೆರಿಗೆ ಹಣವನ್ನು ಅನುದಾನದ ರೂಪದಲ್ಲಿ ಕೊಟ್ಟು ಹಂತ- ಹಂತವಾಗಿ BMTC ಯನ್ನು ಖಾಸಗೀಕರಣ ಮಾಡುವ ಉದ್ದೇಶ ಕೇಂದ್ರದ BJP ಸರ್ಕಾರದ್ದಾಗಿದೆ. ಅಲ್ಲದೆ ಒಂದು ಖಾಸಗಿ ವಾಹನ ಕಾರ್ಯಾಚರಣೆಯಾದರೆ 4 ನೌಕರರ ಉದ್ಯೋಗ ಕಡಿತವಾಗುತ್ತದೆ ಎಂದು ಸಿಐಟಿಯು ಉಪಾಧ್ಯಕ್ಷ ಡಾ. ಕೆ.ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಇದೇ ರೀತಿ ಮುಂದುವರೆದರೆ BMTC ಯಲ್ಲಿ ಸುಮಾರು 30000 ಸಾವಿರ ಹುದ್ದೆಗಳು ಹಂತ- ಹಂತವಾಗಿ ಇಲ್ಲವಾಗುತ್ತವೆ. BMTC ವಾಹನಗಳು ಮಾಯವಾಗುತ್ತವೆ. ಉದ್ಯೋಗವೂ ಇಲ್ಲವಾಗುತ್ತೆ. BMTC ಯಲ್ಲಿನ ಸಾರ್ವಜನಿಕ ಆಸ್ತಿಯೂ ಖಾಸಗಿಯವರ ಪಾಲಾಗುತ್ತದೆ. BMTC ಬಸ್ಸುಗಳೂ ಮಾಯ- ಕಾರ್ಮಿಕರೂ ಮಾಯ- ಆಸ್ತಿಯೂ ಮಾಯ. ಬೆಂಗಳೂರಿನ ಸಾರ್ವಜನಿಕರು ಪ್ರಯಾಣಕ್ಕಾಗಿ ದುಬಾರಿ ಹಣ ನೀಡಿ ಖಾಸಗಿಯವರ ಸುಲಿಗೆಗೆ ಒಳಗಾಗಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

BMTC ಕೆಲವೇ ಡಿಪೋಗಳಿಂದ ಆರಂಭವಾಗಿ ಈಗ ಬೆಂಗಳೂರಿನ ಎಲ್ಲ ಮೂಲೆಗಳಲ್ಲಿ 50 ಕ್ಕಿಂತ ಹೆಚ್ಚು ಡಿಪೋಗಳನ್ನು ಹೊಂದಿದೆ. ನಗರದ ಹೃದಯ ಭಾಗದಲ್ಲಿ ಬೃಹತ್ ಬಸ್ ನಿಲ್ದಾಣ, ಹತ್ತಾರು TTMC ನಿಲ್ದಾಣಗಳು, ಇತರೆ ನೂರಾರು ಬಸ್‌ ನಿಲ್ದಾಣಗಳು ಹಾಗೂ 1000 ಎಕರೆಗಿಂತಲೂ ಅಧಿಕ ಭೂಮಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಇಷ್ಟೊಂದು ಅಗಾಧವಾದ ಆಸ್ತಿಯಾಗಲು ಲಕ್ಷಾಂತರ ನೌಕರರ ರಕ್ತ/ ಬೆವರಿನ ದುಡಿಮೆ ಹಾಗೂ ಅಧಿಕಾರಿಗಳ ಶ್ರಮದ ದುಡಿಮೆಯೂ ಸೇರಿದೆ. ಹತ್ತಾರು ಸಾವಿರ ಕೋಟಿ ರೂ.ಗಳಷ್ಷು ಅಪಾರ ಆಸ್ತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಬೃಹತ್ ಸಾರಿಗೆ ನಿಗಮವನ್ನು ಖಾಸಗಿಯವರಿಗೆ ಹಂತ- ಹಂತವಾಗಿ ಹಸ್ತಾಂತರಿಸುವ ಹುನ್ನಾರವನ್ನು BMTC ಯಲ್ಲಿ ದುಡಿಯುವ ನೌಕರರು ಹಾಗೂ ಜನತೆ ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಈಗಾಗಲೇ ಬೆಂಗಳೂರಿನ ದಕ್ಷಿಣದ MP ತೇಜಸ್ವಿಸೂರ್ಯ ಈ ಹಿಂದೆಯೆ BMTC ಯನ್ನು ಖಾಸಗಿಯವರಿಗೆ ವಹಿಸಿ ಅಂತ ಒತ್ತಾಯಿಸಿದ್ದಾರೆ. ಈ ನೀತಿ ಅದರ ಭಾಗವೇ ಆಗಿದೆ. BMTC ಯನ್ನು ಸಾರ್ವಜನಿಕ ( ಸರ್ಕಾರಿ) ಒಡೆತನದಿಂದ ಖಾಸಗಿ ಒಡೆತನಕ್ಕೆ ವರ್ಗಾಯಿಸುವ ನೀತಿಯನ್ನು CITU ತೀವ್ರವಾಗಿ ವಿರೋಧಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಮಂಜುನಾಥ್ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಖಾಸಗಿ ಮಾಲೀಕತ್ವದ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ವಿರುದ್ಧ/ BMTC ಯನ್ನು ಸರ್ಕಾರದ ಒಡೆತನದಲ್ಲಿ ಉಳಿಸಲು ಚಳವಳಿಯನ್ನು BMTC ನೌಕರರು ನಡೆಸುತ್ತೇವೆ. ಕೇಂದ್ರ ಸರ್ಕಾರ ನಿಜವಾಗಿಯೂ ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶವನ್ನೆ ಹೊಂದಿದ್ದರೆ ಖಾಸಗಿಯವರಿಗೆ ನೀಡುವ ಅನುದಾನವನ್ನು BMTC ಹಾಗೂ ಇತರೆ ನಿಗಮಗಳಿಗೆ ನೀಡಲಿ.

BMTC ನಿಗಮವೇ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಬೇಕು. ನಮ್ಮ ಚಾಲಕರು- ನಿರ್ವಾಹಕರು- ತಾಂತ್ರಿಕ ಸಿಬ್ಬಂದಿಗಳೇ ಕಾರ್ಯಾಚರಣೆ/ ನಿರ್ವಹಣೆ ಮಾಡಬೇಕೆಂದು ನಮ್ಮ ಸಂಘ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

BMTC ಆಡಳಿತ ವರ್ಗ ಘಟಕ- ವಿಭಾಗ- ಕೇಂದ್ರ ಕಚೇರಿ ಮಟ್ಟದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಚರ್ಚೆ ಮಾಡಿ ಬಗೆಹರಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ನೌಕರರ ಶೋಷಣೆ/ ಶ್ರಮಭಾರ ವಿಪರೀತ ಹೆಚ್ಚಳವಾಗಿದೆ. ಅಧಿಕಾರಶಾಹಿ ಕಪಿಮುಷ್ಟಿಯಲ್ಲಿ ನೌಕರರು ಸಿಲುಕಿ ನರಳುತ್ತಿದ್ದಾರೆ. ಇದರಿಂದ ನೌಕರರಲ್ಲಿ ತೀವ್ರ ಅತೃಪ್ತಿ ಬೆಳೆಯುತ್ತಿದೆ.

ಹೀಗಾಗಿ ನೌಕರರ ಸಮಸ್ಯೆಗಳನ್ನು ನೌಕರರ ಸಂಘಟನೆಗಳೊಂದಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ದ್ವಿಪಕ್ಷೀಯ ಮಾತುಕತೆಗಳನ್ನು ಆರಂಬಿಸಬೇಕೆಂದು ಒತ್ತಾಯಿಸುತ್ತೇವೆ. ಈ ಎಲ್ಲ ಕಾರಣಗಳಿಂದ CITU ಫೆಡರೆಷನ್ ಮುಖಂಡರು 26.12.2023 ರಂದು ವಿಧಾನ ಸೌಧದ ಬಳಿ 100 ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗೀಯವರ ಮಾಲೀಕತ್ವದಲ್ಲಿ BMTC ಯ ಮುಲಕ ಕಾರ್ಯಾಚರಣೆಗಾಗಿ ಸೇರ್ಪಡೆ ಮಾಡುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇನ್ನು ಸರ್ಕಾರಿ ಒಡೆತನದ BMTC ಯನ್ನು ಕೇಂದ್ರದ BJP ಸರ್ಕಾರ ದುರ್ಬಲಗೊಳಿಸುತ್ತಿರುವ ಕಾರ್ಯವನ್ನು ರಾಜ್ಯ ಸರ್ಕಾರ ಮುಂದುವರೆಸಬಾರದೆಂದು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ