ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ನೌಕರರ ಸಮಸ್ಯೆ ಆಲಿಸಬೇಕಾದ ಕೆಲ ಸಂಘಟನೆಗಳ ಮುಖಂಡರ ಹೆಸರಿನಲ್ಲಿ ಕೆಲವು ನೌಕರರು ಪ್ರಯೋಜನಕ್ಕೆ ಬಾರದ ಕಮೆಂಟ್‌ಗಳನ್ನು ಹಾಕಿಕೊಂಡು ಕಾಲಹರಣ ಮಾಡುತ್ತಿದ್ದಾರೆ.
ಒಂದು ಸಂಘಟನೆಯ ಪರ ಎಂದು ಯಾವುದೋ ಒಂದು ತನ್ನದಲ್ಲದ ಹೆಸರಿನಿಂದ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದ ಪ್ರಯೋಗ ಮಾಡುವುದು. ಮತ್ತೊಬ್ಬರು ಅದಕ್ಕೆ ವಿರುದ್ಧವಾಗಿ ಮತ್ತೊಂದು ಕಮೆಂಟ್ ಹಾಕುವುದು. ಹೀಗೆ 2-3 ಸಾರಿಗೆ ನೌಕರರರೆಂದು ಹೇಳಿಕೊಂಡು ರಚಿಸಿಕೊಂಡಿರುವ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಬಾಯಿಗೆ ಬಂದಂತೆ ಪದ ಪ್ರಯೋಗ ಮಾಡಿಕೊಂಡು ಒಬ್ಬರಿಗೊಬ್ಬರು ಅಪ್ಪ, ಅಮ್ಮ, ಅಕ್ಕ, ತಂಗಿ, ಹೆಂಡತಿ ಹೀಗೆ ಎಲ್ಲರನ್ನು ಬೆತ್ತಲಾಗಿಸುವ ಪದ ಪ್ರಯೋಗ ಮಾಡುವುದು ಎಷ್ಟರ ಮಟ್ಟಿಗೆ ಸರಿ ನೀವೆ ಯೋಚಿಸಿ.
ಇದನ್ನು ಗಮನಿಸಿದರೆ ಈ ನೌಕರರಿಗೆ ಕಾನೂನಿ ಅರಿವು ಇಲ್ಲ ಎಂಬುವುದು ಇದರಿಂದ ಗೊತ್ತಾಗುತ್ತಿದೆ. ಆದರೆ, ಇವರು ತಮ್ಮದೇ ಸಹೋದ್ಯೋಗಿಗಳ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡುವ ಬದಲಿಗೆ ಪ್ರಸ್ತುತ ಚಾಲನಾ ಸಿಬ್ಬಂದಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಿದ್ದರೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಇಷ್ಟೊತ್ತಿಗಾಗಲಲೇ ಒಂದು ಪರಿಹಾರವನ್ನು ನೀಡುತ್ತಿತ್ತೋ ಏನೋ?
ಆದರೆ, ಇಲ್ಲಿ ನೌಕರರಿಗೆ ಸಮಸ್ಯೆ ಆಗುತ್ತಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಡಬೇಕಾದ ನೌಕರರು ಬೇಡದ ವಿಚಾರವನ್ನು ಯಾವುದೋ ಸಂಘಟನೆ ಮತ್ತದಾರೋ ಸಂಘಟನೆಯ ಮುಖಂಡನ ಬಗ್ಗೆ ಅವಹೇಳನ ಮಾಡಿಕೊಂಡು ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆ.
ಈ ರೀತಿ ನಾವು ಬೈದಾಡಿಕೊಳ್ಳುತ್ತಿರುವುದರಿಂದ ಏನು ಪ್ರಯೋಜನವಾಗುವುದಿಲ್ಲ ಎಂದು ಈ ಮೂರ್ಖರಿಗೂ ಗೊತ್ತಿದೆ. ಆದರೂ ನಿತ್ಯ ಇದರಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಈ ರೀತಿಯ ಪ್ರಯೋಜನಕ್ಕೆ ಬಾರದ ಪದಗಳ ಪ್ರಯೋಗ ಬಿಟ್ಟು ನಿಮಗೆ ಅಂದರೆ ನೌಕರರಿಗೆ ಸಂಘಟನೆಗಳನ್ನು ಬಳಿಸಿಕೊಂಡು ಸಂಸ್ಥೆಯಿಂದ ಯಾವ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳ ಬಹುದು ಎಂಬುದರ ಬಗ್ಗೆ ಸೌಹಾರ್ದಯುತ ಚರ್ಚೆ ಮಾಡಿ.
ಇನ್ನು ಒಬ್ಬರು ವೇತನ ಆಯೋಗ ಮತ್ತೊಬ್ಬರು ಸಮಾನಂತರ ವೇತನ ಮೊಗದೊಬ್ಬರು 148/2005 ಆದೇಶದಂತೆ ಅಗ್ರಿಮೆಂಟ್ ಇವುಗಳು ಜಾರಿಯಾಗಬೇಕು. ಇದನ್ನು ನಿಮ್ಮ ಸಂಘಟನೆಯ ಮುಖಂಡ ಏಕೆ ಮಾಡಿಲ್ಲ, ದಮ್ಮು, ತಾಕತ್ತು ಇಲ್ಲವಾ? ಎಂದು ಪ್ರಶ್ನೆ ಮಾಡಿಕೊಂಡು ಕಾಲಕಳೆಯುವ ಬದಲಿಗೆ ನಿಮ್ಮ ಬೇಡಿಕೆ ಏನಿದೆಯೋ ಅದರ ಬಗ್ಗೆ ಹೋರಾಟ ಮಾಡುವುದು ಒಳ್ಳೆಯದು.
ಕೆಲವರಿಗೆ ಸರ್ಕಾರಿ ನೌಕರರಂತೆ ಹುದ್ದೆಗೆ ತಕ್ಕ ಸಮಾನ ವೇತನ, ಇಲ್ಲ ವೇತನ ಆಯೋಗ ಮಾದರಿಯನ್ನು ಸಾರಿಗೆ ನಿಗಮಗಳಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಒಲವು ಇದೆ. ಈ ರೀತಿಯ ಒಲವು ಮತ್ತು ಬೇಡಿಕೆ ಇರುವವರು ತಮ್ಮ ಬೇಡಿಕೆಗಳ ಈಡೇರಿಸಿಕೊಳ್ಳುವ ದಾರಿ ಯಾವುದು ಎಂಬುದರ ಬಗ್ಗೆ ಸುರ್ದೀಘವಾದ ಚರ್ಚೆ ಮಾಡಿ ನೌಕರರಿಗೆ ಅನುಕೂಲ ಆಗುವಂತೆ ಹೆಜ್ಜೆಹಾಕಿ.
ಅದೇ ರೀತಿ 148/2005 ರೀತಿ ಅಗ್ರಿಮೆಂಟ್ ಆದರೆ ಸಾರಿಗೆ ನೌಕರರು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಎಂದು ಹೇಳುವ ನೌಕರರು ಈ ಬಗ್ಗೆ ಹೈ ಕೋರ್ಟ್‌ನಲ್ಲಿ ಸ್ಟೇ ತಂದಿರುವುದನ್ನು ತೆರವುಗೊಳಿಸುವುದು ಹೇಗೆ ಈಗ ಅದನ್ನು ತೆರವುಗೊಳಿಸಬಹುದೇ, ಒಂದು ವೇಳೆ ತೆರವು ಗೊಳಿಸಲು ಆಗದಿದ್ದರೆ ನಾವು ಇದನ್ನು ಅನುಷ್ಠಾನಗೊಳಿಸಲು ಏನು ಮಾಡಬೇಕು? ಯಾರನ್ನು ಸಂಪರ್ಕಿಸಿದರೆ ಇದು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಿ.
ಇದಾವುದನ್ನು ಮಾಡದೆ ಸುಖ ಸುಮ್ಮನೆ ಇಡೀ ನಿಮ್ಮ ಕುಟುಂಬದವರನ್ನು ಎಳೆದತಂದು ಅವರ ಮಾನ ಮರ್ಯಾದೆಯನ್ನು ಹಾಳು ಮಾಡುವ ಜತೆಗೆ ನಿಮ್ಮ ಘನತೆಯನ್ನು ನೀವೆ ಕಳೆದುಕೊಳ್ಳುವುದು ಎಷ್ಟು ಸರಿ? ಇನ್ನಾದರೂ ಇಂಥ ಕೆಲಸಕ್ಕೆ ಬಾರದ ಚರ್ಚೆಗೆ ಪೂರ್ಣ ವಿರಾಮ ಹಾಕಿ. ನಿಮಗೂ ಸೇರಿದಂತೆ ಎಲ್ಲ 1.07 ಲಕ್ಷ ನೌಕರರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಲ್ಲೀನರಾಗಬೇಕು.
ಇನ್ನಾರೂ ಈ ಬಗ್ಗೆ ಚರ್ಚಿಸುತ್ತೀರಿ ಎಂದು ಭಾವಿಸುತ್ತೇವೆ.
ಸಾರಿಗೆಯ ನೋಂದ ನೌಕರರು.