ಬೆಂಗಳೂರು: ಬಿಎಂಟಿಸಿ ಚನ್ನಸಂದ್ರ ಡಿಪೋ 21ರಲ್ಲಿ ಇಂದು ಬೆಳಗ್ಗೆಯಿಂದ ಆತ್ಮಹತ್ಯೆ ಮಾಡಿಕೊಂಡ ಚಾಲಕನ ಪಾರ್ಥಿವ ಶರೀರ ವಿಟ್ಟುಕೊಂಡು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದರೆ ಸಚಿವರಾಗಲಿ ಇಲ್ಲ ಸಂಸ್ಥೆಯ ಎಂಡಿಯಾಗಲಿ ಸ್ಥಳಕ್ಕೆ ರಾತ್ರಿ 8ಗಂಟೆಯಾದರೂ ಬಂದಿಲ್ಲ ಎಂದು ಅಹೋರಾತ್ರಿ ಧರಣಿ ಮಾಡಲು ಘೋಷಣೆ ಮಾಡಲಾಗಿತ್ತು.
ಆ ಬಳಿಕ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಧರಣಿ ಸತ್ಯಾಗ್ರಹ ನಿರತರನ್ನು ಮನವೊಲಿಸಿ ಪಾರ್ಥಿವ ಶರೀರವನ್ನು ಮೃತರ ಹುಟ್ಟೂರಾದ ಜಮಖಂಡಿಗೆ ಇಲಾಖೆ ವತಿಯಿಂದಲೇ ತೆಗೆದುಕೊಂಡು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಹೀಗಾಗಿ ನಾವು ಸತ್ಯಾಗ್ರಹವನ್ನು ಕೈ ಬಿಟ್ಟಿದ್ದೇವೆ ಎಂದು ಎಎಪಿ ಘೊಷಣೆ ಮಾಡಿದೆ.