ಪಿರಿಯಾಪಟ್ಟಣ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿರುವ ಕ್ರಮವನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ಬಿಗಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಅಣತಿಯಂತೆ ರಾಜ್ಯಪಾಲರು ರಾಜಕೀಯ ಪ್ರೇರಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಖಂಡನೀಯ ಇದಕ್ಕೆ ಕಾನೂನು ಮೂಲಕವೇ ನಮ್ಮ ಪಕ್ಷ ಉತ್ತರ ನೀಡಲಿದ್ದು, ಈಗಾಗಲೇ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ಕಾರ್ಯಕರ್ತರು ಎದೆಗುಂದ ಬಾರದು ಸಿದ್ದರಾಮಯ್ಯ ನವರ ಪರವಾಗಿ ಇಂಡಿಯಾ ಒಕ್ಕೂಟ ಸೇರಿದಂತೆ ರಾಜ್ಯ ಸರ್ಕಾರ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವವಕುಮಾರ್ ತಿಳಿಸಿ ಸೋಮವಾರದಿಂದ ರಾಜ್ಯಪಾಲರನ್ನು ಗೋಬ್ಯಾಕ್ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಪುರಸಭಾ ಮಾಜಿ ಅಧ್ಯಕ್ಷ ವಿಷಕಂಠಯ್ಯ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಚ್.ಡಿ.ಗಣೇಶ್, ಮುಖಂಡರಾದ ಎ.ಕೆ.ಗೌಡ, ಕೆಲ್ಲೂರು ನಾಗರಾಜ್, ಪಿ.ಮಹದೇವ್, ಈರಯ್ಯ, ಪಿ.ಪಿ.ಪುಟ್ಟಯ್ಯ, ಭೂತನಹಳ್ಳಿ ಶಿವಣ್ಣ.
ಜಮೃದ್ ಪಾಷಾ, ಮೆಡಿಕಲ್ ಮಹಾದೇವ್, ಅಯ್ಯರ್ ಗಿರಿ, ಎಂ.ಮಂಜು, ಎಲೆಮಂಜು, ಮಹೇಂದ್ರ ಕುಮಾರ್, ಮಲ್ಲೇಗೌಡ, ಈಚೂರು ಲೋಕೇಶ್, ಮುತ್ತಿನಮಳುಸೋಗೆ ಶಿವಕುಮಾರ್, ಹುಣಸವಾಡಿ ಹರೀಶ್, ಶಿವರುದ್ರ, ಹೆಮ್ಮಿಗೆ ಕೃಷ್ಣ, ಅನಿತಾ ತೋಟಪ್ಪ ಶೆಟ್ಟಿ, ಸರಸ್ವತಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.