
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಆಗುತ್ತಿರುವ ಆರ್ಥಿಕ ಲಾಸ್ ಅನ್ನು ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಕೊಡಿಸುವುದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಹತ್ತಿರ ಸುದೀರ್ಘವಾಗಿ ನಾವು ಮಾತುಕತೆ ನಡೆಸಿದ್ದೇವೆ. ಆದರೆ ಸರ್ಕಾರ ನಮ್ಮ ಮಾತು ಕೇಳುತ್ತಿಲ್ಲ ಎನ್ನುವ ಮುಖಂಡರಿಗೆ ನೌಕರರ ಹಿತಕ್ಕಿಂತ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಮುಖ್ಯವಾಗುತ್ತಿದೆಯೇ?
ನಾವು ನೌಕರರ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದು, ನಮ್ಮ ಮನವಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಒಂದಷ್ಟು ದಿನಗಳು ಕಾದು ನೋಡುವ ಎಂಬ ಹೇಳಿಕೆ ನೀಡಿ ಎಲ್ಲ ಸಮಸ್ಯೆಗಳನ್ನು ಜೀವಂತವಾಗಿರಿಸಿಕೊಂಡು ಕಾಲ ದೂಡುತ್ತಿರುವುದಕ್ಕೆ ಎಲ್ಲ ಸಂಘಟನೆಗಳ ಮುಖಂಡರಿಗೂ ನಾಚಿಕೆಯಾಗುತ್ತಿಲ್ಲವೇ?
ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳ ಮತ್ತು ಸಾರಿಗೆ ಸಚಿವರ ಭರವಸೆಗೆ ಮನ್ನಣೆ ಕೊಟ್ಟು, ಇಷ್ಟು ದಿನ ಕಾದು ನಮ್ಮ ಎಲ್ಲ ನೌಕರರನ್ನು ಮನವೊಲಿಸಿ ಕೊಂಡು ಬಂದಿದ್ದೇವೆ. ಆದರೆ ಈಗ ಎಲ್ಲ ಮುಗಿಯುತ್ತಾ ಬಂದಿದೆ. ಹಾಗಾಗಿ ನಮ್ಮ ನೌಕರರ ಸುರಕ್ಷತೆ ಗೋಸ್ಕರ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಲೇ ಬೇಕು ಎಂದು ಏಕೆ ನಿರ್ಧಾರ ಮಾಡಿಲ್ಲ.
ಹೈ ಕೋರ್ಟ್ ನಲ್ಲಿ ಒಂದು ಪ್ರಕರಣವನ್ನು ಎಲ್ಲರೂ ಸೇರಿ ಏಕೆ ದಾಖಲಿಸಿಲ್ಲ. (ಇದು ಸರ್ಕಾರದ ವಿರುದ್ಧ ಅಲ್ಲ ನಮ್ಮ ನೌಕರರ ಭವಿಷ್ಯಕ್ಕಾಗಿ ). ಈ ವಿಚಾರವಾಗಿ ಕೇಲವೊಬ್ಬರು ಬೇರೆ ಬೇರೆ ರೂಪ ಕೊಟ್ಟು ಬೇರೆ ಲೇಪನಹಚ್ಚಿ ನೌಕರರ ದಿಕ್ಕು ತಪ್ಪಿಸುವಂತಾ ಎಲ್ಲ ಕೆಲಸ ಮಾಡುವುದಕ್ಕೆ ಮಾತ್ರ ಮುಂದಾಗುವುದು ಏಕೆ?
ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವುದನ್ನು ಸರ್ಕಾರದೊಂದಿಗೆ ಮಾತುಕತೆ ಮೂಲಕ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಕೋರ್ಟ್ ಮೂಲಕ ಕೊಡಿಸುವ ತಾಕತ್ತು ಸಂಘಟನೆಗಳಿಗೆ ಇಲ್ಲವೇ? ಹೀಗೆ ಕೈಕಟ್ಟಿ ಇನ್ನೂ ಎಷ್ಟು ದಿನ ಕುಳಿತಿರುತ್ತೀರಿ ಹೇಳಿ?
ನಿಮ್ಮ ಈ ನಡೆಯಿಂದ ನೌಕರರು ದಿನದಿಂದ ದಿನಕ್ಕೆ ಜರ್ಜರಿತರಾಗುತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಇಂತಹ ಪರಿಸ್ಥಿತಿಯಲ್ಲೂ ನೌಕರರ ಹಿತ ಬಯಸದೆ ಈಗಲೂ ತಮ್ಮ ಸ್ವಹೀತಾಸಕ್ತಿಗಾಗಿ ಪರಿಸ್ಥಿತಿಯ ಲಾಭ ಪಡೇಯಲಿಕ್ಕೆ ಹೊರಡುವುದು ಹಾಗೂ ಹೋರಾಟ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲಾ?

ಕೆಲವೊಂದು ಸಂಘಟನೆಗಳು ಇವತ್ತು ಹಣ ಮಾಡುವುದಕ್ಕೇ ಹೊರಟಿರುವಂತೆ ನಡೆದುಕೊಳ್ಳದೆ, ಜತೆಗೆ ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪಗಳನ್ನು ಮಾಡದೆ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದಕ್ಕೆ ಮುಂದಾಗಿ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ನೌಕರರಿಗೆ ಕೊಡಬೇಕಿರುವ ಎಲ್ಲ ಸೌಲಭ್ಯಗಳನ್ನು ಕೊಟ್ಟೇ ತೀರಬೇಕು. ಇದು ನಿಮಗೆ ಅರ್ಥವಾಗದ ವಿಷಯವೇನಲ್ಲ. ಆದರೂ ನೀವು ಉದಾಸೀನತೆ ಪ್ರದರ್ಶನ ಮಾಡುತ್ತಿರುವುದು ಸರಿಯಲ್ಲ.
ಇನ್ನು ಪ್ರಮುಖವಾಗಿ ಒಕ್ಕೂಟದ ಪದಾಧಿಕಾರಿಗಳು ಓಡಾಡಿ ಎಲ್ಲ ರೀತಿಯ ಪ್ರಯತ್ನ ಮಾಡುವ ಮೂಲಕ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ಕೊಡಿಸಬೇಕು. ಕಾರಣ ಬಹುತೇಕ ಶೇ.99 ರಷ್ಟು ಅಧಿಕಾರಿಗಳು/ನೌಕರರಿಗೆ ಬೇಕಿರುವುದು ಸರಿ ಸಮಾನ ವೇತನ. ಅದನ್ನು ಕೊಡಿಸಲು ಕಟಿಬದ್ಧರಾಗಿ ದೃಢ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಅಲ್ಲದೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೂಡ ತಾವು ಸರಿ ಸಮಾನ ವೇತನ ಬೇಡ ಅದಕ್ಕಿಂತಲ್ಲೂ ಹೆಚ್ಚು ವೇತನ ನಮ್ಮ ನೌಕರರಿಗೆ ಸಿಗಬೇಕು. ಕಾರಣ ಅವರು ತುಂಬಾ ಶ್ರಮಿಕರು ಎಂದು ಹೇಳುತ್ತಿದ್ದೀರಿ. ಆದರೆ ಸರಿ ಸಮಾನ ವೇತನಕ್ಕಿಂತಲು ಹೆಚ್ಚು ಹೆತನ ಕೊಡಿಸುವ ಹೇಳಿಕೆ ಮಾತ್ರ ನೀಡುತ್ತಿದ್ದೀರಿ. ಅದನ್ನು ಹೇಗೆ ಕೊಡಿಸುತ್ತೇವೆ ಎಂಬುದನ್ನು ಈಗರೆಗೂ ವಿವರಿಸಿಲ್ಲ.
ಹೀಗಾಗಿ ತಾವು ನೌಕರರಿಗೆ ಹೆಚ್ಚಿಗೆ ವೇತನ ಕೊಡಿಸುವತ್ತ ಏಕೆ ಪ್ರಯತ್ನಪಡದೆ ಕಾರ್ಮಿಕಾ ಆಯುಕ್ತರ ಬಳಿ ರಾಜೀ ಸಂಧಾನ ಸಭೆ ಇದೆ ಎಂಬ ನೆಪಹೇಳಿಕೊಂಡು ಕಾಲಹರಣ ಮಾಡುತ್ತಿದ್ದೀರಿ ಈವರೆಗೂ ಗೊತ್ತಾಗುತ್ತಿಲ್ಲ. ಕಾರ್ಮಿಕಾ ಆಯುಕ್ತರ ಬಳಿ ಏನು ಆಗುತ್ತದೆ ಎಂಬುವುದು ನಿಮಗೆ ತಿಳಿಯದ ವಿಷಯವೇನಲ್ಲ. ಆದ್ದರಿಂದ ಈಗಲಾದರೂ ನೌಕರರಿಗೆ 38 ತಿಂಗಳ ಹಿಂಬಾಕಿ ಮತ್ತು 2024ರಿಂದ ಆಗಬೇಕಿರುವ ವೇತನ ಹೆಚ್ಚಳದ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡು ನೌಕರರಿಗೆ ಅನುಕೂಲ ಮಾಡಿಕೊಡುವ ನಿಟಿನಲ್ಲಿ ಮುಂದಾಗಿ.
Related
