NEWSದೇಶ-ವಿದೇಶನಮ್ಮರಾಜ್ಯ

FASTag ಇಲ್ಲದವರಿಗೆ‌ ಗುಡ್‌ನ್ಯೂಸ್‌: UPI ಪಾವತಿಗೆ ಭಾರಿ ರಿಯಾಯಿತಿ -ನ.15 ರಿಂದ ಹೊಸ ಟೋಲ್

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಟೋಲ್ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸುತ್ತಿದ್ದು, ನ.15ರಿಂದ ಈ ಹೊಸ ಟೋಲ್ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದೆ.

ಹೌದು! ಫಾಸ್ಟ್‌ ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ಫಾಸ್ಟ್‌ ಟ್ಯಾಗ್‌ (FASTag) ಹೊಂದದೇ ಇರುವ ವಾಹನಗಳು ನ.15ರಿಂದ ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದ್ರೆ ಅವು ಎರಡುಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದ್ರೆ ಯುಪಿಐ (UPI) ರೂಪದಲ್ಲಿ ಶುಲ್ಕ ಪಾವತಿಸುವವರಿಗೆ ನಿಗದಿಗಿಂತ 1.25 ಪಟ್ಟು ಅಧಿಕ ಶುಲ್ಕ ವಿಧಿಸಲಾಗುತ್ತದೆ.

ಫಾಸ್ಟ್‌ಟ್ಯಾಗ್‌ ಬಳಕೆದಾರರಲ್ಲದವರಿಗೆ ಅವರ ಟೋಲ್ ಶುಲ್ಕ ಪಾವತಿಯ ವಿಧಾನವನ್ನ ಆಧರಿಸಿ ವಿಭಿನ್ನ ಶುಲ್ಕಗಳನ್ನು ವಿಧಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಹಾಗೂ ಆದಾಯ ನಿರ್ಧಾರ) ನಿಯಮಗಳು, 2008 ಅನ್ನು ತಿದ್ದುಪಡಿಗೊಳಿಸಿದೆ.

ಟೋಲ್‌ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿ ಉತ್ತೇಜಿಸುವುದು ಹಾಗೂ ನಗದು ಬಳಕೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಟೋಲ್‌ ಪ್ಲಾಜಾಗಳಲ್ಲಿ ನಗದು ವಹಿವಾಟು ಕಡಿಮೆಮಾಡಲು ಈ ಬದಲಾವಣೆ ತರಲಾಗಿದ್ದು, ನವೆಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಲ್ಲದೇ ಡಿಜಿಟಲ್‌ ಪಾವತಿ ಮಾಡುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳುವ ಜೊತೆಗೆ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ. ಹೆದ್ದಾರಿ ಬಳಕೆದಾರರ ಪ್ರಯಾಣದ ಸಮಯ ಉಳಿತಾಯ ಕೂಡ ಇದರಿಂದ ಆಗಲಿದೆ.

ಉದಾಹರಣೆಗೆ: ಫಾಸ್ಟ್‌ಟ್ಯಾಗ್ ಮೂಲಕ ವಾಹನದ ಟೋಲ್ ಶುಲ್ಕ 100 ರೂ. ಆಗಿದ್ದರೆ, ನಗದು ರೂಪದಲ್ಲಿ ಪಾವತಿಸಿದರೆ 200 ರೂ. ಆಗುತ್ತದೆ, ಆದರೆ UPI ಮೂಲಕ ಡಿಜಿಟಲ್ ಆಗಿ ಪಾವತಿಸಿದರೆ 125 ರೂ. ಮಾತ್ರ ಆಗುತ್ತದೆ. ಇದರರ್ಥ ನವೆಂಬರ್ 15 ರಿಂದ FASTag ಅಲ್ಲದ ಬಳಕೆದಾರರು UPI ಮೂಲಕ ಪಾವತಿ ಮಾಡಿದ್ರೆ 100 ರೂ.ಗಳಲ್ಲಿ 75 ರೂ. ಉಳಿತಾಯ ಮಾಡಬಹುದಾಗಿದೆ.

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ