NEWSನಮ್ಮಜಿಲ್ಲೆಸಿನಿಪಥ

ನಿರೂಪಕಿ ಅಪರ್ಣಾಗೆ ಇನ್ನಷ್ಟು ಖ್ಯಾತಿ ಹೆಚ್ಚಿಸಿದ್ದ ಮಜಾ ಟಾಕೀಸ್​..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಜಾ ಟಾಕೀಸ್​ ಮೂಲಕವೂ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಿರೂಪಕಿ ಅಪರ್ಣಾ ಅವರು ತಮ್ಮ ಮಾಧುರ್ಯದ ಧ್ವನಿಪಟಲದಿಂದ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದರಲ್ಲೇ ಖ್ಯಾತಿ ಗಳಿಸಿದ್ದ ನಿರೂಪಕಿ. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರಂತೆ. ಅದು ಅಭಿಮಾನಿಗಳಿಗೆ ಗೊತ್ತಿರಲಿಲ್ಲ. ಆದರೆ, ಆ ಸುದ್ದಿ ಕೇಳಿ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.

ಹೌದು, ಕನ್ನಡವನ್ನು ಸ್ಪಷ್ಟವಾಗಿ ಮಾತಾಡುತ್ತಿದ್ದ ಚಲುವೆ ಅಪರ್ಣಾ ಅವರು ನೋಡುವುದಕ್ಕೂ ಅಷ್ಟೇ ಸುಂದರವಾಗಿದ್ದರು. ಇನ್ನು ಬಿಗ್​ಬಾಸ್​ ಸೀಸನ್​ 1ಕ್ಕೆ ಎಂಟ್ರಿ ಕೊಟ್ಟಿ ಅದರಲ್ಲೂ ಮಿಂಚಿದ್ದರು. ಆ ಬಳಿಕವೂ ಹಲವು ಕಾರ್ಯಕ್ರಮಳಲ್ಲಿ ಅವರು ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ನಟ ಸೃಜನ್ ಲೋಕೇಶ್ ಬ್ಯಾನರ್‌ನಡಿ ಮೂಡಿಬಂದ ‘ಮಜಾ ಟಾಕೀಸ್’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.

ಅದರಲ್ಲೂ ಕೂಡ ನಿರೂಪಕಿ ಅಪರ್ಣಾ ಅವರು ಅತಿ ಹೆಚ್ಚು ಖ್ಯಾತಿ ಪಡೆದುಕೊಂಡರು. ಇನ್ನು ವಿಶೇಷ ಎಂದರೆ ನಿರೂಪಕಿ ಅಪರ್ಣಾ ಅವರನ್ನು ಖುದ್ದು ನಟ ಸೃಜನ್ ಲೋಕೇಶ್ ಅವರೇ ಈ ಶೋಗೆ ಬರುವಂತೆ ಒತ್ತಾಯ ಮಾಡಿದ್ದರು. ಇದಾದ ಬಳಿಕ ಮಜಾ ಟಾಕೀಸ್​ನಲ್ಲಿ ವರಲಕ್ಷ್ಮೀ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದರು.

ಇನ್ನು ವರಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದ ಅಪರ್ಣಾ ಅವರ ಸಲ್ಲು, ಒಬಾಮಾ ಕಾಲ್ ಮಾಡೋದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮೂಲಕ ಕೂಡ ಅಭಿಮಾನಿ ಬಳಗವನ್ನು ಇನ್ನಷ್ಟು ಗಳಿಸಿಕೊಂಡಿದ್ದರು. ವರಲಕ್ಷ್ಮೀ ಪಾತ್ರ ಮಾಡಿದ ಮೇಲೆ ಅವರ ನಿಜ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿದ್ದವು. ಈ ಮಜಾ ಟಾಕೀಸ್​ ಮಾಡಿದ ಮೇಲೆ ಕಾಮಿಡಿ ಸಿನಿಮಾಕ್ಕೆ ಆಫರ್ ಬಂದಿತಂತೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ