ಯಾದಗಿರಿ : ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು ಪಕ್ಷದ ಜಿಲ್ಲಾಧ್ಯಕ್ಷ ಶರಣಭೂಪಾಲ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಎದುರಿನಲ್ಲೇ ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾ ಪತ್ರಿಕಾ ಭವನ ಬಿಜೆಪಿ ಕಾರ್ಯಕರ್ತರ ಪೊಲಿಟಿಕಲ್ ಹೈಡ್ರಾಮಕ್ಕೆ ಸ್ಥಳವಾಗಿ ಕೆಲಹೊತ್ತು ಮಾರ್ಪಟ್ಟಿತ್ತು.
ಪಕ್ಷದ ಜಿಲ್ಲಾಧ್ಯಕ್ಷರ ನಡೆಗೆ ನಮಗೆ ಸರಿಕಾಣಿಸುತ್ತಿಲ್ಲ ಎಂದು ಆರೋಪಿಸಿದ ಕಾರ್ಯಕರ್ತರು ಜಿಲ್ಲಾಧ್ಯಕ್ಷನಿಗೆ ಘೇರಾವ ಹಾಕಿ ಹಿಗ್ಗಾಮುಗ್ಗಾ ಜಾಡಿಸಿದರು. ಪಕ್ಷ ಬೆಳೆಸಿದವರು ನಾವು ಆದ್ರೆ ನಮ್ಮನ್ನೆ ನಿರ್ಲಕ್ಷ್ಯ ಮಾಡುತ್ತಿರುವುದು ಪಕ್ಷ ಮುಂದಿನ ದಿನಗಳಲಲ್ಲಿ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ.
ಈಗ ನಮ್ಮನ್ನು ನಿರ್ಲಕ್ಷ್ಯ ಮಾಡಿರುವ ನಿಗಮಗೆ ಮುಂಧಿನ ದಿನಗಳಲ್ಲಿ ತಕ್ಕ ಪಾಠ ಕಳಿದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಅಧಿಕಾರ ಬೇಡ ಹಣ ಬೇಡ. ಆದ್ರೆ ಜಿಲ್ಲಾಧ್ಯಕ್ಷ ಜಿಲ್ಲೆಯಲ್ಲಿ ಪಕ್ಷದ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎಂಬ ಮಾಹಿತಿ ನೀಡುತ್ತಿಲ್ಲ ಎಂದು ಸಚಿವರ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಜಿಲ್ಲೆಗೆ ಬರುತ್ತಿರುವ ಹಾಗೂ ವಿಜಯ ಸಂಕಲ್ಪ ಯಾತ್ರೆ ಮಾಹಿತಿ ತಿಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಪತ್ರಿಕಾಗೋಷ್ಠಿ ನಡೆಸಲು ಆಗಮಿಸಿದ ಜಿಲ್ಲಾಧ್ಯಕ್ಷನಿಗೆ ಹಾಗೂ ಸಚಿವರಿಗೆ ಘೇರಾವ್ ಹಾಕಿ ಕಿಡಿಕಾರಿದರು.
ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಚೇತನ ಅವರು ಸಚಿವರ ಎದುರೆ ನಾನು ರಾಜೀನಾಮೆ ನೀಡುತ್ತೇವೆ ಎಂದು ಆಕ್ರೋಶ ಹೊರಕಾಕಿದ್ದು, ರಾಜೀನಾಮೆ ಪತ್ರವನ್ನೂ ಜತೆಗೆ ತಂದಿದ್ದರು. ಈ ಮೂಲಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ಜಿಲ್ಲೆಯಲ್ಲಿ ವಿಜಯ ಸಂಕಲ್ಪಯಾತ್ರೆ ನಡೆಯುವ ಮುನ್ನವೇ ಪೊಲಿಟಿಕಲ್ ಹೈಡ್ರಾಮ್ ಬಿಜೆಪಿಯಲ್ಲಿ ನಡೆದಿದ್ದು, ಶಿಸ್ತಿನ ಪಕ್ಷದಲ್ಲಿ ಕಾರ್ಯಕರ್ತರ ಅಸಮಧಾನ ಭುಗಿಲೆದ್ದಂತಾಗಿದೆ.