Please assign a menu to the primary menu location under menu

NEWSನಮ್ಮಜಿಲ್ಲೆ

KKRTC ವಿಜಯಪುರ: ನೌಕರನ ಮೇಲೆ ಅಧಿಕಾರಿಗಳ ದ್ವೇಷ: 2800 ರೂ. ಪಿಂಚಣಿ ಬದಲಿಗೆ 1039 ರೂ. ಬಿಡುಗಡೆ ಆರೋಪ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ಈ ಹಿಂದೆ ಇದ್ದ ಅಧಿಕಾರಿಗಳು ನನ್ನಗೆ ಬರಬೇಕಾದ ಪಿಂಚಣಿಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದ್ದಾರೆ ಎಂದು ನಿಗಮದ ನಿವೃತ್ತ ನೌಕರ ಬಿ.ಎನ್‌.ಹುಂಡೇಕರ್‌ ಆರೋಪಿಸಿದ್ದಾರೆ.

ನನಗೆ ಬರಬೇಕಿರುವ 2800 ರೂ. ಪಿಂಚಣಿಯ ಬದಲಿಗೆ 1039 ರೂಪಾಯಿ ಕೊಡುತ್ತಿದ್ದಾರೆ. ಈ ಮೂಲಕ ನನಗೆ ಅನ್ಯಾಯ ಮಾಡುವ ಜತೆಗೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೆ ಗಾಳಿಗೆ ತೂರಿದ್ದಾರೆ ಎಂದು ದೂರಿದ್ದಾರೆ.

ಇನ್ನು 2015ರಲ್ಲಿ ಇದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಕಾನೂನು ಅಧಿಕಾರಿಗಳು, ಲೆಕ್ಕಪತ್ರ ಅಧಿಕಾರಿಗಳು ನನಗೆ ತೊಂದರೆ ಮಾಡುವ ಉದ್ದೇಶದಿಂದಲೇ ನ್ಯಾಯಾಲಯ ತೀರ್ಪುನ್ನು ಕೂಡ ಪಾಲನೆ ಮಾಡದೆ ಈ ಅನ್ಯಾಯ ಎಸಗುತ್ತಿದ್ದಾರೆ.

ನನ್ನ ಜತೆ ನಿವೃತ್ತರಾದರು 2800 ರೂಪಾಯಿಗಳಿಗೂ ಹೆಚ್ಚು ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ನನಗೆ ಮಾತ್ರ ಕಡಿತಗೊಳಿಸಿ 1039 ರೂ.ಗಳು ಬರುವಂತೆ ಮಾಡಿದ್ದಾರೆ ಇದು ಅನ್ಯಾಯ ಈ ಬಗ್ಗೆ ಹಲವಾರು ಬಾರಿ ಎಂಡಿಗಳಿಗೂ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

2015ರಿಂದಲೂ ಈ ಬಗ್ಗೆ ಡಿಸಿ, ಕಾನೂನು ಅಧಿಕಾರಿಗಳು, ಲೆಕ್ಕಪತ್ರ ಅಧಿಕಾರಿಗಳು ಸೇರಿದಂತೆ ಬಹುತೇಕ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ನಾನು ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಪಟ್ಟ ಮೇಲಧಿಕಾರಿಗಳು ಈಗಲಾದರೂ ನನಗೆ ನ್ಯಾಯಯುತವಾಗಿ ಬರಬೇಖಿರುವುದನ್ನು ಕೊಡಿಸಬೇಕು ಎಂದು ಮನವಿ ಮಾಡುತ್ತೇನೆ.

ಇಲಾಖೆಯ ಲೆಕ್ಕಪತ್ರ ಅಧಿಕಾರಿಗಳು ತಪ್ಪಾಗಿರುವುದನ್ನು ಸರಿ ಮಾಡುವ ಬದಲಿಗೆ ಅದನ್ನು ಪಿಂಚಣಿ ಇಲಾಖೆಯ ಮೇಲೆ ಹಾಕುತ್ತಾರೆ ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿಭಾಗದ ಭದ್ರತಾ ಹಾಗೂ ಜಾಗೃತಾ ಇಲಾಖೆಯ ಅಧಿಕಾರಿಗಳ ಮೂಲಕ ತನಿಖೆ ಮಾಡಿಸಿ ನನಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡಿಸಬೇಕು ಎಂದು ವಿನಂತಿ ಮಾಡಿದ್ದಾರೆ.

ಸಾರಿಗೆ ನಿಗಮಗಳಲ್ಲಿ ಕೆಲ ಮೇಲಧಿಕಾರಿಗಳು ಕೆಳ ಹಂತದ ನೌಕರರಿಗೆ ಈರೀತಿ ಮಾನಸಿಕವಾಗಿ ಹಿಂಸೆ ನೀಡುವುದರ ಜತೆಗೆ ಅವರನ್ನು ಆರ್ಥಿಕವಾಗಿ ಕುಗ್ಗುವಂತೆ ಮಾಡುವ ಕೆಲಸವನ್ನು ಈ ಹಿಂದಿನಿಂದಲೂ ನಿರಂತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ಈ ಬಗ್ಗೆ ನೌಕರರು ಎಚ್ಚೆತ್ತುಕೊಂಡು ನ್ಯಾಯಾಲಯದ ಮೆಟ್ಟಿಲೇರುತ್ತಿರುವುದರಿಂದ ಇಂಥ ಪ್ರಕರಣಗಳು ಕಡಿಮೆಯಾಗಿವೆ.

ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಈ ರೀತಿ ಕಿರುಕುಳವನ್ನು ನಿವೃತ್ತ ನೌಕರರಿಗೆ ಕೊಡುತ್ತಿರುವುದು ಬಹಳ ನೋವಿನ ಸಂಘತಿಯಾಗಿದೆ. ಹೀಗಾಗಿ ನಿಗಮದ ಎಂಡಿ ಅವರು ಈ ಬಗ್ಗೆ ವಿಶೇಷ ಕಾಳಜಿವಹಿಸಿ ನಿವೃತ್ತ ನೌಕರ ಬಿ.ಎನ್‌.ಹುಂಡೇಕರ್‌ ಅವರಿಗೆ ನ್ಯಾಯದೊರಕಿಸಿಕೊಡುವರೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ