CrimeNEWSನಮ್ಮಜಿಲ್ಲೆ

ಪ್ರಾಂಶುಪಾಲರ ಮೊಬೈಲ್ ಕಳವು ಮಾಡಿ ₹1.40 ಲಕ್ಷ ಎಗರಿಸಿದ ಖದೀಮರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಗದಗ: ಪ್ರಾಂಶುಪಾಲರ ಮೊಬೈಲ್ ಕಳ್ಳತನ ಮಾಡಿದ್ದಲ್ಲದೇ ದುಷ್ಕರ್ಮಿಗಳು ಅದೇ ಮೊಬೈಲ್​ನ ಆನ್​ಲೈನ್ ಆ್ಯಪ್ ಮೂಲಕ 1.40 ಲಕ್ಷ ರೂ.ಗಳನ್ನು ರ್ಗಾವಣೆ ಮಾಡಿಕೊಂಡಿದ್ದಾರೆ.

ಈ ಘಟನೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರಾಂಶುಪಾಲರಾದ ಶ್ರೀಕಾಂತ ಕೃಷ್ಣಾಜಿ ಜೋಷಿ ಅವರು ಎಂದಿನಂತೆ ಕಾಲೇಜಿ​​ಗೆ ತೆರಳುತ್ತಿದ್ದರು. ಈ ವೇಳೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು 20 ಸಾವಿರ ರೂ. ಮೌಲ್ಯದ ಮೊಬೈಲನ್ನು​ ಪ್ರಾಂಶುಪಾಲರ ಜೇಬಿನಿಂದ ಕದ್ದಿದ್ದಾರೆ.

ಬಳಿಕ ಮೊಬೈಲ್​​ನಲ್ಲಿದ್ದ ಎಸ್​​ಬಿಐ ಖಾತೆಯ ಯುಪಿಐ ಬಳಸಿಕೊಂಡು ಬರೋಬ್ಬರಿ 1 ಲಕ್ಷದ 40 ಸಾವಿರ ರೂ.ಗಳನ್ನು ತಮ್ಮ ಅಕೌಂಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮೊದಲು 75 ಸಾವಿರ ರೂ. 50 ಸಾವಿರ ರೂ. ಹಾಗೂ 15 ಸಾವಿರ ರೂ. ಎಂಬಂತೆ ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ಪ್ರಾಂಶುಪಾಲರ ಎಸ್​ಬಿಐ ಖಾತೆಯಿಂದ ಹಣವನ್ನು ಖದೀಮರು ಅಕೌಂಟ್​ಗೆ ಹಾಕಿಕೊಂಡಿದ್ದು, ಸದ್ಯ ಈ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

error: Content is protected !!
LATEST
ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ