NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನಿಗಮಗಳಿಗೆ 541 ಕೋಟಿ ತೆರಿಗೆ ವಿನಾಯಿತಿ ಘೋಷಣೆ ಓಕೆ, ವೇತನ ಹಿಂಬಾಕಿ ಯಾವಾಗ ಕೊಡುತ್ತೀರಾ ಸಿಎಂ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಳಿಗೆ ರಾಜ್ಯ ಸರ್ಕಾರ 541 ಕೋಟಿ ತೆರಿಗೆ ವಿನಾಯಿತಿ ಘೋಷಿಸಿದೆ. ಇದರಿಂದ ಸಾರಿಗೆ ಸಂಸ್ಥೆ ಇನ್ನಷ್ಟು ಸಮರ್ಪಕವಾದ ಸೇವೆ ನೀಡುವುದಕ್ಕೆ ಶಕ್ತಿ ಬಂದಂತಾಗಿದೆ.

ಈ ನಿಗಮಗಳಿಗೆ ಒಂದು ವರ್ಷದಲ್ಲಿ ಒಟ್ಟು 541.87 ಕೋಟಿ ರೂ.ಗಳಷ್ಟು ಮೋಟಾರು ವಾಹನ ತೆರಿಗೆಯಲ್ಲಿ ವಿನಾಯಿತಿ ಸಿಗಲಿದ್ದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಸ್ತಾಪಿಸಿರುವ ಈ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.

ಹೀಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮನಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಶಕ್ತಿ ಯೋಜನೆ ಕಾಂಗ್ರೆಸ್ ಪಕ್ಷದ ಚುನಾವಣಾ ಗ್ಯಾರಂಟಿಗಳಲ್ಲಿ ಒಂದಾಗಿತ್ತು. ಅಧಿಕಾರಕ್ಕೆ ಬಂದ ಬಳಿಕ ಹೆಚ್ಚು ತಡ ಮಾಡದೇ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತು.

ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸುವ ಸ್ಕೀಮ್ ಇದು. ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಎಲ್ಲ ನಾಲ್ಕು ಸಾರಿಗೆ ನಿಗಮನಗಳ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮ ಶ್ಲಾಘನೀಯವಾಗಿದೆ.

ಸಾರಿಗೆ ನಿಗಮನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ಸಿಗಲಿರುವ ವಿನಾಯಿತಿ; ಒಂದು ವರ್ಷದಲ್ಲಿ ಒಟ್ಟು ವಿನಾಯಿತಿ ಮೊತ್ತ: 541.87 ಕೋಟಿ ರೂ. ಅದರಲ್ಲಿ ಕೆಎಸ್ಆರ್​ಟಿಸಿ: 243.52 ಕೋಟಿ ರೂಪಾಯಿ ವಿನಾಯಿತಿ.

ಬಿಎಂಟಿಸಿ: 119.88 ಕೋಟಿ ರೂಪಾಯಿ ವಿನಾಯಿತಿ, ಎನ್​ಡಬ್ಲ್ಯುಕೆಆರ್​ಟಿಸಿ (ವಾಯವ್ಯ ಸಾರಿಗೆ ನಿಗಮ): 103.91 ಕೋಟಿ ರೂಪಾಯಿ ವಿನಾಯಿತಿ. ಕೆಕೆಆರ್​ಟಿಸಿ (ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ): 114.16 ಕೋಟಿ ರೂಪಾಯಿ ವಿನಾಯಿತಿ ಸಿಗಲಿದೆ.

ಸಾರಿಗೆ ನಿಗಮಗಳಿಗೆ ಮೋಟಾರು ವಾಹನದಲ್ಲಿ ತೆರಿಗೆ ವಿನಾಯಿತಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಂದಿನ ಸರ್ಕಾರ 1,500 ಕೋಟಿ ರೂ.ಗೂ ಹೆಚ್ಚು ಮೊತ್ತದಷ್ಟು ತೆರಿಗೆ ವಿನಾಯಿತಿ ನೀಡಿತ್ತು. ಶಕ್ತಿ ಯೋಜನೆಗೆ ಮೊದಲು ಸಾರಿಗೆ ನಿಗಮಗಳ ಒಟ್ಟಾರೆ ಆದಾಯ ಒಂದು ವರ್ಷದಲ್ಲಿ 8,000 ಕೋಟಿ ರೂ.ಗೂ ಹೆಚ್ಚು ಇತ್ತು.

ಸಬ್ಸಿಡಿ ಮತ್ತಿತರ ಕಾರಣಗಳಿಂದ 4,000 ಕೋಟಿ ರೂ.ಗೂ ಹೆಚ್ಚು ಆದಾಯ ನಷ್ಟ ಎದುರಾಗಿತ್ತು. ಇದರಲ್ಲಿ ಸಬ್ಸಿಡಿ ಮೊತ್ತವನ್ನು ಸರ್ಕಾರ ತುಂಬಿಸಿಕೊಡಬೇಕು. ಆದರೆ, ವಿವಿಧ ಸರ್ಕಾರಗಳು ಈವರೆಗೆ ಸಾವಿರಾರು ಕೋಟಿ ರೂ ಮೊತ್ತದಷ್ಟು ಸಬ್ಸಿಡಿ ಹಣವನ್ನು ಸಾರಿಗೆ ನಿಗಮಗಳಿಗೆ ವರ್ಗಾವಣೆ ಮಾಡದೇ ಬಾಕಿ ಉಳಿಸಿಕೊಂಡಿವೆ.

ಈ ಮಧ್ಯೆ ಶಕ್ತಿ ಸ್ಕೀಮ್​ನಿಂದ ನಿಗಮಗಳ ಆದಾಯಕ್ಕೆ ಇನ್ನಷ್ಟು ಖೋತಾ ಬಿದ್ದಿದೆ. 542 ಕೋಟಿ ರೂ ಮೋಟಾರು ತೆರಿಗೆ ವಿನಾಯಿತಿ ನೀಡುವ ಮೂಲಕ ಒಂದಷ್ಟು ನಷ್ಟದ ಹೊರೆಯನ್ನು ತಗ್ಗಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಆದರೆ, 2020ರ ಜನವರಿಯಿಂದ ನಿಗಮಗಳ ಅಧಿಕಾರಿಗಳು, ಸಿಬ್ಬಂದಿಗೆ ಹೆಚ್ಚಳವಾಗಿರುವ ವೇತನ ಹಿಂಬಾಕಿ ಕೊಡುವುದಕ್ಕೆ ಇನ್ನು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅಧಿಕಾರಿಗಳು ಅಮಸಮಾಧಾನ ಹೊರಹಾಕುತ್ತಿದ್ದಾರೆ.

Leave a Reply

error: Content is protected !!
LATEST
KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ... ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ: ಪುರಸಭೆ ಮಾಜಿ ಸದಸ್ಯ ನೀಲಕಂಠ ಕೆ.ಆರ್.ಪೇಟೆ: ಲೋಕಾ ಅದಾಲತ್‌ನಲ್ಲಿ ನೂರಾರು ಪ್ರಕರಣಗಳು ಇತ್ಯರ್ಥ