CrimeNEWSನಮ್ಮರಾಜ್ಯ

KSRTC: ಹಲ್ಲೆ ಆರೋಪ- ಡಿಎಂ, ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಟಿಕೆಟ್ ವಿಚಾರವಾಗಿ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದ ಪ್ರಯಾಣಿಕರೊಬ್ಬರ ಮೇಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಮತ್ತು ಸಿಬ್ಬಂದಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ಪೊಲೀಸ್‌ ಠಾಣೆ ಮಟ್ಟಿಲೇರಿರುವ ಘಟನೆ ಜರುಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜಿ. ರಾಘವೇಂದ್ರ ಎಂಬುವರು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಹಾಗೂ ಭದ್ರತಾ ಸಿಬ್ಬಂದಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಘವೇಂದ್ರ ಅವರು ದೂರು ನೀಡಿದ್ದು, ಕೆಎಸ್‌ಆರ್‌ಟಿಸಿ ಟರ್ಮಿನಲ್‌ 2 ಡಿಪೋ ವ್ಯವಸ್ಥಾಪಕ ಮತ್ತು ಅದೇ ಟರ್ಮಿನಲ್‌ನ ಭದ್ರತಾ ಸಿಬ್ಬಂದಿ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ವಿವರ: ಡಿ. 23ರಂದು ರಾತ್ರಿ ಬೆಂಗಳೂರಿನಿಂದ ಹಿರಿಯೂರಿಗೆ ಹೊರಟಿದ್ದ ರಾಘವೇಂದ್ರ, ಕೆಎಸ್‌ಆರ್‌ಟಿಸಿ 1ನೇ ಟರ್ಮಿನಲ್‌ಗೆ ಬಂದಿದ್ದರು. ಈ ವೇಳೆ ಹರಿಹರಕ್ಕೆ ಹೋಗುವ ಬಸ್‌ ಹತ್ತಿದ್ದರು. ಹಿರಿಯೂರಿಗೆ ಟಿಕೆಟ್ ನೀಡುವಂತೆ ನಿರ್ವಾಹಕರನ್ನು ಕೋರಿದ್ದರು. ಹಿರಿಯೂರಿನ ಒಳಗೆ ಬಸ್ ಹೋಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತದೆ ಎಂದು ನಿರ್ವಾಹಕ ಹೇಳಿದ್ದರು. ಹಿರಿಯೂರಿಗೆ ಟಿಕೆಟ್ ನೀಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಇಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಚಿತ್ರದುರ್ಗದ ಟಿಕೆಟ್ ಪಡೆದರೆ ಮಾತ್ರ, ಹಿರಿಯೂರಿನಲ್ಲಿ ಇಳಿಸುತ್ತೇನೆ ಎಂದು ನಿರ್ವಾಹಕ ಹೇಳಿದ್ದಾರೆ. ಹಿರಿಯೂರು ಬದಲು ಚಿತ್ರದುರ್ಗಕ್ಕೆ ಏಕೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ರಾಘವೇಂದ್ರ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸದ ನಿರ್ವಾಹಕ ಬಸ್‌ನಿಂದ ಇಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೇಳಿಕೆ ದಾಖಲೆಗಾಗಿ ಚಿತ್ರೀಕರಣ: ಡಿಪೋ ವ್ಯವಸ್ಥಾಪಕನ ಬಳಿ ಹೋಗಿದ್ದ ಪ್ರಯಾಣಿಕ ರಾಘವೇಂದ್ರ, ಟಿಕೆಟ್ ವಿಚಾರವನ್ನು ಪುನಃ ಪ್ರಶ್ನಿಸಿದ್ದರು. ‘ಹಿರಿಯೂರು ಟಿಕೆಟ್ ಇಲ್ಲ. ಚಿತ್ರದುರ್ಗಕ್ಕೆ ಪಡೆಯಬೇಕು ಎಂದು ವ್ಯವಸ್ಥಾಪಕ ತಿಳಿಸಿದ್ದರು ಎಂಬ ಅಂಶ ದೂರಿನಲ್ಲಿದೆ.

ವ್ಯವಸ್ಥಾಪಕನ ಹೇಳಿಕೆಯನ್ನು ದಾಖಲೆಗಾಗಿ ರಾಘವೇಂದ್ರ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸತೀಶ್, ರಾಘವೇಂದ್ರ ಅವರಿಗೆ ಲಾಠಿಯಿಂದ ಹೊಡೆದು ಕಾಲಿನಿಂದ ಎದೆಗೆ ಒದ್ದು ಎಳೆದಾಡಿ ಹಲ್ಲೆ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಮೊಬೈಲ್ ಸಹ ಕಸಿದುಕೊಂಡಿದ್ದ. ಸತೀಶ್ ಹಾಗೂ ವ್ಯವಸ್ಥಾಪಕ ಇಬ್ಬರು ಸೇರಿ ನನ್ನನ್ನು ಎಳೆದಾಡಿ ಕೊಠಡಿಯೊಳಗೆ ತಳ್ಳಿದ್ದರು. ‘ನಾನೂ ಹಿರಿಯೂರಿನವ. ಅಲ್ಲಿ ನನ್ನ ಅಣ್ಣ ರೌಡಿ ಇದ್ದಾನೆ. ನಿನ್ನನ್ನು ಕೊಲೆ ಮಾಡಿಸುತ್ತೇನೆ’ ಎಂದು ಸತೀಶ್ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆದರೆ, ಕೆಲ ನಾನ್‌ಸ್ಟಾಪ್‌ ಬಸ್‌ಗಳಲ್ಲಿ ಹಿರಿಯೂರಿಗೆ ಟಿಕೆಟ್‌ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪ್ರಯಾಣಿಕರು ಸಹ ತಿಳಿದುಕೊಳ್ಳಬೇಕು. ಅಲ್ಲದೆ ವಿಚಾರವನ್ನು ಅರಿಯದೆ ಈ ರೀತಿ ಗಲಾಟೆ ಮಾಡಿಕೊಳ್ಳಬಾರದು. ಜತೆಗೆ ಹಿರಿಯೂರಿನಲ್ಲಿ ನಿಲುಗಡೆ ಇಲ್ಲದಿದ್ದರೂ ಮಾನವೀಯತೆ ದೃಷ್ಟಿಯಿಂದ ನಿರ್ವಾಹಕರು ಇಳಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಇದನ್ನು ಅರಿಯದ ಪ್ರಯಾಣಿಕ ಈ ರೀತಿ ನಡೆದುಕೊಂಡು ದೂರು ನೀಡಿರುವುದರ ಸತ್ಯಾಸತ್ಯತೆ  ಪೊಲೀಸ್‌ ಅಧಿಕಾರಿಗಳ ವಿಚಾರಣೆಯಿಂದ ಬೆಳಕಿಗೆ ಬರಬೇಕಿದೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ