ಮಳವಳ್ಳಿ: ಕೊಳ್ಳೇಗಾಲದಲ್ಲಿ KSRTC ಬಸ್ ಹತ್ತುವ ವೇಳೆ ಬಸ್ ಡೋರ್ ಕಿತ್ತುಹಾಕಿದ 24 ಗಂಟೆಯೊಳಗೆ ಮಹಿಳೆಯರು ಮತ್ತೊಂದು ಬಸ್ ಡೋರ್ ಮುರಿದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಬಸ್ನಿಲ್ದಾನದಲ್ಲಿ ಜರುಗಿದೆ.
ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿದೆ ಜತೆಗೆ ಸೀಟಿಗಾಗಿ ಮಹಿಳೆಯರು ಕಚ್ಚಾಡಿಕೊಂಡಿದ್ದು, ಸೀಟ್ ಹಿಡಿಯುಲು ಭರದಲ್ಲಿ ನಾ ಮುಂದು ತಾ ಮುಂದು ಎಂದು ನೂಕಾಡಿಕೊಂಡು ಬಸ್ ಬಾಗಿಲು ಮುರಿದಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮಾಡುತ್ತಿದ್ದಂತೆ ಕೆಎಸ್ಆರ್ಟಿಸಿ ಬಸ್ಗಳು ತುಂಬಿ ತುಳುಕುತ್ತಿವೆ. ಬಹುತೇಕ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಲಗ್ಗೆ ಇಡುತ್ತಿದ್ದಾರೆ. ಇದರಿಂದ ಎಷ್ಟೋ ಪ್ರಯಾಣಿಕರು ಬಸ್ನಲ್ಲಿ ಜಾಗ ಇಲ್ಲದೇ ಪರದಾಡುತ್ತಿದ್ದಾರೆ.
ಶನಿವಾರ ಕೊಳ್ಳೇಗಾಲದಲ್ಲಿ ಕೆಎಸ್ಆರ್ಟಿಸಿ ಬಸ್ ಒಂದರ ಬಾಗಿಲು ಕಿತ್ತು ಬಂದಿತ್ತು. ಇದೀಗ ಅದೇ ರೀತಿಯ ಘಟನೆ ಮಳವಳ್ಳಿ ಪಟ್ಟಣದಲ್ಲಿ ಮರುಕಳಿಸಿದೆ. ಇನ್ನು ಎಲ್ಲೆಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೋ ಗೊತ್ತಿಲ್ಲ. ಆದರೆ, ಇಂಥ ಘಟನೆಯಿಂದ ಆದ ನಷ್ಟವನ್ನು ಚಾಲನಾ ಸಿಬ್ಬಂದಿಯ ಮೇಲೆ ಹಾಕದೆ ಹೋದರೆ ಸಾಕು ಎನ್ನುತ್ತಿದ್ದಾರೆ ನೌಕರರು.