NEWS

ವಿಶ್ವದ ಅತ್ಯಂತ ಚಿಕ್ಕ ವಯಸ್ಸಿನ ಕವಯತ್ರಿ ಅಮನಾಗೆ ಮತ್ತೊಂದು ಗರಿ- ವಿಶ್ವಕ್ಕೆ ಮಾದರಿ

ಅಂತಾರಾಷ್ಟ್ರೀಯ ವಿಶ್ವ ದಾಖಲೆಯಲ್ಲಿ ಹಾಗೂ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ಕಿರಿಯ ಲೇಖಕಿ ಪಟ್ಟಕ್ಕೇರಿದ ಅಮನಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಟವಾಡುವ ವಯಸ್ಸಿನಲ್ಲೇ ಮೂರು ಕವನ ಸಂಕಲನ ರಚಿಸಿ ಅತ್ಯಂತ ಕಿರಿಯ ಭಾರತೀಯ ಕವಯತ್ರಿ ಎಂಬ ಕೀರ್ತಿಗೆ ಪಾತ್ರವಾಗಿದ್ದ ವಿದ್ಯಾರ್ಥಿನಿ ಕುಮಾರಿ ಅಮನಾ ಜೆ.ಕುಮಾರ್. ಈಗ ಅಂತಾರಾಷ್ಟ್ರೀಯ ವಿಶ್ವ ದಾಖಲೆಯಲ್ಲಿ ಅತ್ಯಂತ ಕಿರಿಯ ಕವಿಯತ್ರಿ ಹಾಗೂ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಅತ್ಯಂತ ಕಿರಿಯ ಲೇಖಕಿ ಎಂದು ಗುರುತಿಸಲ್ಪಟ್ಟು ಹೊಸ ಎರಡು ದಾಖಲೆ ಬರೆದಿದ್ದಾರೆ.

ಕೆಎಸ್ಆರ್‌ಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಮಂಡಳಿ ಕಾರ್ಯದರ್ಶಿ ಡಾ.ಲತಾ ಟಿ.ಎಸ್. ಮತ್ತು ಜೈವಂತ್ ಕುಮಾರ್ ದಂಪತಿಯ ಪುತ್ರಿ ಅಮನಾ ಜೆ.ಕುಮಾರ್‌ ಹೊಸದಾಗಿ ಎರಡು ಅಂತಾರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಈ ಕಿರಿಯ ಲೇಖಕಿಯ ವಯಸ್ಸು 14.6 ವರ್ಷ ಈ ಬಾಲಕಿ ಇದೀಗ ಮೂರು ಪುಸ್ತಕಗಳನ್ನು ಸತತ ಮೂರು ವರ್ಷಗಳಲ್ಲಿ ಎರಡು ವಿವಿಧ ಭಾಷೆಗಳಲ್ಲಿ ಬರೆದಿದ್ದಾರೆ. ಈ ಮೂಲಕ ಕಿರಿಯ ಲೇಖಕಿ ಎಂದು ವಿಶ್ವಪ್ರಸಿದ್ದಿಯಾಗಿದ್ದಾರೆ.

ಅಮನಾ ಜೆ.ಕುಮಾರ್ ಪ್ರಸ್ತುತ ಬಿಷಫ್‌ ಕಾಟನ್ ಗರ್ಲ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಈಗಾಗಲೇ ಐದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಆಂಗ್ಲ ಭಾಷೆಯಲ್ಲಿ ಎರಡು ಹಾಗೂ ಹಿಂದಿಯಲ್ಲಿ ಒಂದು ಪುಸ್ತಕ ಬರೆದಿದ್ದಾರೆ. ಇವರ ನಾಲ್ಕನೇ ಪುಸ್ತಕ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಲು ಸಿದ್ದವಾಗುತ್ತಿದೆ. ಅಲ್ಲದೇ ಅಮನಾ ಹಾರ್ವರ್ಡ್ ವಿಶ್ವ ವಿದ್ಯಾನಿಲಯದಿಂದ “ಮಾಸ್ಟರ್ ಪೀಸಸ್ ಆಫ್ ವರ್ಲ್ಡ್ ಲಿಟರೇಚರ್” ಎಂಬ ತನ್ನ ಚೊಚ್ಚಲ ಸಾಹಿತ್ಯ ಕೋರ್ಸ್‌ ಮುಗಿಸಿದ್ದು , ಪುಟ್ಟ ವಯಸ್ಸಿ ನಲ್ಲೇ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದಾರೆ.

ಕಳೆದ ಡಿಸೆಂಬರ್ 16ರಂದು ರಾಜಭವನದಲ್ಲಿ ಅಮನಾ ಅವರ 3ನೇ ಹಾಗೂ ಪ್ರಥಮ ಹಿಂದಿ ಕವನ ಸಂಕಲನ “ಲಫ್ಜೋನ್ ಕಿ ಮೆಹ್ಫಿಲ್” ಅನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಬಿಡುಗಡೆ ಮಾಡಿದ್ದರು. ಅಮನಾ 6ನೇ ತರಗತಿಯಲ್ಲಿದ್ದಾಗ ಇಂಗ್ಲಿಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಪ್ರಥಮ ಕವನ ಸಂಕಲನ (Echoes of Soulful Poems) ‘ಎಕೋಸ್ ಆಫ್ಸೋಲ್ಫುಲ್ ಕವನಗಳು’ ಅನ್ನು ಅಂದಿನ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಡಿಸೆಂಬರ್ -2020ರಲ್ಲಿ ಬಿಡುಗಡೆ ಮಾಡಿದ್ದರು.

ಎರಡನೇ ಕವನ ಸಂಕಲನ (World Amidst the Words) “ಪದಗಳ ನಡುವಿನ ಪ್ರಪಂಚ” ವನ್ನು ರಾಜ್ಯಪಾಲರು ಡಿಸೆಂಬರ್ 2021 ರಲ್ಲಿ ಬಿಡುಗಡೆಗೊಳಿಸಿದ್ದರು. ಮೂರು ಕೃತಿಗಳು ಈಗಾಗಲೇ Amazon, Flipkart, Kindle, Evincepub, Playstore ನಲ್ಲಿ ಲಭ್ಯ ವಿದ್ದು , ನಾಲ್ಕನೇ ಕೃತಿಯೂ ಬಿಡುಗಡೆಗೆ ಸಿದ್ಧಗೊಂಡಿದೆ.

ಕು. ಅಮನಾ ಅವರ ಇನ್ನಿತರ ಸಾಧನೆಗಳು: ಭಾರತದ ಕಿರಿಯ ಕವಯಿತ್ರಿ –ಇಂಡಿಯಾ ಬುಕ್ ಆಫ್‌ ರೆಕಾಡ್ಸ್-2021 ಸೇರ್ಪಡೆ, ಗ್ರಾಂಡ್ಮಾಸ್ಟರ್ – ಏಷ್ಯಾ ಬುಕ್ ಆಪ್ ರೆಕಾರ್ಡ್ಸ್ -2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು. ‘ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021ಅನ್ನು ಗೋವಾದ ರಾಜ್ಯಪಾಲರು ಪ್ರದಾನ ಮಾಡಿದ್ದಾರೆ.

ನೋಬಲ್ ಬುಕ್ ಆಫ್‌ ವಲ್ರ್ಡ್ ರೆಕಾರ್ಡ್ – 2021: “ಅತ್ಯಂತ ಸಮೃದ್ಧ ಕವಿ” ಏಪ್ರಿಲ್‌ನಿಂದ 2020 ರಿಂದ ನವೆಂಬರ್ 2021 ರವರೆಗೆ, ವಿವಿಧ ಥೀಮ್‌ಗಳ ಅಡಿಯಲ್ಲಿ 337 ಕವಿತೆಗಳನ್ನು ಬರೆದಿರುವುದು. ‘ಕಿರಿಯ ಕವಯಿತ್ರಿ ’- ವರ್ಲ್ಡ್ ರೆಕಾರ್ಡ್
ವಿಶ್ವ ವಿದ್ಯಾಲಯ ಪ್ರವೇಶ 2022. ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ – “ಗೋಲ್ಡನ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್ಸ್ ” 2022 ನಲ್ಲಿ ದಾಖಲೆ. ಒಟ್ಟು ಈವರೆಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 400 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದು, ವಿಶ್ವದ ಕವಿ ಪ್ರೇಮಿಗಳ ಮನಗೆದಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...