ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 6 ಕೊನೆಯ ದಿನವಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಾಹನ ಚಾಲಕರ ಹುದ್ದೆಗಳಿಗೆ ನಿಗದಿತ ಅವಧಿಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ತನ್ನ ನೋಟಿಫಿಕೇಷನ್‌ನಲ್ಲಿ ಸ್ಪಷ್ಟಪಡಿಸಿದೆ.
ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಿರಬೇಕು.
ಭಾರೀ ಪ್ರಯಾಣಿಕ ಮೋಟಾರು ವಾಹನ ಅಥವಾ ಸರಕು ಸಾಗಣೆ ಮಾಡುವ ಭಾರೀ ವಾಹನವನ್ನು ಚಾಲನೆ ಮಾಡುವ ಚಾಲನಾ ಪರವಾನಿಗೆ ಹೊಂದಿರಬೇಕು.
ಚಾಲನೆಯಲ್ಲಿ ಕನಿಷ್ಟ 5 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಹಾಗೂ ಇಂಗ್ಲಿಷ್ ಭಾಷೆ ತಿಳಿದಿರಬೇಕು.
ಕನಿಷ್ಠ 18 ವರ್ಷ ಪೂರೈಸಿರಬೇಕು 35 ಮೀರಿರಬಾರದು. (ಮೀಸಲು ಅನುಸಾರ ವಿನಾಯಿತಿ ಇದೆ).
ವೇತನ ಶ್ರೇಣಿ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ (ಅಧಿಕಾರಿ ಮತ್ತು ನೌಕರರ ವೇತನ ಪರಿಷ್ಕೃತ ವೇತನ ಶ್ರೇಣಿ ನಿಯಮ 2018ರ ಅನುಸಾರ 25,550-81,100 ರೂ. ಹಾಗೂ ಇತರೆ ಭತ್ಯೆಗಳು ದೊರೆಯಲಿವೆ.
ಆಯ್ಕೆಯಾದ ಅಭ್ಯರ್ಥಿಯು ಆರಂಭಿಕ ಎರಡು ವರ್ಷಗಳ ಕಾಲ ಪರಿವೀಕ್ಷಣೆಯಲ್ಲಿ ಇರಲಿದ್ದು ನಂತರ ಕಾಯಂಗೊಳ್ಳಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಈ ಲಿಂಕ್‌ಅನ್ನು ಕ್ಲಿಕ್ ಮಾಡಬಹುದು: https://karnatakajudiciary.kar.nic.in/recruitmentNotifications/drvr2023/Notification_RPC.pdf
ಅರ್ಜಿ ಸಲ್ಲಿಸಲು ಬಯಸುವವರು ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು: https://karnatakajudiciary.kar.nic.in/driverRPC2023.php