
ಬೆಂಗಳೂರು: ಶಾಸಕಾಂಗ ಇಲಾಖೆಯಲ್ಲಿ ಕಚೇರಿ ಸಹಾಯಕರ ಹುದ್ದೆಗಳು ಖಾಲಿ ಖಾಲಿ ಹೊಡೆಯುತ್ತಿದ್ದು ಆಸಕ್ತಿ ಇರುವವರು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಪ್ರಯೋಜನ ಪಡೆಯಬಹುದು.
ಇನ್ನು ಕೆಲವೇ ಕೆಲವು ಉದ್ಯೋಗಗಳಿಗೆ ಆಹ್ವಾನ ಮಾಡಿರುವ ಇಲಾಖೆ, ಇ- ಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಕೇಂದ್ರ ಸರ್ಕಾರದಡಿ ಕೆಲಸ ಮಾಡಲು ಇಚ್ಛಿಸಿದ್ದಲ್ಲಿ, ಇಲ್ಲಿ ತಿಳಿಸಲಾದ ಎಲ್ಲವನ್ನು ಅರಿತುಕೊಂಡು ಕೂಡಲೇ ಅರ್ಜಿ ಸಲ್ಲಿಸಬಹುದಾಘಿದೆ.
ಇತ್ತ ಕೆಲವೇ ಕೆಲವು ಉದ್ಯೋಗಗಳು ಇರುವುದರಿಂದ ಬೇಗ ಅರ್ಜಿಹಾಕುವುದು ಉತ್ತಮ. ಹೌದು! ಭಾರತ ಸರ್ಕಾರದಡಿ ಬರುವ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನ ಶಾಸಕಾಂಗ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ.
ಈ ಸಂಬಂಧ ಇಲಾಖೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಮಾಡುವವರು ಕೇಳಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿ ಇಮೇಲ್ ಮೂಲಕ ಕಳುಹಿಸಬಹುದು. ಇಮೇಲ್- prashant.bhardwaj78@gov.in. ಆಫ್ಲೈನ್ ಮೂಲಕವು ಅರ್ಜಿ ಸಲ್ಲಿಕೆ ಮಾಡಬಹುದು.
ಉದ್ಯೋಗ ಹೆಸರು– ಕಚೇರಿ ಸಹಾಯಕರು
ಒಟ್ಟು ಎಷ್ಟು ಹುದ್ದೆಗಳು- 05
ವಯೋಮಿತಿ- 21- 40 ವರ್ಷ
ಮಾಸಿಕ ವೇತನ ಶ್ರೇಣಿ- 35,000
ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ, ಬಿ.ಟೆಕ್, ಬಿಸಿಎ ಅಥವಾ 1 ವರ್ಷದ ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್
ಕಚೇರಿಯಲ್ಲಿ ಕೆಲಸ ಏನು?: ದಾಖಲಾತಿ ಸ್ಕ್ಯಾನಿಂಗ್, ಆಡಳಿತ, ರೆಕಾರ್ಡ್ ನಿರ್ವಹಣೆಗಳಲ್ಲಿ 2 ವರ್ಷದ ಅನುಭವ ಇರಬೇಕು. ಎಂಎಸ್ ಆಫೀಸ್, ಎಂಎಸ್ ವರ್ಲ್ಡ್, ಎಕ್ಸೆಲ್, ಪವರ್ ಪಾಯಿಂಟ್ ಬಳಕೆ ಗೊತ್ತಿರಬೇಕು.
26 ಮಾರ್ಚ್ 2025 ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 10/ 04/ 2025 (ಈ ಉದ್ಯೋಗ ಪ್ರಕಟಣೆ ಮಾಡಿದ 15 ದಿನಗಳ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು)
ಉದ್ಯೋಗದ ಮಾಹಿತಿಯ ಲಿಂಕ್: https://cdnbbsr.s3waas.gov.in/s380537a945c7aaa788ccfcdf1b99b5d8f/uploads/2025/03/20250326329109146.pdf