Search By Date & Category

CrimeNEWSನಮ್ಮಜಿಲ್ಲೆರಾಜಕೀಯ

ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಮಾಂಗಲ್ಯ ಸರ ಕಳೆದುಕೊಂಡು ಬಿಕ್ಕಿಬಿಕ್ಕಿ ಅತ್ತ ಮಹಿಳೆ

ವಿಜಯಪಥ ಸಮಗ್ರ ಸುದ್ದಿ

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮಕ್ಕೆ, ಬಂದಿದ್ದ ಮಹಿಳೆ 40ಗ್ರಾಂ ಬಂಗಾರದ ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ.

ರಾಮದುರ್ಗ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುರೇಬಾನ ಗ್ರಾಮದ ಶಾಂತಾಬಾಯಿ ಬೊಮ್ಮನವರ ಎಂಬುವರೇ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ.

ಕಾರ್ಯಕ್ರಮ ಮುಗಿದ ನಂತರ ಎದ್ದು ಬರುವಾಗ ಕೊರಳಲ್ಲಿ ಇದ್ದ ಮಾಂಗಲ್ಯ ಸರ ಕಾಣಿಸಿಲ್ಲ. ಈ ವೇಳೆ ಎಲ್ಲ ಕಡೆ ಹುಡುಕಾಡಿದರು ಸರ ಪತ್ತೆಯಾಗಿಲ್ಲ. ಇದರಿಂದ ಆಘಾತಕ್ಕೆ ಒಳಗಾದ ಮಹಿಳೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

Leave a Reply

error: Content is protected !!