CRIMENEWSನಮ್ಮಜಿಲ್ಲೆ

5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಪ್ರಕರಣ: ಹಂತಕನ ಕುಟುಂಬದವರಿಗಾಗಿ ಪೊಲೀಸರ ಶೋಧ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಗುಂಡಿಗೆ ಬಲಿಯಾದ ಕೊಲೆಗಾರನ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಹಂತಕನ ಕುಟುಂಬದವರ ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ.

ನಿನ್ನೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ರಿತೇಶ್ ಕುಮಾರ್ (35) ಭಾವಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಹಂತಕನ ಶವ ಹುಬ್ಬಳ್ಳಿಯ ಕಿಮ್ಸ್ ಶವಾಗಾರದಲ್ಲಿ ಅನಾಥವಾಗಿ ಬಿದ್ದಿದೆ. ಹೀಗಾಗಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ಹಂತಕನ ಕುಟುಂಬವರನ್ನು ಹುಡುಕುತ್ತಿದ್ದಾರೆ.

ಎನ್‌ಕೌಂಟರ್‌ ಆದ ರಿತೇಶ್ ಕುಮಾರ್ ಗೋಧಿ ಬಣ್ಣದ ಮೈಬಣ್ಣ, ತೆಳ್ಳಗಿನ ಮೈಕಟ್ಟು, ಕೋಲು ಮುಖ, 5.3 ಮೀ ಎತ್ತರ ಮತ್ತು ಅಗಲವಾದ ಹಣೆ ಎಂದು ವಿವರಿಸಿದ್ದಾರೆ. ಅಲ್ಲದೆ ಆತನ ಬಲಗೈಯಲ್ಲಿ ಹಿಂದಿಯಲ್ಲಿ ‘ಓಂ ನಮಃ ಶಿವಾಯ ಜಯ ಸಂಜಯ್’ ಎಂದು ಬರೆದಿರುವ ಹಚ್ಚೆ ಕೂಡ ಇದೆ.

ಇನ್ನು ಈತನ ಗುರುತಿನ ಬಗ್ಗೆ ಮಾಹಿತಿ ಇರುವ ಯಾರಾದರೂ ಇದ್ದಲ್ಲಿ ತಕ್ಷಣ 0836-2233490ಗೆ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ ಆರೋಪದ ಮೇಲೆ ವಿಚಾರಣೆ ನಡೆಸುತ್ತಿದ್ದಾಗ

5 ವರ್ಷದ ಬಾಲಕಿಯ ಮೇಲೆ ಕೆಲ ದಿನಗಳ ಹಿಂದೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಕೊಲೆ ಮಾಡಲಾಯಿತು. ಈ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಈ ಕೊಲೆ ಆರೋಪಿಯನ್ನು ಪೊಲೀಸರನ್ನು ಬಂಧಿಸುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದರು.

ಆ ಗುಂಡೇಟಿಗೆ ಆರೋಪಿ ಹಂತಕ ರಿತೇಶ್ ಕುಮಾರ್ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ಇತ್ತ ಆತ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರೂ ಕೂಡ ಆತನ ಸಂಬಂಧಿಕರು ಈವರೆಗೂ ಪತ್ತೆಯಾಗಿಲ್ಲದ ಕಾರಣ ಶವಗಾರದಲ್ಲೇ ಮೃತದೇಹವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!