NEWSನಮ್ಮರಾಜ್ಯಶಿಕ್ಷಣ

1ನೇ ತರಗತಿಗೆ ಸೇರುವ ಮಕ್ಕಳ ವಯಸ್ಸು 5.5 ವರ್ಷ ಇರಬೇಕು: ಸಚಿವ ಮಧು ಬಂಗಾರಪ್ಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮ್ಮ ಸರ್ಕಾರ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ ಒಂದನೇ ತರಗತಿಗೆ ಸೇರಲು ಅವಕಾಶ ನೀಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಸಂಬಂಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಯೋಮಿತಿ ಸಡಿಲಿಕೆ ಮಾಡಲಾಗಿದ್ದು ಪೋಷಕರು ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಶಾಲೆಗೆ ಸೇರಿಸಬಹುದು ಎಂದು ಹೇಳಿದರು.

ವಯಸ್ಸಿನ ಮಿತಿಯ ಬಗ್ಗೆ ಪೋಷಕರು ಗೊಂದಲದಲ್ಲಿದ್ದಾರೆ. ಎರಡು ತಿಂಗಳು ಸಡಿಲಿಕೆ ಮಾಡಬಹುದು. ಈಗಾಗಲೇ ದೇಶದಲ್ಲಿ 1ನೇ ತರಗತಿಗೆ ಸೇರಿಸಲು 6 ವರ್ಷ ವಯೋಮಿತಿ ಇದೆ ಎಂದ ಅವರು, ನಾವು ಈ ವರ್ಷ ಮಾತ್ರ ವಯಸ್ಸಿನ ಮಿತಿಯನ್ನು ಸಡಿಲಿಸಲಿದ್ದು, ಮುಂದಿನ ವರ್ಷದಿಂದ 1ನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷದ ನಿಯಮ ಕಡ್ಡಾಯವಾಗಲಿದೆ ಎಂದು ಹೇಳಿದರು.

ನಾನು SEPಯಿಂದ ವರದಿ ಕೇಳಿದೆ. ಅವರು ಮೊದಲು 6 ವರ್ಷಗಳು ಎಂದು ಹೇಳಿದರು. ನಂತರ ನಮ್ಮ ಇಲಾಖಾ ಅಧಿಕಾರಿಗಳೂ ಅವರೊಂದಿಗೆ ಮಾತನಾಡಿದ ಬಳಿಕ SEPಯ ಸೂಚನೆಗಳ ಮೇರೆಗೆ 5 ವರ್ಷ 5 ತಿಂಗಳು ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಯುಕೆಜಿ ಪೂರ್ಣಗೊಳಿಸಿರಬೇಕು. 1ನೇ ತರಗತಿಗೆ ದಾಖಲಾತಿ ಮಿತಿಯನ್ನು 5 ವರ್ಷ 5 ತಿಂಗಳುಗಳಿಗೆ ಸಡಿಲಿಸಲಾಗಿದೆ. ಇದು ರಾಜ್ಯ ಪಠ್ಯಕ್ರಮಕ್ಕೆ ಮಾತ್ರ ಅನ್ವಯಿಸುತ್ತದೆ. ಐಸಿಎಸ್‌ಸಿ ಮತ್ತು ಸಿಬಿಎಸ್‌ಇ ಮಂಡಳಿಗಳ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಲು ಆಗೊಲ್ಲ ಎಂದು ಸ್ಪಷ್ಟಪಡಿಸಿದರು.

ವಯಸ್ಸಿನ ಮಿತಿಯನ್ನು ಸಡಿಲಿಸುವಂತೆ ಎಲ್ಲರೂ ಒತ್ತಡ ಹೇರುತ್ತಿದ್ದರು. ಪೋಷಕರು ತಮ್ಮ ಮಕ್ಕಳನ್ನು ಯಂತ್ರದ ರೀತಿ ಓದಿಸುವುದಕ್ಕೆ ಒತ್ತಡ ಹೇರಬಾರದು. ಮಕ್ಕಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಮಕ್ಕಳು ಒತ್ತಡವಿಲ್ಲದೆ ಕಲಿಯಬೇಕು ಎಂದು ಸಲಹೆ ನೀಡಿದರು.

Deva
the authorDeva

Leave a Reply

error: Content is protected !!
Latest news
GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು?