NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸರ್ಕಾರದ ತಾರತಮ್ಯ ಧೋರಣೆಗೆ ಬೇಸತ್ತಿರುವ ಸಾರಿಗೆ ನೌಕರರ ನಡೆ ನಿಗೂಢ

ಸರ್ಕಾರದ ಹಿಂದೆ ಇರುವ ರಾಕ್ಷಸ ಪ್ರವೃತ್ತಿಯ ಕೆಲ ಸಂಘಟನೆಗಳು, ಅಧಿಕಾರಿಗಳು ಎಂಬ ಆರೋಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರಿಗೆ ದೂರದ ಬೆಟ್ಟ ತೋರಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದಲೂ ಮೋಸ ಮಾಡಿಕೊಂಡೇ ಬರುತ್ತಿದೆ. ಅಲ್ಲದೆ ನಾಲ್ಕೂ ನಿಗಮಗಳ ಕೆಲ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳು ಮತ್ತು ಕೆಲ ಸಂಘಟನೆಗಳ ಮುಖಂಡರೂ ಕೂಡ ನೌಕರರನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಎಂಬ ಹಿಟ್ಲರ್‌ ಸಂಸ್ಕೃತಿ  ಮುಂದುವರಿಸುತ್ತಿದ್ದಾರೆ.

ಸಾರಿಗೆ ನೌಕರರು ಎಂದರೆ ಮೊದಲೇ ಆಡಳಿತ ಮಂಡಳಿಗಳ ಕೆಲ ಅಧಿಕಾರಿಗಳಿಗೆ ಅಸಡ್ಡೆ, ಇನ್ನು ನಮಗೆ ಅಗ್ರಿಮೆಂಟ್‌ ಆದರೆ ಸೂಟ್‌ಕೇಸ್‌ ಸಿಗುತ್ತದೆ. ಜತೆಗೆ ನೌಕರರನ್ನು ಗುಲಾಮರಂತೆ ಬಳಸಿಕೊಳ್ಳಬಹುದು. ಅಲ್ಲದೆ ಜತೆಗೆ ಅವರನ್ನೂ ಕಿತ್ತುತಿನ್ನಬಹುದು ಎಂಬ ರಾಕ್ಷಸ ಪ್ರವೃತ್ತಿಯ ಮತ್ತು ಭ್ರಷ್ಟಾಚಾರದಲ್ಲೇ ಮುಳುಗಿ ಏಳುತ್ತಿರುವ ಕೆಲ ಸಂಘಟನೆಗಳ ಮುಖಂಡರು ನೌಕರರಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಅನಾನುಕೂಲ ಮಾಡುವುದರಲ್ಲೇ ನಿರತವಾಗಿದ್ದಾರೆ.

ಇನ್ನು ಈವರೆಗೂ ನೌಕರರ ವೇತನ ಹೆಚ್ಚಳದಲ್ಲಿ ಸಂಘಟನೆಗಳು ಹೇಳುವಂತೆಯೇ ಅವುಗಳನ್ನು ದೂರವಿಟ್ಟು ನೌಕರರಿಗೆ ಅನುಕೂಲ ಕಲ್ಪಿಸಿಕೊಂಡು ಬಂದಿರುವ ಸರ್ಕಾರ ಈಗಮಾತ್ರ ಕೆಲ ನೌಕರರ ವಿರುದ್ಧ ನಡೆದುಕೊಳ್ಳುವ ಸಂಘಟನೆಗಳ ಮುಖಂಡರ ಸಲಹೆಯನ್ನೇ ಸಾಧನೆ ಮಾಡಿದಂತೆ ತೆಗೆದುಕೊಂಡು ಕಳೆದ ಮೂರು ವರ್ಷದಿಂದ ನೌಕರರನ್ನು ಕಾಡುತ್ತಿದೆ.

ಇಂಥ ನೌಕರ ವಿರೋಧಿ ಸರ್ಕಾರಕ್ಕೆ ಮಾನ, ಮರ್ಯಾದೆ, ನಾಚಿಕೆ ಎಂಬುವುದು ಕಿಂಚಿತ್ತಾದರೂ ಇದ್ದರೆ, ಈಗಲೂ ಕಾಲ ಮಿಂಚಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ಕಲವು ತಿಂಗಳುಗಳಷ್ಟೇ ಬಾಕಿ ಇರೋದೊ. ಹಾಗಾಗಿ ಈಗಲೂ ನೌಕರರಿಗೆ ಸಿಹಿ ಸುದ್ದಿಕೊಡಿ. ಅವರು ನಿಮ್ಮನ್ನು ಮರೆಯುವುದಿಲ್ಲ. ಜತೆಗೆ ನಿಯತ್ತಿನ ನಾಯಿಯಂತೆ ಇರುತ್ತಾರೆ.

ಅದನ್ನು ಬಿಟ್ಟು ಇದೇ ರೀತಿ ನೌಕರರ ವಿರೋಧಿ ಸರ್ಕಾರವಾಗಿಯೇ ಇದ್ದರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ನಿಮ್ಮ ಪಕ್ಷ ಹೇಳ ಹೆಸರಿಲ್ಲದಂತೆ ಹೋಗುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ನಿಮ್ಮ ಪಾರುಪತ್ಯ ಉಳಿಸಿಕೊಳ್ಳಬೇಕು ಎಂದರೆ ನೀವು ನೌಕರರ ಸಮಸ್ಯೆಗೆ ಬೇಡಿಕೆಗೆ ಸ್ಪಂದಿಸಿ.

ಇನ್ನು ನೌಕರರ ಕಡು ಶಾಪಕ್ಕೆ ನೀವು ಮತ್ತು ನಿಮ್ಮ ಪಕ್ಷ ಗುರಿಯಾದರೆ ಅದರಿಂದ ಶತಮಾನಗಳು ಕಳೆದರೂ ಹೊರಬರಲು ಸಾಧ್ಯವಿಲ್ಲ. ಈಗಾಗಲೇ ನೌಕರರ ಶಾಪಕ್ಕೆ ಗುರಿಯಾದ ನಿಮ್ಮದೇ ಪಕ್ಷದ ಕೆಲ ನಾಯಕರ ಸ್ಥಿತಿ ಈಗ ಹೇಗಿದೆ ಎಂಬುದನ್ನು ನೀವೆ ಪ್ರಸ್ತುತ ನೋಡುತ್ತಿದ್ದೀರಿ. ಅಲ್ಲದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲೂ ನೌಕರರ ಕಾಡಿದ ಮಂದಿ ಈಗ ಎಲ್ಲಿದ್ದಾರೆ ಅವರು ಏನಾದರೂ ಎಂಬುವುದು ನಿಮಗೆ ಚೆನ್ನಾಗಿ ತಿಳಿದಿದೆ. ಅದನ್ನು ನಾವು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ ಒಳ್ಳೆಯದನ್ನು ಮಾಡಿ ನೌಕರರ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅರಿತುಕೊಳ್ಳಿ ಮುಖುಮಂತ್ರಿ ಬಸವರಾಜ ಮೊಮ್ಮಾಯಿ ಅವರೇ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರೇ..

ಇನ್ನು ಈ ಜನವರಿ ಕೊನೆಯ ವೇಳೆಗೆ ನೀವು ನೌಕರರಿಗೆ ಸಿಹಿಸುದ್ದಿ ಕೊಟ್ಟಿಲ್ಲ ಎಂದರೆ ಅದರ ಪರಿಣಾಮವನ್ನು ಇಡೀ ರಾಜ್ಯಾದ್ಯಂತ ಎದುರಿಸಬೇಕಾಗುತ್ತದೆ. ಇದು ಭಯಹುಟ್ಟಿಸುವುದಕ್ಕೆ ಹೇಳುತ್ತಿರುವುದಲ್ಲ ಇದು ಎಚ್ಚರಿಕೆ ನೀಡುತ್ತಿರುವುದು ಎಚ್ಚೆತ್ತುಕೊಳ್ಳಿ. ಇಲ್ಲ ವಿನಾಶದ ದಾರಿಯಲ್ಲಿ ಸಾಗಲು ಸಿದ್ಧರಾಗಿ.

ನಮಗೂ ಗೊತ್ತಿದೆ ನಿಮ್ಮ ರೀತಿ ವಾಮ ಮಾರ್ಗದಲ್ಲಿ ನಡೆಯುವುದು. ಅದನ್ನು ಚುನಾವಣೆ ವೇಳೆ ತೋರಿಸುತ್ತೇವೆ. ಕನಿಷ್ಠ ದಿನಕ್ಕೆ ಒಬ್ಬ ನೌಕರ ಇಬ್ಬರು ನಾಗರಿಕರ ಮನ ಪರಿವರ್ತನೆ ಮಾಡಲು ಹೊರಟರು ದಿನಕ್ಕೆ ಸರಿ ಸುಮಾರು 4 ಲಕ್ಷ ನಾಡಿನ ಜನರನ್ನು ತಲುಪುವ ಸಾಮರ್ಥ್ಯ ಹೊಂದಿದ್ದಾರೆ ನಮ್ಮ ನೌಕರರು.

ಹೀಗಾಗಿ ಯಾವುದೇ ಸಂಘಟನೆಯ ಮುಖಂಡರ ಮತ್ತು ವೈಟ್‌ಕಾಲರ್‌ ಅಧಿಕಾರಿಗಳ ಕೈಯಲ್ಲಿ ಆಗದ್ದನ್ನು ನೌಕರರಾದ ನಾವು ಮಾಡಿ ತೋರಿಸುತ್ತೇವೆ. ಆದರೂ ನಿಮಗೆ ಮತ್ತೊಮ್ಮೆ ಮೊಗದೊಮ್ಮೆ ಎಂದು ಚುನಾವಣೆವರೆಗೂ ಅವಕಾಶ ಕೊಟ್ಟೇ ಬರುತ್ತೇವೆ. ನೀವಾ? ನಾವಾ? ನೋಡೇ ಬಿಡೋಣ ಎಂದು ಸರ್ಕಾರ ನಿರ್ಧರಿಸಿದರೆ ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದೇ ತಿಳಿದುಕೊಳ್ಳಿ.

l ನಾಲ್ಕೂ ಸಾರಿಗೆ ನಿಗಮದ ನೊಂದ ನೌಕರರು

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ