Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಬೆಳಗಾವಿ ಚಲೋ : ಡಿ.9ಕ್ಕೆ ರಜೆ ಪಡೆಯದಂತೆ ಸಾರಿಗೆ ನೌಕರರಿಗೆ ನಿಗಮಗಳ ಸೂಚನೆ

ವಿಜಯಪಥ ಸಮಗ್ರ ಸುದ್ದಿ
  • ಅನುಮತಿ ಇಲ್ಲದೆ ರಜೆ ಪಡೆದು ಕರ್ತವ್ಯಕ್ಕೆ ಗೈರಾದರೆ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

ಬೆಂಗಳೂರು: ವೇತನ ಹೆಚ್ಚಳ, ವೇತನ ಹಿಂಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇದೇ ಡಿ. 9ರಂದು ಬೆಳಗಾವಿ ಚಲೋ ನಡೆಸುತ್ತಿರುವುದರಿಂದ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಡಿ. 9ರಂದು ರಜೆ ತೆಗೆದುಕೊಳ್ಳದೆ ನೌಕರರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ಸೂಚಿಸಿವೆ.

ಕೆಎಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಾರಿಗೆ ನೌಕರರು ವಿಧಾನಮಂಡಳ ಅಧಿವೇಶನ ಆರಂಭವಾಗುವ 9ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಮಿತಿಯ ಪಪಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.8ರ ಭಾನುವಾರದಿಂದಲೇ ನೌಕರರು ಬೆಳಗಾವಿಗೆ ತೆರಳುವ ಸಾಧ್ಯತೆಗಳಿವೆ. ಇದರಿಂದಾಗಿ ಭಾನುವಾರ ಮತ್ತು ಸೋಮವಾರ ರಾಜ್ಯದಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಹೀಗಾಗಿ ಅನಿವಾರ್ಯ ಕಾರಣ ಹೊರತುಪಡಿಸಿ ಭಾನುವಾರ ಮತ್ತು ಸೋಮವಾರ ರಜೆ ತೆಗೆದುಕೊಳ್ಳದಂತೆ ನೌಕರರಿಗೆ ಸೂಚಿಸಿವೆ.

ಅಲ್ಲದೆ, ಅನುಮತಿ ಪಡೆಯದೇ ರಜೆ ಪಡೆದು ಕರ್ತವ್ಯಕ್ಕೆ ಗೈರಾದರೆ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನಿಗಮಗಳು ನೀಡಿವೆ.

Leave a Reply

error: Content is protected !!
LATEST
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟ‌ರ್: ನಾಲೆಗೆ ಹಾರಿ ಆತ್ಮಹತ್ಯೆ ಎಸ್‌.ಎಂ.ಕೃಷ್ಣ ಇನ್ನಿಲ್ಲ- ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುಶೋಕ ಸಂದೇಶ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ ಮಾಜಿ ಸಿಎಂ SMK ನಿಧನ: ನಾಳೆ ಶಾಲಾ- ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ ಅಕ್ರಮ ಪಡಿತರ ವಿರುದ್ಧ ವಿಶೇಷ ಕಾರ್ಯಾಚರಣೆ: ಆಹಾರ ಸಚಿವ ಮುನಿಯಪ್ಪ KSRTC ನಿವೃತ್ತ ನೌಕರರಿಗೆ ಫ್ರೀ ಪಾಸ್‌ ಕೊಡಿ: ಹಣ ಕಟ್ಟಿದ ಮೇಲೆ ಪಾಸ್‌ ನೀಡುವುದು ಸಲ್ಲ BMTC- ಅನ್ಯ ಭಾಷೆ ಆಧಾರ್‌ಕಾರ್ಡ್‌ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ