NEWSನಮ್ಮಜಿಲ್ಲೆನಮ್ಮರಾಜ್ಯ

ಬೆಳಗಾವಿ: ಉಪವಾಸ ಸತ್ಯಾಗ್ರಹ ನಿರತ 5 ಮಂದಿ ಸಾರಿಗೆ ನೌಕರರು ತೀವ್ರ ಅಸ್ವಸ್ಥ – ಆಸ್ಪತ್ರೆಗೆ ದಾಖಲು

ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ನೌಕರರ ಪ್ರಾರ್ಥನೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಇಲ್ಲಿನ ಸುವರ್ಣ ಸೌಧದ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿರತ 5ಮಂದಿ ನೌಕರರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮಧ್ಯಾಹ್ನ ಹೈಬಿಪಿಯಿಂದ ಉಪವಾಸ ನಿರತ  ನಾಗರಿಕರಾದ (ಸಂಸ್ಥೆಗೆ ಸಂಬಂಧವಿಲ್ಲದ ವ್ಯಕ್ತಿ) ಬಸವರಾಜು ಎಂಬುವರು ಅವರ ಬಳಿಕ ಸಾರಿಗೆ ನೌಕರರಾದ ಕೃಷ್ಣ ಗುಡುಗುಡಿ ಆನಂತರ ಲೋಕೇಶ್‌, ಬಶೀರ್‌ ಮತ್ತು ಜಯಶ್ರೀ ಅವರು ತೀವ್ರ ಅಸ್ವಸ್ಥಗೊಂಡಿದ್ದು ಕೂಡಲೇ ಅವರನ್ನು ಸತ್ಯಾಗ್ರಹ ನಿರತ ಸ್ಥಳದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್‌ ಮೂಲಕ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ.

ಇದನ್ನೂ ಓದಿ: BREAKING NEWS: ಉಪವಾಸ ಸತ್ಯಾಗ್ರಹ ನಿರತ KSRTCಯ ಮತ್ತಿಬ್ಬರು ಸಿಬ್ಬಂದಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು

ಇನ್ನು ಈ ಐವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದು ಈ ಐವರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಕಳೆದ ಇದೇ ಡಿ.19ರಿಂದ ಒಂದು ತುತ್ತು ಅನ್ನವನ್ನು ಸೇವಿಸದೆ ನೌಕರರ ಭವಿಷ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕಿಟ್ಟು ಈ ನೌಕರರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಇಡೀ ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು. ಇನ್ನು ಕಳೆದ ನಾಲ್ಕುದಿನದಿಂದ ಉಪವಾಸ ನಿರತರಲ್ಲಿ ಚಂದ್ರಶೇಖರ್‌ ಅವರಿಗೆ ಲೋ ಬಿಪಿಯಾಗಿದ್ದು ಅವರು ಕೂಡ ಅಸ್ವಸ್ಥಗೊಳ್ಳುವ ಸಂಭವ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: KSRTC- ಉಪವಾಸ ಸತ್ಯಾಗ್ರಹ ನಿರತ ಮತ್ತೊಬ್ಬ ಸಾರಿಗೆ ಸಿಬ್ಬಂದಿ ಅಸ್ವಸ್ಥ ಆಸ್ಪತ್ರೆಗೆ ದಾಖಲು

ಈ ಉಪವಾಸ ನಿರತ ನೌಕರರೆಲ್ಲರೂ ಇಡೀ ನಾಲ್ಕೂ ನಿಗಮಗಳ 1.25 ಲಕ್ಷ ನೌಕರರ ಮತ್ತು ಅಧಿಕಾರಿಗಳ ಭವಿಷ್ಯಕ್ಕಾಗಿ ಅನ್ನ ಆಹಾರ ಬಿಟ್ಟು ಉಪವಾಸ ನಿರತರಾಗಿ ಈಗ ಆಸ್ಪತ್ರೆಯಲ್ಲಿ ಜೀವನ್ಮರಣದೊಂದಿಗೆ ಹೋರಾಟ ಮಾಡುತ್ತಿದ್ದಾರೆ. ಇವರ ಆರೋಗ್ಯ ಸ್ಥಿರವಾಗಿ ಬೇಗ ಆಸ್ಪತ್ರೆಯಿಂದ ಡಿಸ್ಚರ್ಜ್‌ಆಗಿ ಬರಲಿ ಎಂದು ನೌಕರರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಇನ್ನು ಇಂದು ಮಧ್ಯಾಹ್ನದಿಂದ ಸಂಜೆ 5 ಗಂಟೆಯೊಳಗೆ 5 ಮಂದಿ ನೌಕರರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಮುಖ್ಯಮಂತ್ರಿಗಳು, ಮಂತ್ರಿಗಳು ಮತ್ತು ವಿಪಕ್ಷ ನಾಯಕರಾರು ಕೂಡ ಈವರೆಗೂ ಅವರ ಆರೋಗ್ಯ ವಿಚಾರಿಸುವ ಸೌಜನ್ಯವನ್ನು ತೋರಿಸಿಲ್ಲ.

ಇದನ್ನೂ ಓದಿ: KSRTC- ಉಪವಾಸ ಸತ್ಯಾಗ್ರಹ ನಿರತ ಮತ್ತೊಬ್ಬ ಸಾರಿಗೆ ಸಿಬ್ಬಂದಿ ಅಸ್ವಸ್ಥ ಆಸ್ಪತ್ರೆಗೆ ದಾಖಲು : ಈವರೆಗೆ ಮೂವರು ಸಿಬ್ಬಂದಿ ದಾಖಲು

ರಾಜ್ಯದ ಈ ರಾಜಕಾರಣಿಗಳ ನಡೆಯನ್ನು ನೋಡುತ್ತಿದ್ದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಇದ್ದೇವಾ ಎಂಬ ಅನುಮಾನ ಮೂಡುತ್ತಿದೆ ಇಂಥ ಕೆಟ್ಟ ರಾಜಕಾರಣಿಗಳನ್ನು ಈ ಹಿಂದೆ ನೋಡಿಲ್ಲ ಮುಂದೆಯೂ ನೋಡುವುದಿಲ್ಲ ಎನಿಸುತ್ತಿದೆ ಎಂದು ಸಾರ್ವಜನಿಕರು ಮತ್ತು ಸಾರಿಗೆ ನೌಕರರ ಕುಟುಂಬದ ಸದಸ್ಯರು ಹಿಡಿ ಶಾಪಹಾಕುತ್ತಿದ್ದಾರೆ.

ಇನ್ನಾದರೂ ಬೆಳಗಾವಿಯಲ್ಲೇ ಇರುವ ಈ ಎಲ್ಲ ಮಹಾನ್‌ ಮಹಾನ್‌ ಜನಪ್ರತಿನಿಧಿಗಳೂ ಎನಿಸಿಕೊಂಡವರು ಉಪವಾಸದಿಂದ ಅಸ್ವಸ್ಥಗೊಂಡಿರುವವರನ್ನು ನೋಡುವ ಸೌಜನ್ಯವನ್ನಾದರೂ ತೋರಿಸಲು ಮುಂದಾಗಬೇಕಿದೆ.  ಥೂ ಎಂಥ ರಾಜಕೀಯ ಮಾಡುತ್ತಿದ್ದಾರೆ ಇವರು. ನಾಚಿಕೆ ಆಗೋದಿಲ್ಲವೇ.

ಯಾರೋ ಒಬ್ಬ ರೌಡಿ ಸತ್ತರೆ ಅವರ ಮನೆಗೆ ಹೋಗಿ ಲಕ್ಷಾಂತರ ರೂ. ಸರ್ಕಾರದ ಹಣ ಕೊಟ್ಟು ಬರುವ ಇವರಿಗೆ ಜನರ ಸೇವೆ ಮಾಡುತ್ತಿರುವ ನೌಕರರ ಸಮಸ್ಯೆ ಕಾಣಿಸುತ್ತಿಲ್ಲವೇ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಷ್ಟಾದರೂ ಇವರು ಬುದ್ದಿಕಲಿತಂತೆ ಕಾಣುತ್ತಿಲ್ಲ….

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ