Breaking NewsNEWSನಮ್ಮಜಿಲ್ಲೆನಮ್ಮರಾಜ್ಯ

ಜುಲೈ 6- ರಾಜ್ಯದಲ್ಲಿ 1843 ಮಂದಿಯಲ್ಲಿ ಕೊರೊನಾ ದೃಢ, 30 ಜನರು ಮೃತ

ಬೆಂಗಳೂರಿನಲ್ಲಿ 981 ಜನರಲ್ಲಿ ಕೋವಿಡ್‌ ಸೋಂಕು, 10 ಮಂದಿ ಸಾವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 1843 ಹೊಸ ಸೋಂಕಿತರ ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 25317 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಇಂದು 30 ಮಂದಿ ಸೋಂಕಿಗೆ ಬಲಿಯಾಗಿದ್ದು,  ಒಟ್ಟಾರೆ ಈವರೆಗೆ ರಾಜ್ಯದಲ್ಲಿ 406 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ.

ರಾಜ್ಯದ 30 ಮಂದಿಯಲ್ಲಿ ಬೆಂಗಳೂರಿನ 10 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.  ಇನ್ನು ಬೆಂಗಳೂರಿನಲ್ಲಿ 981, ಉಡುಪಿ 40 ಸೇರಿ ಇಂದು ಒಟ್ಟು  1843 ಮಂದಿಯನ್ನು ಸುತ್ತಿಕೊಂಡಿದೆ ಮಹಾಮಾರಿ ಕೊರೊನಾ.

ದೇಶದಲ್ಲಿ 700,724 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 700,724 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 19,714 ಮಂದಿ ಮೃತಪಟ್ಟಿದ್ದಾರೆ. 425,568 ಮಂದಿ ರೋಗಮುಕ್ತರಾಗಿದ್ದಾರೆ. 255,442 ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಪಂಚಾದ್ಯಂತ ಈವರೆಗೆ 11,586,784 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 537,372 ಜನರು ಮೃತಪಟ್ಟಿದ್ದಾರೆ 6,553,128 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

Leave a Reply

error: Content is protected !!
LATEST
ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ