Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಆಧಾರ್‌ ಕಾರ್ಡ್‌ ಯಾವುದೇ ಭಾಷೆಯಲ್ಲಿರಲಿ ಅದು ಕರ್ನಾಟಕ ರಾಜ್ಯದ್ದಾಗಿದ್ದರೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಬೇಕು ಎಂದು ಸಂಸ್ಥೆ ಆದೇಶ ಹೊರಡಿಸಿದೆ.

ನಿರ್ವಾಹಕರಿಗೆ ಈ ಬಗ್ಗೆ ಕೆಲ ಗೊಂದಲಗಳಿದ್ದವು ಅದನ್ನು ನಿವಾರಿಸುವ ಸಲುವಾಗಿ ಬಿಎಂಟಿಸಿ ನಿಗಮವು ಸ್ಪಷ್ಟ ಸೂಚನೆ ನೀಡಿದ್ದು, ಆಧಾರ್‌ ಕಾರ್ಡ್‌ ಯಾವುದೇ ಭಾಷೆಯಲ್ಲಿರಲಿ ಅದು ಕರ್ನಾಟಕದ ವಿಳಾಸ ಹೊಂದಿದ್ದರೆ ಅದನ್ನು ಪರಿಗಣಿಸಬೇಕು ಎಂದು ತಿಳಿಸಿದೆ.

ಈ ಹಿಂದೆ ಆಧಾರ್ ‌ಕಾರ್ಡ್​​ನಲ್ಲಿ ಇಂಗ್ಲಿಷ್ ಜತೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಪ್ರಿಂಟ್ ಆಗಿದ್ದರೆ, ಅಂತಹ ಮಹಿಳೆಯರಿಗೆ ಬಿಎಂಟಿಸಿ ಕಂಡಕ್ಟರ್​ಗಳು ಶಕ್ತಿ ಯೋಜನೆಯ ಟಿಕೆಟ್ ನೀಡಲು ಗೊಂದಲಕ್ಕೆ ಒಳಗಾಗುತ್ತಿದ್ದರು. ಇದರಿಂದ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಹಲವುಬಾರಿ ಜಗಳವಾಗುತ್ತಿತ್ತು.

ಅದನ್ನು ತಪ್ಪಿಸಲು ಬಿಎಂಟಿಸಿ ಮುಂದಾಗಿದ್ದು, ಇನ್ಮುಂದೆ ಆಧಾರ್ ಕಾರ್ಡ್​​ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಸಾಕು, ಶಕ್ತಿ ಯೋಜನೆ ಟಿಕೆಟ್ ನೀಡಬಹುದು ಎಂದು ಸೂಚನೆ ನೀಡಿದೆ.

ಇನ್ನು ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿ ರಾಜ್ಯದ ವಿಳಾಸ ಹೊಂದಿದ್ದರೆ ಬಿಎಂಟಿಸಿ ಬಸ್​ನಲ್ಲಿ ಅವರಿಗೆ ಉಚಿತವಾಗಿ ಸಂಚಾರ ಮಾಡಲು ಅವಕಾಶವಿದೆ. ಆಧಾರ್ ಕಾರ್ಡ್‌ ಕನ್ನಡದಲ್ಲಿ ವಿಳಾಸ ಇಲ್ಲಾಂದರೂ ಪರವಾಗಿಲ್ಲ (ತಮಿಳು. ತೆಲುಗು ಹೀಗೆ ಯಾವುದೇ ಭಾಷೆಯಲ್ಲಿರಲಿ) ಕರ್ನಾಟಕದ ವಿಳಾಸವಿದ್ದರೆ ಸಾಕು ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ಆಧಾರ್ ಕಾರ್ಡ್​​ನಲ್ಲಿ ಕನ್ನಡದಲ್ಲಿ ವಿಳಾಸವಿರಬೇಕೆಂದು ಬಿಎಂಟಿಸಿಯ ಕೆಲ ಕಂಡಕ್ಟರ್​ಗಳು ಹೇಳುತ್ತಿದ್ದರು ಅಲ್ಲದೆ ಈ ಬಗ್ಗೆ ಸಂಸ್ಥೆಕೂಡ ಸ್ಪಷ್ಟ ಸೂಚನೆ ನೀಡದ ಹಿನ್ನೆಯಲ್ಲಿ ಗೊಂದಲವಾಗುತ್ತಿತ್ತು.

ಹೀಗಾಗಿ ದೇಶದ ನಾಗರೀಕರು ಆಧಾರ್ ಕಾರ್ಡನ್ನು ದೇಶದಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಭಾಷೆಯಲ್ಲಿ (ದ್ವಿಭಾಷೆ) ಆಧಾರ್ ಕಾರ್ಡ್ ಮುದ್ರಣವಾಗುತ್ತದೆ.

ಹೀಗಾಗಿ ಕನ್ನಡ ಹೊರತುಪಡಿಸಿ ಅನ್ಯಭಾಷೆಯಲ್ಲಿ ಮುದ್ರಿತ (ದ್ವಿಭಾಷೆ) ಆಧಾರ್ ಕಾರ್ಡ್ ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ, ಆ ಆಧಾರ್ ಕಾರ್ಡ್ ಅನ್ನು ಮಾನ್ಯ ಮಾಡಿ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡಬೇಕು ಎಂದು ಸೂಚಿಸಿದೆ.

ಒಟ್ಟಿನಲ್ಲಿ ಬಿಎಂಟಿಸಿ ಬಸ್​ನಲ್ಲಿ ಉಚಿತವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಬೇಕೆಂದರೆ, ಆಧಾರ್ ಕಾರ್ಡ್ ಕನ್ನಡದಲ್ಲೇ ಇರಬೇಕೆಂಬ ಗೊಂದಲವಿಲ್ಲ. ಬಿಎಂಟಿಸಿಯ ಹೊಸ ಆದೇಶ ಈ ಎಲ್ಲ ಗೊಂದಲಗಳಿಗೆ ಬ್ರೇಕ್ ಹಾಕಿದ್ದು ಬಿಎಂಟಿಸಿ ಆದೇಶದಿಂದ ಮಹಿಳಾ ಪ್ರಯಾಣಿಕರು ಕೂಡ ಸಂತಸಗೊಂಡಿದ್ದಾರೆ.

Leave a Reply

error: Content is protected !!
LATEST
KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟ‌ರ್: ನಾಲೆಗೆ ಹಾರಿ ಆತ್ಮಹತ್ಯೆ ಎಸ್‌.ಎಂ.ಕೃಷ್ಣ ಇನ್ನಿಲ್ಲ- ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುಶೋಕ ಸಂದೇಶ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ ಮಾಜಿ ಸಿಎಂ SMK ನಿಧನ: ನಾಳೆ ಶಾಲಾ- ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ ಅಕ್ರಮ ಪಡಿತರ ವಿರುದ್ಧ ವಿಶೇಷ ಕಾರ್ಯಾಚರಣೆ: ಆಹಾರ ಸಚಿವ ಮುನಿಯಪ್ಪ