CRIMENEWSನಮ್ಮಜಿಲ್ಲೆ

BMTC ಬಸ್‌ ಚಾಲಕನ ಮೇಲೆ ಪೊಲೀಸ್‌ ಸಿಬ್ಬಂದಿ ಹಲ್ಲೆ ಖಂಡಿಸಿ ಚಾಲಕರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾರಿಗೆ ಸೈಡ್‌ ಬಿಡಲಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ ಚಾಲಕನ ಮೇಲೆ ಜಿಗಣಿ ಠಾಣೆಯ ಪೊಲೀಸ್‌ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ರಾತ್ರಿ 11 ಗಂಟೆ ಸುಮಾರಿ ಘಟನೆ ನಡೆದಿದೆ. ಎಣ್ಣೆ ಮತ್ತಲ್ಲಿ ಬಸ್‌ ಡಿಪೋ ಒಳಗೆ ಕಾರು ನುಗ್ಗಿಸಿ ಬಸ್‌ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಹಲ್ಲೆ ಕೂಡ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಬಸ್ ಚಾಲಕ ಸುನೀಲ್ ಮೇಲೆ ಹಲ್ಲೆ ಮಾಡಿ ಪೊಲೀಸ್‌ ಸಿಬ್ಬಂದಿ ದರ್ಪ ತೋರಿದ್ದಾರೆ. ಹಲ್ಲೆ ಖಂಡಿಸಿ ಡಿಪೋದಿಂದ ಬಸ್‌ಗಳನ್ನು ಹೊರ ತೆಗೆಯುವುದಿಲ್ಲ ಎಂದು ಬಿಎಂಟಿಸಿ ಚಾಲಕರು ಪ್ರತಿಭಟಿಸಿದ್ದಾರೆ.

ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನ ಬಂಧಿಸುವ ತನಕ ಬಸ್ ಓಡಿಸಲ್ಲ. ಕರ್ತವ್ಯಕ್ಕೆ ಹಾಜರಾಗಲ್ಲ ಎಂದು ಜಿಗಣಿ ಬಸ್ ಡಿಪೋ 27ರ ಸಿಬ್ಬಂದಿ ಪಟ್ಟು ಹಿಡಿದಿದ್ದರು. ಪೊಲೀಸ್‌ ಸಿಬ್ಬಂದಿ ಮತ್ತು ಚಾಲಕನ ನಡುವಿನ ಗಲಾಟೆಯ ದೃಶ್ಯವನ್ನು ವೀಡಿಯೋ ಮಾಡಿಕೊಳ್ಳಲಾಗಿದೆ.

Megha
the authorMegha

Leave a Reply

error: Content is protected !!