NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಗುತ್ತಿಗೆ ಆಧಾರದಲ್ಲಿ 320 ಎಲೆಕ್ಟ್ರಿಕ್ ಬಸ್‌ ಪಡೆಯುವ ಸಂಪುಟ ತೀರ್ಮಾನದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ CITU

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವತಿಯಿಂದ 150 ಕೋಟಿ ರೂ.ಗಳ ವೆಚ್ಚದಲ್ಲಿ 320 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಸಚಿವ ಸಂಪುಟ ತೀರ್ಮಾನಿಸಿರುವುದನ್ನು ಕರಾರಸಾನಿಗಮಗಳ ನೌಕರರ ಫೆಡರೇಷನ್ (CITU) ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಫೆಡರೇಷನ್ ಅಧ್ಯಕ್ಷ ಎಚ್‌.ಡಿ. ರೇವಪ್ಪ, ಉಪಾಧ್ಯಕ್ಷ ಡಾ. ಕೆ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಮಂಜುನಾಥ್ ಅವರು ಜಂಟಿ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಎಲೆಕ್ಟ್ರಿಕ್ ಬಸ್‌ಗಳನ್ನು “FAME” ಯೋಜನೆಯ ಹಣ ಪಡೆದು BMTC ನಿಗಮಗಳೇ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಐಟಿಯು ಅಧ್ಯಕ್ಷ ಎಚ್‌.ಡಿ.ರೇವಪ್ಪ

ಇನ್ನು ಒಂದು ಗುತ್ತಿಗೆ ಆಧಾರಿತ ಎಲೆಕ್ಟ್ರಿಕಲ್ ಬಸ್‌ ಬಂದರೆ ನಿಗಮದ 4 ಜನ ನೌಕರರಿಗೆ ಉದ್ಯೋಗ ಇಲ್ಲದಂತಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರ್ಕಾರವೇ ನಿಗಮಗಳ ಮೂಲಕ ಸಾರ್ವಜನಿಕರಿಗೆ ಒದಗಿಸಬೇಕು. ಒಕ್ಕೂಟ ಸರ್ಕಾರ ಇಡೀ ಸಾರ್ವಜನಿಕ ಸಾರಿಗೆ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವುದರ ಭಾಗವಾಗಿ FAME -2 ಯೋಜನೆ ರೂಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಗಮಗಳ ಖಾಸಗೀಕರಣದ ಜತೆ ಸಾರ್ವಜನಿಕರಿಗೆ ಹಂತ- ಹಂತವಾಗಿ BMTC ಬಸ್‌ಗಳು ಕಣ್ಮರೆಯಾಗುತ್ತವೆ. ನಂತರ ಸಾರಿಗೆ ಪ್ರಯಾಣದ ವೆಚ್ಚ ಅತ್ಯಂತ ದುಭಾರಿಯಾಗುತ್ತದೆ ಎಂದು ವಿವರಿಸಿದ್ದಾರೆ.

ಇನ್ನು ಈಗ ತಕ್ಷಣದಲ್ಲಿ ಗುತ್ತಿಗೆ ಪಡೆದ ಪ್ರತಿಯೊಂದು ಎಲೆಕ್ಟ್ರಿಕಲ್ ಬಸ್ಸಿಗೆ 180 ಕಿ.ಮಿ. ಸಂಚರಿಸಬೇಕು, 51 ರೂಪಾಯಿಗಳಂತೆ ಪ್ರತಿ ಕಿ.ಮಿ.ಗೆ ಸಂಸ್ಥೆಯೆ ಹಣ ಪಾವತಿಸುತ್ತಿದೆ. ಗುತ್ತಿಗೆ ಬಸ್‌ ಓಡುವ ಮಾರ್ಗದಲ್ಲಿ ಹಣ ಬರದಿದ್ದರೆ BMTC ಸಂಸ್ಥೆಗೆಯೇ ಗುತ್ತಿಗೆದಾರರಿಗೆ ಹಣ ಭರಿಸಬೇಕು. ಏಕೆಂದರೆ ಒಪ್ಪಂದದ ಪ್ರಕಾರ ಗುತ್ತಿಗೆದಾರನಿಗೆ ಹಣ ಕೊಡಲೇಬೇಕು.

ಈಗಾಗಲೆ BMTC ನಿಗಮ ಸಾವಿರಾರು ಕೋಟಿ ಹಣದ ಕೊರತೆಯಿಂದ ಬಳಲುತ್ತಿದೆ. ಇನ್ನಷ್ಟು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ ಒಂದೊಂದೇ ಘಟಕಗಳನ್ನು ಖಾಸಗೀಯವರಿಗೆ ವಹಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

BMTC ನಿಗಮಕ್ಕೆ ಸರ್ಕಾರ 150 ಕೋಟಿ ಹಣ ಬಿಡುಗಡೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. BMTC ಅದೇ ಹಣದಲ್ಲಿ ಡೀಸೆಲ್ ವಾಹನಗಳನ್ನೇ ಕೊಂಡು ವಾಹನಗಳನ್ನು ಓಡಿಸಲಿ ಅಥವಾ FAME-2 ಯೋಜನೆಯಡಿ ಓಡಿಸೊದಾದರೆ ಎಲೆಕ್ಟ್ರಿಕ್ ಬಸ್ಸುಗಳನ್ನು ಸಂಸ್ಥೆ ವತಿಯಿಂದ ನಮ್ಮ ಚಾಲಕರೇ ಓಡಿಸಲಿ ಹಾಗೂ ತಾಂತ್ರಿಕ ನಿರ್ವಹಣೆಯೂ ನಮ್ಮಿಂದಲೇ ಮಾಡಿಸಲಿ ಎಂದು ಒತ್ತಾಯಿಸಿದ್ದಾರೆ.

CITU ಉಪಾಧ್ಯಕ್ಷ ಡಾ. ಕೆ. ಪ್ರಕಾಶ್

ವಾಯು ಮಾಲಿನ್ಯದ ನೆಪ ಹೇಳಿ ಸಾರ್ವಜನಿಕ ಸಾರಿಗೆ ನಿಗಮಗಳ ಖಾಸಗೀಕರಣ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಇನ್ನು BJP ಸರ್ಕಾರ ಬದಲಾವಣೆಯಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ನೀತಿಗಳು ಮಾತ್ರ BJPಯ ಡಬಲ್ ಇಂಜಿನ್ ಸರ್ಕಾರ ರೂಪಿಸಿರುವುದನ್ನೇ ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ. ಇದು ನಿಗಮಕ್ಕೆ ಹಾಗೂ ನೌಕರರಿಗೆ ಮಾರಕ ಎಂದು ವಿವರಿಸಿದ್ದಾರೆ.

ಸಾರಿಗೆ ಕಾರ್ಮಿಕರು ನಿಗಮಗಳ ಖಾಸಗೀಕರಣದ ತರಾತುರಿಯಲ್ಲಿದ್ದ BJP ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ತೀರ್ಮಾನದಿಂದ ಆತಂಕ ಮೂಡುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳ ನೌಕರರು ಒಕ್ಕೊರಲಿನಿಂದ ಖಾಸಗೀಕರಣದ ಪ್ರಕ್ರಿಯೆಯನ್ನು ವಿರೋಧಿಸಿ ಚಳವಳಿ ನಡೆಸಲು ಮುಂದಾಗೋಣ ಎಂದು CITU ಫೆಡರೇಷನ್ ಮನವಿ ಮಾಡಿದೆ.

ಇನ್ನು ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ ಚಳವಳಿ ನಡೆಸುವ ಬಗ್ಗೆ ಅಂತಿಮಾ ತೀರ್ಮಾನ ತೆಗೆದುಕೊಳ್ಳಲು ಗುರುವಾರ ಸೆ.14ರಂದು CITU ಫೆಡರೇಷನ್ ಪದಾಧಿಕಾರಿಗಳ ಸಭೆ ನಡೆಸುವುದಾಗಿ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಮಂಜುನಾಥ್ ವಿಜಯಪಥಕ್ಕೆ ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು