Please assign a menu to the primary menu location under menu

CrimeNEWSನಮ್ಮಜಿಲ್ಲೆ

BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ – ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನುತ್ತಿರುವ ಕಿರಾತಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎಂ.ಎಸ್.ಪಾಳ್ಯದಿಂದ-ಯಲಹಂಕ ಮಾರ್ಗದಲ್ಲಿ ಟಿಕೆಟ್ ಕೊಡುತ್ತಲೇ ಮುಗ್ದ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಾತನ ಅಸಲಿ ಮುಖ ಬಯಲಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಎಂ.ಎಸ್.ಪಾಳ್ಯ ಬಿಎಂಟಿಸಿ ಘಟಕದ ನಿರ್ವಾಹಕ ಕಂ ಚಾಲಕನಾಗಿರುವ ಮಂಜುನಾಥ್ ಬಸ್‌ನಲ್ಲೇ ಯುವತಿಯನ್ನು ಯಾಮಾರಿಸಿ 2ನೇ ಮದುವೆ ಆಗಿರುವ ಕಿರಾತಕ.

ಪ್ರತಿನಿತ್ಯ ಎಂ.ಎಸ್.ಪಾಳ್ಯ – ಯಲಹಂಕ ನಡುವೆ ಬಿಎಂಟಿಸಿ ಬಸ್‌ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಟಿಕೆಟ್ ಕೊಡುತ್ತಲೇ ಯುವತಿಯನ್ನು ಪರಿಚಯ ಮಾಡ್ಕೊಂಡ ಮಂಜುನಾಥ್. ಬಳಿಕ ಆಕೆಯ ಮೊಬೈಲ್‌ ನಂಬರ್ ಪಡೆದಿದ್ದಾನೆ.

ಆ ಬಳಿಕ ನಾನು ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎಂಬ ಸತ್ಯವನ್ನು ಆಕೆಗೆ ಹೇಳದೆ. ಈ ಎಲ್ಲವನ್ನು ಮುಚ್ಚಿಟ್ಟು ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ. ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ.

ಆ ವಂಚಕನ ಮಾತು ನಂಬಿದ ಆಕೆ ಆತನ ಬುಟ್ಟಿಗೆ ಬಿದ್ದು ಬಳಿಕ ಮದುವೆ ಕೂಡ ಆಗಿದ್ದಾಳೆ. ಈ ವೇಳೆ ಯುವತಿ ಕೂಡ ತನಗೆ ಮದುವೆಯಾಗಿ ಡಿವೋರ್ಸ್ ಆಗಿದೆ ಎಂದು ಕಿರಾತನಿಗೆ ತನ್ನ ಯಾವುದೆ ವಿಷಯವನ್ನು ಮುಚ್ಚಿಟ್ಟುಕೊಳ್ಳದೆ ತಿಳಿಸಿದ್ದಾಳೆ.

ಆ ವೇಳೆ ಕಂಡಕ್ಟರ್ ಪರವಾಗಿಲ್ಲ ಬಿಡು ನನಗೆ ಮದುವೆ ಆಗಿಲ್ಲ ಹೀಗಾಗಿ ನಿನಗೆ ಬಾಳು ಕೊಡ್ತೀನಿ ನಾವು ನಮ್ಮ ಸುಂದರವಾದ ಚಿಕ್ಕ ಕುಟುಂಬ ಮಾಡಿಕೊಂಡು ಸಮಾಜದಲ್ಲಿ ಹೆಮ್ಮೆಯಿಂದ ಜೀವನ ನಡೆಸೋಣ ಎಂದು ನಂಬಿಸಿದ್ದಾನೆ.

ಅಲ್ಲದೆ ನೀನಂದ್ರೆ ನನಗೆ ತುಂಬಾ ಇಷ್ಟ ಎಂದು ಹಿಂದೆಬಿದ್ದಿದ್ದ. ಈತನ ಮಾತು ನಂಬಿದ ಆಕೆ ಮದುವೆ ಒಪ್ಪಿಗೆ ಸೂಚಿಸಿದ್ದಳು. ಆ ಬಳಿಕ ಪ್ರೀತಿ ಹೆಸರಲ್ಲಿ ಆಕೆಯೊಂದಿಗೆ ಜಾಲಿಟ್ರಿಪ್ ಮಾಡಿದ್ದು, ಟ್ರಿಪ್ ಮುಗಿಯುತ್ತಿದ್ದಂತೆ ಮನೆಯವರ ವಿರೋಧದ ನಡುವೆಯೂ ದೇವಾಲಯದಲ್ಲಿ ಆಕೆ ಈತನೆ ಜೊತೆ ಮದುವೆಯಾದಳು.

ಹೀಗೆ ಮದುವೆ ಆದ ಮೂರು ತಿಂಗಳ ವರೆಗೂ ಯಾವುದೇ ವಿಘ್ನವಿಲ್ಲದೆ ಸಂಸಾರ ಆನಂದದಿಂದಲೇ ಸಾಗಿತ್ತು. ಆ ಮೂರು ತಿಂಗಳ ಬಳಿಕ ಈ ಕಿರಾತಕ ಕಂಡಕ್ಟರ್‌ನ ಮತ್ತೊಂದು ಮುಖ ಬಯಲಾಗಿದ್ದು, ನೆಲಮಂಗಲದಲ್ಲಿ ಇನ್ನೊಂದು ಕುಟುಂಬ ಇರುವ ಬಗ್ಗೆ ತಿಳಿದು ಯುವತಿ ಕಂಗಾಲಾಗಿದ್ದಾಳೆ.

ಈತ ಈ ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ ಎಂಬ ವಿಚಾರ ಗೊತ್ತಾಗುವ ವೇಳೆಗೆ ಇತ್ತ ಆಕೆ ಗರ್ಭಿಣಿಯಾಗಿದ್ದಾರೆ. ಈಗ ಎಲ್ಲವನ್ನು ಮಾಡಿದ ಬಳಿಕ ನಿರ್ವಾಹಕ ನನಗೆ ನೀನು ಬೇಡ ಎಂದು ಹೇಳುತ್ತಿದ್ದಾನೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದಿರುವ ಆಕೆ ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ನ್ಯಾಯ ಕೊಡಿಸುವಂತೆ ದೂರು ದಾಖಲಿಸಿದ್ದಾಲೆ.

ಈತ ಮೋಸ ಮಾಡಿದ್ದಾನೋ ಇಲ್ಲವೋ ಅದು ನನಗೆ ಬೇಟ ಈಗ ನನ್ನ ಗಂಡ ಬೇಕು, ಹೊಟ್ಟೆಯಲ್ಲಿರುವ ನನ್ನ ಮಗುವಿಗೆ ತಂದೆ ಬೇಕು ಎಂದು ಹಠ ಹಿಡಿದಿದ್ದಾಳೆ. ಇನ್ನು ಮೊದಲ ಮದುವೆ, ಇಬ್ಬರು ಮಕ್ಕಳಿರುವುದನ್ನು ಮುಚ್ಚಿಟ್ಟು ಕದ್ದುಮುಚ್ಚಿ ಮದುವೆಯಾಗಿರುವ ಕಂಡಕ್ಟರ್‌ಗೆ ಕೆಲಸ ಹೋಗುವ ಭೀತಿಯೂ ಎದುರಾಗಿದೆ.

Leave a Reply

error: Content is protected !!
LATEST
ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು... KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬ... ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್ ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್‌ BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ