NEWSನಮ್ಮರಾಜ್ಯಬೆಂಗಳೂರು

BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು ಬಳಿಕ ಚಾಲಕ ಹುದ್ದೆಗೇ ಅವರನ್ನು ನೇಮಿಸುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು (ಆ) ಆದೇಶ ಹೊರಡಿಸಿದ್ದಾರೆ.

ಕಳೆದ 2023 ಆಗಸ್ಟ್‌ನಲ್ಲಿ ಎಂಡಿ ಅವರು ಹೊರಡಿಸಿದ್ದ ಆದೇಶ ಮೇರೆಗೆ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಲಾಗಿತ್ತು. ಪ್ರಸ್ತುತ ನಿರ್ವಾಹಕ ಕೊರತೆ ಇಲ್ಲದಿರುವುದರಿಂದ ಇಂದು ನಿಯೋಜನೆ ಆದೇಶವನ್ನು ವಾಪಸ್‌ ಪಡೆಯುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಸೋಮವಾರ ಜೂನ್‌ 30ರಂದು ಆದೇಶ ಹೊರಡಿಸಿರುವ ಮುಖ್ಯ ಸಂಚಾರ ವ್ಯವಸ್ಥಾಪಕರು ಸಕ್ಷಮ ಪ್ರಾಧಿಕಾರಿಯವರಾದ ವ್ಯವಸ್ಥಾಪಕ ನಿರ್ದೇಶಕರ ಆದೇಶದನ್ವಯ ಘಟಕಗಳಲ್ಲಿ ನಿರ್ವಾಹಕರ ಕೊರತೆಯನ್ನು ಸರಿದೂಗಿಸಲು ಚಾಲಕ ಸಿಬ್ಬಂದಿಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಪದವೃಂದ ಮತ್ತು ನೇಮಕಾತಿ) ನಿಯಮಾವಳಿ 17/1 ರ ಅಡಿಯಲ್ಲಿ ತಾತ್ಕಾಲಿಕವಾಗಿ ಚಾಲಕ-ಕಂ-ನಿರ್ವಾಹಕ ಹುದ್ದೆಯಲ್ಲಿ ಷರತ್ತು ಮತ್ತು ನಿಬಂಧನೆಗಳನ್ವಯ ನಿಯೋಜಿಸಲಾಗಿತ್ತು.

ಮುಂದುವರಿದಂತೆ. ಪ್ರಸ್ತುತ ಸಂಸ್ಥೆಗೆ ಹೊಸದಾಗಿ 2,284 ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಹಂತ ಹಂತವಾಗಿ ಎಲ್ಲ ಘಟಕಗಳಿಗೆ ಅನುಸೂಚಿಗಳ ಕಾರ್ಯಾಚರಣೆಗೆ ಅನುಗುಣವಾಗಿ, ಖಾಲಿಯಿರುವ ಹುದ್ದೆಗಳ ಅನುಸಾರ ನಿರ್ವಾಹಕರನ್ನು ನಿಯೋಜನೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯು 25-07-2025 ಕ್ಕೆ ಮುಕ್ತಾಯಗೊಳ್ಳಲಿದೆ.

ಈ ಸಂಬಂಧ, ಘಟಕಗಳಲ್ಲಿ ನಿರ್ವಾಹಕರ ಲಭ್ಯತೆಗನುಗುಣವಾಗಿ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಚಾಲಕರನ್ನು ಹಂತ ಹಂತವಾಗಿ 31-07-2025 ರೊಳಗಾಗಿ ಚಾಲಕರ ಹುದ್ದೆಯಲ್ಲಿಯೇ ನಿಯೋಜಿಸಲು ಕ್ರಮ ಕೈಗೊಳ್ಳುವುದು.

ಹೀಗಾಗಿ ಅಂತಿಮವಾಗಿ 31-07-2025 ರಿಂದ ಜಾರಿಗೆ ಬರುವಂತೆ ನಿಯಮ 17/1ರ ಅಡಿಯಲ್ಲಿ ಚಾಲಕರನ್ನು ಚಾಲಕ-ಕಂ-ನಿರ್ವಾಹಕರಾಗಿ ನಿಯೋಜಿಸಿರುವ ಎಲ್ಲ ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!