KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!

- ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರು ಮಾಡಿರುವ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಜೂನ್ 26 ರಂದು ಆದೇಶ ಹೊರಡಿಸಿದ್ದಾರೆ.
ಇಲ್ಲಿ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಸಂಬಂಧಪಡುವುದಿಲ್ಲ. ಹೀಗಾಗಿ ನೌಕರರಿಗೆ ಪ್ರಸ್ತುತ ಇರುವ ಶೇ.24ರಷ್ಟು ಎಚ್‌ಆರ್‌ಎ ಬದಲಿಗೆ ಈಗ ಶೇ.20ರಷ್ಟು ಎಚ್‌ಆರ್‌ಎ ಈ ಆದೇಶದಿಂದ ಸಿಗಲಿದೆ. ಹೀಗಾಗಿ ವೇತನದಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವಾಗುವುದಿಲ್ಲ.
ಅದು ಹೇಗೆ ಎಂದರೆ? ನಿರ್ವಾಹಕರ ವೇತನವನ್ನು ಉದಾಹರಣೆಗೆ ತೆಗೆದುಕೊಳ್ಳೋಣ ಪ್ರಸ್ತುತ 24,260 ಮೂಲ ವೇತನ ಇದ್ದರೆ ಅದರ ಡಿಎ ಶೇ.42.50 ಇದೇ. ಅಂದರೆ ಅವರು 10,311 ರೂ. DA ಪಡೆಯುತ್ತಿದ್ದಾರೆ. ಅದಕ್ಕೆ ಶೇ.24 HRA ಇದೆ ಅಂದರೆ 5822 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ಮೂಲವೇತನ 24260 + ಡಿಎ 10311+ ಎಚ್‌ಆರ್‌ಎ 5822 = ಪ್ರಸ್ತುತ ಜೂನ್ 2025ರ ವೇತನ 40393 ಇದೆ ಅಂದುಕೊಳ್ಳೋಣ. ಈ ನಡುವೆ ದಿನಾಂಕ 01.07.2022ರಲ್ಲಿ 24260-(500×3=1500 ಇಂಕ್ರಿಮೆಂಟ್ ಕಳೆದರೆ) 24,260-1500 = 22,760 ಆಗಿನ ಮೂಲವೇತನ ಇದೆ.
ಈ 22,760ರ ಮೂಲವೇತನಕ್ಕೆ ಶೇ.31ಡಿಎ 7056 ರೂ.ಗಳನ್ನು ಜತೆಗೆ ಇದೇ ಮೂಲ ವೇತನಕ್ಕೆ ಶೇ.24 HRA 5,823 ರೂ.ಗಳನ್ನು ಸೇರಿಸಿದರೆ. ಈಗ ಒಟ್ಟಾರೆ 22,760 + 7056 + 5823= 35639 ರೂ.ಗಳು 01.07.2022ರ ದಿನಾಂಕದ ಸಂಬಳ ಆಗಿರುತ್ತದೆ.
22,760 ಮೂಲವೇತನ + 7056 ಡಿ ಎ ಶೇ.31 ವಿಲೀನಗೊಳಿಸಿದಾಗ 29,816 ಆಗಿದ್ದು ಸ್ಲಾಬ್ ಪ್ರಕಾರ 29,850 ಮೂಲವೇತನ ಆಗುತ್ತದೆ. ಮುಂದುವರಿದು ದಿನಾಂಕ 01.07.2022 ರಿಂದ ಜುಲೈ ತಿಂಗಳ 2025 ರ ವರೆಗೂ ಡಿಎ ಲೆಕ್ಕ ಮಾಡದೆ ನೇರವಾಗಿ ಸಂಬಳಕ್ಕೆ ಬಂದು ಬಿಡುತ್ತದೆ.
29,850ರ ಮೂಲವೇತನಕ್ಕೆ (ಕಳೆದಿರುವ ಮೂರು ಇಂಕ್ರಿಮೆಂಟ್ 500 ರೂ.ಗಳ ಬದಲಿಗೆ 550 ರೂಪಾಯಿಗಳ ಮೂರು ಇಂಕ್ರಿಮೆಂಟ್ ಹೆಚ್ಚಿಸಿಕೊಳ್ಳಬೇಕು) 550×3= 1650+29850 =31500 ಪ್ರಸ್ತುತ ಜುಲೈ 2025ರ ಮೂಲ ವೇತನವಾಗುತ್ತದೆ. ಜುಲೈ 2025ರ ಮೂಲವೇತನ 31500 ರೂಪಾಯಿ + ಡಿಎ ಶೇ.12.25 ಲೆಕ್ಕಾಚಾರ ಹಾಕಿದಾಗ ಆ ನಿರ್ವಾಹಕನಿಗೆ 3859 HRA ಶೇ.20ರಷ್ಟು ಲೆಕ್ಕಾಚಾರ ಹಾಕಿದಾಗ 6,300 ರೂಪಾಯಿಗಳು. ಒಟ್ಟಾರೆ 31,500+3859+6300= 41659 ರೂ. ವೇತನ ಆಗುತ್ತದೆ.
ಇದನ್ನು ಸಂಸ್ಥೆ ವತಿಯಿಂದ ಬಿಡಿಎ ತೋರಿಸುತ್ತಾರೆ ಈ ಮೇಲೆ ತಿಳಿಸಿದಂತೆ ಜೂನ್ 2025ರ ವೇತನ 40,393 ಸರ್ಕಾರದ ಆದೇಶದಂತೆ ಡಿಎ ವಿಲೀನಗೊಳಿಸಿದಾಗ ಆಗುವಂತಹ ಪೂರ್ಣ ಪ್ರಮಾಣದ ಸಂಬಳ 41,659 ರೂಪಾಯಿಗಳು. ಅಂದರೆ 41,659-40,393=1266 ರೂ.ಗಳು ಮಾತ್ರ ವೇತನದಲ್ಲಿ ಹೆಚ್ಚಾಗಿ ಸಿಗುತ್ತದೆ.
ಹೀಗಾಗಿ ತಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮೂಲವೇತನ ಜಾಸ್ತಿಯಾಗುತ್ತದೆ. ಸದ್ಯಕ್ಕೆ ಶೇ.24ರಷ್ಟಿರುವ HRA ಶೇ.4 ಕಡಿಮೆಯಾಗಿ ಶೇ.20 ಪರ್ಸೆಂಟ್‌ಗೆ ಇಳಿಕೆಯುತ್ತದೆ. ಡಿಎ ಪ್ರಸ್ತುತ ದಿನಾಂಕ 01.01.2025ದಕ್ಕೆ ಶೇ.12.25 ರಷ್ಟು ಡಿಎ ಇರುತ್ತದೆ. ಇದನ್ನು ಗಮನಿಸಿದರೆ ಇಲ್ಲಿ ಯಾವುದೇ ಹೇಳಿಕೊಳ್ಳುವಂತಹ ಸಂಬಳದ ವ್ಯತ್ಯಾಸವಾಗುವುದಿಲ್ಲ. ಕಾರಣ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಅನ್ವಯವಾಗುವುದಿಲ್ಲ. ( ಒಂದು ವೇಳೆ 7ನೇ ವೇತನ ಆಯೋಗ ಸಾರಿಗೆ ನೌಕರರಿಗೂ ಸಿಕ್ಕಿದ್ದರೆ ಸರ್ಕಾರಿ ನೌಕರರ ವೇತನದಷ್ಟೇ ಸಿಗುತ್ತಿತ್ತು.
ಒಟ್ಟಾರೆ ಈ ಬಿಡಿಎ ಮೂಲ ವೇತನಕ್ಕೆ ವಿಲೀನ ಮಾಡಿರುವುದರಿಂದ ಹೇಳಿಕೊಳ್ಳುವ ರೀತಿಯಲ್ಲಿ ವೇತನ ಹೆಚ್ಚಳವಾಗದಿದ್ದರೂ ಕೂಡ ಅಲ್ಪ ಮಟ್ಟಿಗೆ ಹೆಚ್ಚಾಗುತ್ತದೆ. ಆದರೆ HRA ಶೇ.4ರಷ್ಟು ಕೈಬಿಟ್ಟು ಹೋಗುತ್ತದೆ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು.
Related

You Might Also Like
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು: ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಮುಖ್ಯಮಂತ್ರಿ...
ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ
ಮೈಸೂರು: ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಇಂದು ಭೇಟಿ ನೀಡಿ ಆಹಾರ ಧಾನ್ಯಗಳ...
ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್
ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ...
ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ...
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...