CRIMENEWSನಮ್ಮಜಿಲ್ಲೆ

BMTC: ತನ್ನ ಬಗ್ಗೆ ಅಶ್ಲೀಲ ಮೆಸೆಜ್‌ ಹಾಕಿದ ಕಂಡಕ್ಟರ್‌ ವಿರುದ್ಧ FIR ದಾಖಲಿಸಿದ ಚಾಲಕನ ಪತ್ನಿ – 6ಮಂದಿ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಪ್ರತಿ ದೂರು ದಾಖಲಿಸಿದ ನಿರ್ವಾಹಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಶ್ಲೀಲಪದ ಬಳಕೆ ಮಾಡಿ ನಿನ್ನ ವಿಡಿಯೋ ಬಿಟ್ಟರೆ ನಿನ್ನ ಗಂಡ ಆತ್ಮಹತ್ಮೆ ಮಾಡಿಕೊಳ್ಳುತ್ತಾರೆ ಎಂಬುವುದು ಸೇರಿದಂತೆ ಇತರೆ ಅಸಹ್ಯವಾಗಿ ವಾಟ್ಸಾಪ್‌ ಮಾಡಿರುವ ಜತೆಗೆ ಬೆದರಿಕೆ ಹಾಕಿದ್ದಾನೆ ಎಂದು ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್‌ ರಾಜ್‌ ಎಂಬುವರ ವಿರುದ್ಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ (ಡಿ.9) ಅನ್ನಪೂರ್ಣ ಎಂಬುವರು ದೂರು ನೀಡಿದ್ದಾರೆ.

ಇದೇ ದೂರಿಗೆ ಸಂಬಂಧಿಸಿದಂತೆ ಇಂದು ಚೇತನ್‌ ರಾಜ್‌ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಈ ಮಹಿಳೆ ಸೇರಿ 6 ಮಂದಿ ವಿರುದ್ಧ ಪ್ರತಿ ದೂರನ್ನು ಇದೇ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ನೀಡಿದ್ದಾರೆ.

ಇನ್ನು ಪೀಣ್ಯ ಉಪ ವಿಭಾಗದ ಪೊಲೀಸರು ಈ ಇಬ್ಬರು ನೀಡಿರುವ ದೂರನ್ನು ದಾಖಲಿಸಿಕೊಂಡು ಎಫ್‌ಐಆರ್‌ ಮಾಡುವ ಮೂಲಕ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ಅನ್ನಪೂರ್ಣ ಎಂಬುವರು ನೀಡಿದ ದೂರಿನಲ್ಲಿ ಏನಿದೆ?: ಎಂ.ಎಂ.ಅನ್ನಪೂರ್ಣ ಅವರು ಡಿ.9ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ‘ಸಾಮಾಜಿಕ ಜಾಲತಾಣದಲ್ಲಿ ನನ್ನ ಪತಿ ಮಲ್ಲೇಸಪ್ಪ ಅವರನ್ನು ಗುರಿಯಾಗಿಸಿಕೊಂಡು ನನ್ನ ಪತಿ ಕರ್ತವ್ಯಕ್ಕೆ ಹೋದ ಮೇಲೆ ನನ್ನ ಮನೆಗೆ ಅನ್ಯ ಪುರುಷರು ಬಂದು ಹೋಗುವ ಸಿಸಿ ಟಿವಿ ಪೂಟೇಜ್‌ ಇರುವುದಾಗಿ ಹಾಗೂ ಅನೈತಿಕ ಸಂಬಂಧ ಹೊಂದಿರುವ ಮಂಚದ ವಿಡಿಯೋ ಸಾಮಾಜಿಕ ಜಾಲತಾಣದಲಿ ಬಿಟ್ಟು, ನಿನ್ನ ವತಿಯವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ನಾವು ಚಿನ್ನಮ್ಮನ ಕೆರೆ ಆಚ್ಚುಕಟ್ಟು ಪೊಲಿಸ್ ಠಾಣೆಯಲಿ ಮೊ.ನಂ: 7619456** ರಿಂದ ಬೆದರಿಕೆ ಕರೆ ಮಾಡುತ್ತಿರುವ ಬಗ್ಗೆ ಠಾಣೆಯ ಗಮನಕ್ಕೆ ತಂದಿರುತ್ತೇವೆ. ಆದರೂ ಕೂಡ ಆರೋಪಿ ಚೇತನ್‌ ರಾಜ್‌ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಮೆಸೆಜ್‌ ಮಾಡುತ್ತಿರುತ್ತಾನೆ. ನ.29ರಂದು ಕಾಮಗ್ರಾಟ್ಸ್‌ ಬ್ರದರ್‌, ಯಾಕೆಂದರೆ ಯಾವನಿಗೋಸ್ಕರನೋ ನೀನು ನಿನ್ನ ಹೆ..ನ ಪಣಕ್ಕಿಟ್ಟೀರೋದಕ್ಕೆ…

ವಿನಾಕಾರಣ ನನ್ನನ್ನು ಕೆಣಕೋ ನಿಮ್ಮನ್ನ ಬಿಡೋಕಾದ್ರೂ ಬಿಡ್ತಿನಾ ನಾನು ಸಾಧ್ಯವೇ ಇಲ್ಲ ಎಂದು ಮೆಸೆಜ್‌ ಮಾಡಿದ್ದು, ಈ ವಿಚಾರವಾಗಿ ಕೇಳಲು ಡಿ.9ರಂದು ಸಂಜೆ ಸುಮಾರು 6ಗಂಟೆಗೆ ಬಸ್‌ ಘಟಕದ ದ್ವಾರ ಭಾಗದಲ್ಲಿ ನಿಂತು ಹತ್ತಿರ ಬಂದಾಗ ಯಾಕಪ್ಪ ಈ ರೀತಿ ಮೆನೆಜ್ ಮಾಡುತ್ತೀಯಾ ನಿನಗೂ ಅಕ್ಕ ತಂಗಿಯರಿಲ್ಲವೇ? ಎಂದು ಹೇಳಿದಾಗ ಹೋಗೆ ಸುಮ್ಮನೇ ಸೂ* ದಿನಕ್ಕೆ ಒಬ್ಬರ ಜೊತೆ ಮ*ಗುತ್ತೀಯಾ ಎಂದು ಹೇಳಿ ನನ್ನ ಎದೆಯ ಭಾಗವನ್ನು ಆಸಭ್ಯವಾಗಿ ನೋಡಿ ಅಸಭ್ಯ ರೀತಿಯಲಿ ಕೆಟ್ಟ ಅರ್ಥ ಬರುವಂತೆ ಕೈ ಸನ್ನೆ ಮಾಡಿ ಮಧ್ಯದ ಬೆರಳನ್ನು ತೋರಿಸಿದ,

ನಂತರ ಚೇತನ್ ರಾಜ್‌ನನ್ನು ಠಾಣೆಗೆ ಕರೆತರಲು ಎಳೆದಾಗ ಅವ್ಯಾಚ ಶಬ್ದಗಳಿಂದ ಬೈದಿದ್ದಾನೆ. ನನ್ನ ಬಗ್ಗೆ, ಅವ್ಯಾಚವಾಗಿ ಬೈಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಕಾರಣ ನಾನು ಮನನೊಂದು ಮಾನಸಿಕವಾಗಿ ಕುಗ್ಗಿ ಹೋಗಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿರುತ್ತೇನೆ, ಹೀಗೆ ನನ್ನ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ, ಅವ್ಯಾಚ ಶಬ್ದಗಳಿಂದ ನಿಂದಿಸಿ ಮೆಸೆಜ್ ಮಾಡುತ್ತಾ ಬೆದರಿಕೆ ಹಾಕುತ್ತಿರುವ ಹಾಗೂ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿ ತನ್ನ ಮಧ್ಯದ ಬೆರಳನ್ನು ತೋರಿಸಿರುವ ಚೇತನ್ ರಾಜ್ ಅಲಯಾಸ್‌ ವಿಷ್ಣು ಪ್ರಿಯಾ ಅವರ ವಿರುದ್ಧ ಸೂಕ್ತ ರೀಣಾ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾರೆ.

ಈ ದೂರಿಗೆ ಪ್ರತಿಯಾಗಿ ಚೇತನ್‌ ರಾಜ್‌ ನೀಡಿರುವ ದೂರು ಏನು?: ಚೇತನ್ ರಾಜ್ ಡಿ.9 ರಂದು ಪ್ರೀಮಿಯರ್ ಸಂಜೀವಿನಿ ಆಸ್ಪತ್ರೆಯಲಿ ನೀಡಿರುವ ಹೇಳಿಕೆ ದೂರಿನ ವಿಷಯವೇನೆಂದರೇ, ನಾನು ಬಿ.ಎಂ.ಟಿ.ಸಿ.-9ನೇ ಡಿವೋನಲ್ಲಿ   ನಿರ್ವಾಹಕನಾಗಿ ಸುಮಾರು 15 ವರ್ಷಗಳಿಂದ ಡ್ಯೂಟಿ ಮಾಡುತ್ತಿದ್ದೇನೆ.

ಡಿ.9 ರಂದು ನನಗೆ ಸಾಮಾನ್ಯ ಪಾಳಿ ಕರ್ತವ್ಯವಿದ್ದು ಬೆಳಗ್ಗೆ,7:40ರಿಂದ ಸಂಜೆ 6 ಗಂಟೆವರೆಗೂ ಡ್ಯೂಟಿ ಮಾಡಿ ಬಂದು ದಿನನಿತ್ಯದ ಕಲೆಕ್ಷನ್ ಆಗಿರುವ ಹಣವನ್ನು ಡಿಪೋಗೆ ಕಟ್ಟೋಕೆ ಹೋದಾಗ ನಾನು ಕ್ಯಾಶ್‌ ಕೌಂಟರ್ ಹತ್ತಿರ ನಿಂತಿದ್ದಾಗ, ಅದೇ ಸಮಯಕ್ಕೆ ನಮ್ಮ ಸಾರಿಗೆ ಸಂಸ್ಥೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕೂಟ ಎಂಬ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಹಾಗೂ ಮಲ್ಲೇಶ್‌ ಇದ್ದು ಆ ಇಬ್ಬರೂ ನನ್ನನ್ನು ನೋಡುತ್ತಾ ನಿಂತಿದ್ದರು.

ಆಗ ಮಲ್ಲೇಶನು (ಡಿಪೋ 13 ರ ಚಾಲಕ) ಬೇಗ ಕಟ್ಟಿ  ಬಾರೋ ಸ್ವಲ್ಪ ಕೆಲಸ ಇದೆ ಅಂತ ಹೇಳಿದ ನಂತರ ನಾನು ಹಣವನ್ನು ಕಟ್ಟಿ ಆಚೆ ಬಂದಾಗ ಮಲ್ಲೇಶಪ್ಪನು ನನ್ನ ಹೆಗಲ ಮೇಲೆ ಕೈ ಹಾಕಿ ತಬ್ಬಿಕೊಂಡು ಬಾ ಅಂದಾಗ ನಾನು ಕೊಸರಿಕೊಂಡು ಕೈಯನ್ನು ತೆಗೆಸಿದೆ. ಆಗ ನಮ್ಮ ಸೆಕ್ಯೂರಿಟಿ ಗಾರ್ಡರ್ ನಮ್ಮನ್ನು ಹೊರಗಡೆ ಮಾತನಾಡಿಕೊಳ್ಳಿ ಎಂದು ಕಳುಹಿಸಿದರು.

ನಾನು ಡಿಪೋ ಹೊರಗೆ ಬರುವಾಗ ಚಂದ್ರು ಮತ್ತು ಮಲ್ಲೇಶ್ ಇಬ್ಬರೂ ಕೊರಳಪಟ್ಟಿಗೆ ಕೈ ಹಾಕಿ ಗೇಟ್‌ನಿಂದ ಹೊರಗಡೆ ಏಳೆಯಲು ಪ್ರಯತ್ನಿಸಿದರು. ಆಗ ಚಂದ್ರು ಎಂಬುವನು ನನ್ನ ಜಾತಿ  ಗೊತ್ತಿದ್ದರೂ ಸಹ, ನನಗೆ ನಿನ್ನ ಅಮ್ಮನ ಜಾತಿ ನಾ ಕೆ* ಸೂ* ಮಗನೆ ಎಂದು ನಿನೇನಾ ದೊಡ್ಡ ಪುಂಡಂಗನಾ ನೀನು ನಾವೇನು ತೋರಿಸ್ತೀವಿ ಬಾ ಆಚೆ ಎಂದು ಜೋರಾಗಿ ಕೂಗಾಡುತ್ತಾ, ಗೇಟ್ಟಿಂದ ಎಳೆಯಲು ಪ್ರಯತ್ನಿಸಿದ ಆಗ ಅಲ್ಲಿದ್ದ ಜೀಪ್‌ನ ಸಪೋರ್ಟ್‌ನಿಂದ ನಾನು ಅಲ್ಲೆ ನಿಂತೆ.

ಆಗ ಗೇಟ್ ಬಳಿ ಇದ್ದ ಮಲ್ಲೇಶಪ್ಪನ ಹೆಂಡತಿ ಅನ್ನಪೂರ್ಣ ಇತರರು ಸೇರಿ ನನಗ ಕೈ ಮತ್ತು ಕಾಲಿನಿಂದ ಹೊಡೆದರು ಆಗ ಸೆಕ್ಯೂರಿಟಿ ಗಾರ್ಡರ್ ನನ್ನನ್ನು ಅಲಿಂದ ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುತ್ತಿರುವಾಗ ಇಬ್ಬರೂ ನನ್ನ ಬಟ್ಟೆಯನ್ನು ಎಳೆದು ಹರಿದು ಹಾಕಿದರು. ಇದರಿಂದ ಬಟ್ಟೆಯ ಗುಂಡಿಗಳು ಕಿತ್ತು ಹೋಗಿವೆ.

ಆದರೂ ಸಹ ಸೆಕ್ಯೂರಿಟಿ ಗಾರ್ಡ್‌ ನನ್ನನ್ನು ಒಂದು ರೂಮ್‌ನಲ್ಲಿ ಸುರಕ್ಷಿತತವಾಗಿ ಕೂರಿಸಿ, ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದರು. ನಂತರ ನಮ್ಮ ಸಂಸ್ಥೆಯ ಸಾರಥಿ ವಾಹನದಲ್ಲಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದರು. ನನ್ನ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೈದ್ಯರ ಸಮಕ್ಷಮದಲ್ಲಿ ಹೇಳಿಕೆ ನೀಡಿರುತ್ತೇನೆ ಎಂದು ಚೇತನ್‌ ರಾಜ್‌ ದೂರು ನೀಡಿದ್ದಾರೆ.

ಒಟ್ಟಾರೆ ಸಾರಿಗೆ ಸಂಸ್ಥೆಯಲ್ಲಿ ಡ್ಯೂಟಿ ಮಾಡುತ್ತಿರುವ ಕೆಲ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಬೇರೆಯವರ ಸಮಸ್ಯೆ ಏನಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ತವಕದಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಆಡಿಯೋ ಮಾಡುವುದು ಮೆಸೆಜ್‌ ಹಾಕುವುದು ಮಾಡಿಕೊಂಡು ಬೀದಿ ರಂಪಾಟ ಮಾಡಿಕೊಳ್ಳುವುದರಲ್ಲೆ ತೊಡಗಿದ್ದಾರೆ. ಇದರಿಂದ ಇವರಿಗೇನು ಲಾಭವಾಗುತ್ತದೋ ಗೊತ್ತಿಲ್ಲ.

ಇನ್ನಾದರೂ ನಾವು ಸಂಸ್ಥೆಯ ನೌಕರರು ಸಹೋದ್ಯೋಗಿಗಳು ನಮಗೆ ನಾವೇ ನಿಂದಿಸಿಕೊಳ್ಳುವುದು ತರವಲ್ಲ ಎಂದು ತಿಳಿದು ಬದುಕಿದರೆ ಬಾಳು ಬಂಗಾರವಾದೀತೇನೊ ಗೊತ್ತಿಲ್ಲ.

Megha
the authorMegha

Leave a Reply

error: Content is protected !!