CRIMENEWSನಮ್ಮಜಿಲ್ಲೆಬೆಂಗಳೂರು

BMTC: ಹೋಟೆಲ್‌ಗೆ ನುಗ್ಗಿದ ಎಲೆಕ್ಟ್ರಿಕ್‌ ಬಸ್‌, ಓರ್ವ ಯುವತಿ ಸಾವು, ಮೂವರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್‌ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಫುಟ್​ಪಾತ್​ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್​ಪಾತ್​ ಮೇಲೆ ಹಾಕಿಕೊಂಡಿದ್ದ ಸಣ್ಣ ಹೋಟೆಲ್​ ಕೂಡ​ ಸಂಪೂರ್ಣ ದ್ವಂಸವಾಗಿರುವ ಘಟನೆ ಪೀಣ್ಯ 2ನೇ ಹಂತದಲ್ಲಿ ನಡೆದಿದೆ.

ಇಂದು ಈ ಅಪಘಾತನ ಸಂಭವಿಸಿದ್ದು, ಫುಟ್​ಪಾತ್​ ಮೇಲೆ ಹೋಗುತ್ತಿದ್ದ 25 ವರ್ಷದ ಸುಮಾ ಎಂಬುವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಅಲ್ಲದೆ ಇವರು ಸೇರಿದಂತೆ 2-3 ಮಂದಿ ಕೂಡ ಗಾಯಗೊಂಡಿದ್ದಾರೆ.

ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಎಂಟಿಸಿ ಘಟಕ (22ರ KA.51.AK.4170) ಬಸ್​ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಈ ಅಪಘಾತಕ್ಕೆ ಡ್ರೈವರ್ ಬದಲು ಕಂಡಕ್ಟರ್​ ಬಸ್ ಚಲಾಯಿಸಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಚಾಲಕನ ಬದಲಾಗಿ ನಿರ್ವಾಹಕ ರಮೇಶ್ ಬಸ್ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.

ನಿರ್ವಾಹಕ ರಮೇಶ್ ಚಾಲನೆ ವೇಳೆ ಬ್ರೇಕ್‌ ಬದಲು‌ ಎಕ್ಸಲೇಟರ್ ಒತ್ತಿದ ಪರಿಣಾಮ ಬಸ್ ಫುಟ್​ಪಾತ್​ಗೆ ನುಗ್ಗಿದೆ ಪರಿಣಾಮ 25ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಫುಟ್‌ಪಾತ್ ನಲ್ಲಿದ್ದ ಬೀದಿ ಬದಿ ಹೋಟೆಲ್‌ನಲ್ಲಿದ್ದ ಇಬ್ಬರಿಗೆ ಗಾಯವಾಗಿದೆ.

ಈ ಬಸ್‌ ಚಾಲಕ ಮತ್ತು ನಿರ್ವಾಹಕರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಚಾಲಕ ನಾನು ಬಸ್‌ ಚಲಾಯಿಸುವುದಿಲ್ಲ ಎಂದು ಹೋಗಿದ್ದಾನೆ. ಇದರಿಂದ ನಿರ್ವಾಹಕ ರಮೇಶ್ ಬಸ್‌ ಓಡಿಸಿಕೊಂಡು ಬರುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ನಿಖರವಾಗಿ ಆಗಿರುವುದು ಏನು ಎಂಬುದರ ಬಗ್ಗೆ ಇನ್ನಷ್ಟೆ ಗೊತ್ತಾಗಬೇಕಿದೆ.

Megha
the authorMegha

Leave a Reply

error: Content is protected !!