Search By Date & Category

NEWS

BMTC: ಪೊಲೀಸ್‌ ಪ್ರಕರಣ ದಾಖಲಾಗಿರುವ ನೌಕರರು FIR ಕಾಪಿ ಕಳಿಸಿ – ನೌಕರರ ಸಂಘ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕಳೆದ 2021ರ ಏಪ್ರಿಲ್‌ನಲ್ಲಿ ಮಾಡಿದ ಮುಷ್ಕರದ ಸಮಯದಲ್ಲಿ  ನೌಕರರ ವಿರುದ್ಧ ದಾಖಲಾಗಿರುವ ಪೊಲೀಸ್‌ ಪ್ರಕರಣಗಳ FIRಕಾಪಿಗಳನ್ನು ತುರ್ತಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಕ್ಕೆ ಕೊಡಬೇಕು ಎಂದು ಸಂಘದ ಖಜಾಂಚಿ ಯೋಗೇಶ್‌ ಮನವಿ ಮಾಡಿದ್ದಾರೆ.

ಮುಷ್ಕರದ ಸಮಯದಲ್ಲಿ ಬಿಎಂಟಿಸಿಯ  ಸುಮಾರು 83 ನೌಕರರು ಮತ್ತು ನೌಕರರ ಕುಟುಂಬದವರ ವಿರುದ್ಧ FIRಗಳನ್ನು ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾಡಲಾಗಿದೆ.

ಈಗ ಮತ್ತೆ ಅವರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವುದಕ್ಕೆ ಇದು ಅಡ್ಡಿಯಾಗುತ್ತಿದೆ. ಹೀಗಾಗಿ ಈ ಎಲ್ಲ ಪ್ರಕರಣಗಳನ್ನು ಕೈ ಬಿಡುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗುತ್ತಿದೆ. ಅವರು ಎಲ್ಲ ಪ್ರಕರಣಗಳನ್ನು ರದ್ದು ಪಡಿಸಿದರೆ ನೌಕರರಿಗೆ ಅನುಕೂಲವಾಗಲಿದೆ.

ಈ ಹಿನ್ನೆಲೆಯಲ್ಲಿ ಯಾರಾರ ವಿರುದ್ಧ FIR ಆಗಿದೆಯೋ ಅವರೆಲ್ಲ ಕೂಡಲೇ ಮೊ.ನಂ: 9845822996ಗೆ FIR ಕಾಪಿಗಳನ್ನು ವಾಟ್ಸ್‌ಆಪ್‌ ಮಾಡಬೇಕು ಎಂದು ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೆ ಒಂದು ವೇಳೆ FIR ರದ್ದು ಪಡಿಸಲು ಗೃಹ ಸಚಿವರು ವಿಳಂಬ ಮಾಡಿದರೆ ನೌಕರರ ಸಂಘವು ಹೈ ಕೋರ್ಟ್‌ನಲ್ಲಿ FIR ರದ್ದು ಕೋರಿ ಅರ್ಜಿಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಯಾರು ಪೊಲೀಸ್‌ ಪ್ರಕರಣ ಎದುರಿಸುತ್ತಿದ್ದೀರೋ ಅವರೆಲ್ಲರೂ ತಮ್ಮ ತಮ್ಮ FIR ಕಾಪಿಗಳನ್ನು ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

 

Leave a Reply

error: Content is protected !!