NEWSನಮ್ಮರಾಜ್ಯಬೆಂಗಳೂರು

BMTC: ಹಳ್ಳ ಹಿಡಿಯುತ್ತಿದೆ EMS ವ್ಯವಸ್ಥೆ- ಸಂಸ್ಥೆ ನೌಕರರಿಗೆ ತುರ್ತು ರಜೆ ಹಾಕಲಾಗದ, ವೇತನ ಚೀಟಿಗಳ ಪಡೆಯಲಾಗ ಸ್ಥಿತಿ

ವಿಜಯಪಥ ಸಮಗ್ರ ಸುದ್ದಿ
  • “Server Error” ಹಾಗೂ “Request Timeout” ಎಂಬ ಸಂದೇಶಗಳು ಸಾಮಾನ್ಯವಾಗಿದ್ದು, ತುರ್ತು ರಜೆ ಅಗತ್ಯವಿದ್ದಾಗಲೂ ಅನುಮೋದನೆ ಸಿಗದೇ ವಿಳಂಬವಾಗುತ್ತಿದೆ. ಇದರ ಪರಿಣಾಮ ನೌಕರರು ಮಾನಸಿಕವಾಗಿ ಕುಸಿದಿದ್ದು, ಕೆಲಸದ ಸಂತೋಷ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರು: ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್ (BMTC) ಏಷ್ಯಾದಲ್ಲೇ ಉತ್ತಮ ಮತ್ತು ಗುಣಮಟ್ಟದ ಸಾರಿಗೆ ಸೇವೆ ನೀಡುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜತಜತೆಗೆ ನಾಗರಿಕರಿಗೆ ಸುರಕ್ಷಿತ, ನಿಖರ ಮತ್ತು ಸಮಯಪಾಲನೆಯ ಸೇವೆ ನೀಡುವಲ್ಲಿ ಇದು ಮಾದರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೌಕರರ ಒಳಾಡಳಿತ ಸಂಬಂಧಿತ ವ್ಯವಹಾರಗಳಲ್ಲಿ, ವಿಶೇಷವಾಗಿ Employee Management System (EMS) ಸಿಬ್ಬಂದಿ ನಿರ್ವಹಣಾ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಮತ್ತು ನಿರ್ಲಕ್ಷ್ಯ ಧೋರಣೆ ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ.

ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ (EMS) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣದಿಂದ ನೌಕರರು ರಜೆ ಹಾಕಿಕೊಳ್ಳಲು ಆಗುತ್ತಿಲ್ಲ, ವೇತನ ಚೀಟಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ಪೋರ್ಟಲ್ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ.

ಇನ್ನು “Server Error” ಹಾಗೂ “Request Timeout” ಎಂಬ ಸಂದೇಶಗಳು ಸಾಮಾನ್ಯವಾಗಿದ್ದು, ತುರ್ತು ರಜೆ ಅಗತ್ಯವಿದ್ದಾಗಲೂ ಅನುಮೋದನೆ ಸಿಗದೇ ವಿಳಂಬವಾಗುತ್ತಿದೆ. ಇದರ ಪರಿಣಾಮವಾಗಿ ನೌಕರರು ಮಾನಸಿಕವಾಗಿ ಕುಸಿದಿದ್ದು, ಕೆಲಸದ ಸಂತೋಷ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.

BMTC ಅಂತಹ ಪ್ರಮುಖ ಸಂಸ್ಥೆಯು ತನ್ನ ನೌಕರರ ಕಲ್ಯಾಣ ಮತ್ತು ಆಡಳಿತ ಸೇವೆಗಳ ವಿಷಯದಲ್ಲಿ ಈ ರೀತಿಯ ನಿರ್ಲಕ್ಷ್ಯ ತೋರಿಸುವುದು ಅತ್ಯಂತ ವಿಷಾದನೀಯ ಮತ್ತು ಅಪಾಯಕಾರಿ ಬೆಳವಣಿಗೆ.

ನೌಕರರು ಸಂಸ್ಥೆಯ ನಾಡಿ ಮಿಡಿತದಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ಅರಿವು ಆಡಳಿತಕ್ಕೆ ಅಗತ್ಯ. ತಕ್ಷಣವೇ ತಾಂತ್ರಿಕ ಸುಧಾರಣೆ, ಸರ್ವರ್ ಸಾಮರ್ಥ್ಯ ಹೆಚ್ಚಿಸುವ ಕ್ರಮಗಳು ಮತ್ತು ನೌಕರರ ಸಲಹೆಗಳನ್ನು ಪರಿಗಣಿಸುವ ಪಾರದರ್ಶಕ ನೀತಿಗಳನ್ನು ಜಾರಿಗೆ ತರಬೇಕಾಗಿದೆ.

ನೌಕರರ ನೆಮ್ಮದಿ ಮತ್ತು ತೃಪ್ತಿ ಉಳಿದರೆ ಮಾತ್ರ BMTC ತನ್ನ ಶ್ರೇಷ್ಠತೆ ಮತ್ತು ಗೌರವವನ್ನು ಮುಂದುವರಿಸಬಹುದು ಇಲ್ಲದಿದ್ದರೆ ಈ ವ್ಯವಸ್ಥೆ ಬಗ್ಗೆ ಸಾರ್ವಜನಕರೇ ಅಸಹ್ಯಪಡುವಂತ ಕಾಲ ಅತೀ ಶೀಘ್ರದಲ್ಲೇ ಬರಬಹುದು. ಹೀಗಾಗಿ ಕೂಡಲೇ ಸಂಬಂಧಪಟ್ಟ ಸಾರಿಗೆ ಸಚಿವರು ಎಂಡಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಎಚ್ಚತ್ತುಕೊಂಡು ಆಗುತ್ತಿರುವ ಸಮಸ್ಯೆಯನ್ನು ಜರುರಾಗಿ ಸರಿಪಡಿಸುವತ್ತ ಗಮನ ಹರಿಸಬೇಕಿದೆ.

Megha
the authorMegha

Leave a Reply

error: Content is protected !!