- ಬಿಎಂಟಿಸಿ ಚಾಲಕನ ಪರ ವಕ್ಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು
- ಬಹುತೇಕ ಸಾರಿಗೆ ನೌಕರರ ಎಲ್ಲ ಪ್ರಕರಣಗಳಲ್ಲೂ ಜಾಣ್ಮೆಯ ವಾದ ಮಂಡಿಸಿ ನ್ಯಾಯ ಕೊಡಿಸಿರುವ ವಕೀಲರು
ಬೆಂಗಳೂರು: ಬಸ್ ಅಡ್ಡಗಟ್ಟಿದ ಯುವತಿ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಬಸ್ ಚಾಲಕ ಆಕೆ ಮೇಲೆ ಬಸ್ ನುಗ್ಗಿಸಲು ಯತ್ನಿಸಿದ ಆರೋಪದ ಮೇರೆಗೆ ದಾಖಲಾಗಿದ್ದ ಪ್ರಕರಣಕ್ಕೆ ಹೈ ಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ತಡೆ ನೀಡುವಂತೆ ಬಿಎಂಟಿಸಿ ಚಾಲಕ ಪ್ರಶಾಂತ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ತಡೆ ನೀಡಿದೆ.
ಇದರ ಜತೆಗೆ ಮತ್ತು ಒಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದರು. ಇದರ ವಿಚಾರಣೆ (WP 8056/2025) ಇಂದು ನಡೆದಿದ್ದು ಮತ್ತೆ ಇದಕ್ಕೂ ತಡೆ ನೀಡಿ ಕೋರ್ಟ್ ಆದೇಶ ಮಾಡಿದೆ.
ಮೇ 23ರಂದು ನಡೆದ ಘಟನೆ ಸಂಬಂಧ ಜೂನ್ 1ರಂದು ಚಾಲಕ ಪ್ರಶಾಂತ್ ಅವರನ್ನು ಸಂಸ್ಥೆ ಅಮಾನತು ಮಾಡಿದ್ದು, ಇಲಾಖೆ ವಿಚಾರಣೆ ಕೂಡ ನಡೆಸುತ್ತಿದೆ.
ಘಟನೆ ವಿವರ: ಮೇ 23ರಂದು ಸಂಜೆ 5.40ಕ್ಕೆ ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿತ್ತು. ಈ ವೇಳೆ ಯುವತಿ ಜಸ್ಟ್ ಮಿಸ್ ಆಗಿದ್ದಾಳೆ ಎಂಬ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಯುವತಿ ಬಸ್‌ಗೆ ಅಡ್ಡವಾಗಿ ನಿಲ್ಲುವುದಕ್ಕೆ ಮುಂಚೆ ನಡೆದಿದ್ದೇನು ಅನ್ನೋ ತನಿಖೆ ಸಹ ಮುಂದುವರಿದಿದೆ.
ನಿಜವಾಗಿ ಅಂದು ನಡೆದಿದ್ದೇನು?: ಮೇ 23ರಂದು ಬಿಎಂಟಿಸಿ ಬಸ್ ಚಾಲಕ ಮತ್ತು ಯುವತಿ ನಡುವೆ ಕಿರಿಕ್ ಆಗಿತ್ತು. ರೊಚ್ಚಿಗೆದ್ದ ಯುವತಿ ಬಸ್ ಚಾಲಕನ ಪ್ರಶ್ನೆ ಮಾಡಲು ಬಸ್ ಅಡ್ಡಗಟ್ಟಿದ್ದರು. ಆದರೆ ಡ್ರೈವರ್ ಯುವತಿ ಜತೆಗೆ ಹೆಚ್ಚಿಗೆ ಮಾತನಾಡದೆ ಬಸ್ಸನ್ನು ಮುಂದೆಕ್ಕೆ ಚಲಾಯಿಸಿದ. ಆದರೆ ಚಾಲಕನ ಬಗ್ಗೆ ತಪ್ಪಾಗಿ ತಿಳಿದುಕೊಂಡ ಜನ ಅಂದು ಚಾಲಕನ ನಡೆಯನ್ನು ವಿರೋಧಿಸಿದರು.
ಬಿಎಂಟಿಸಿ ಚಾಲಕ ಪ್ರಶಾಂತ್ ಆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಇದು ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ನಡೆದಿದ್ದು. ಅದಕ್ಕೂ ಮುಂಚೆ ಹಡ್ಸನ್ ಸಿಗ್ನಲ್‌ನಲ್ಲಿ ಟ್ಯಾಂಕರ್ ಹಾಗೂ ಬಿಎಂಟಿಸಿ ಬಸ್ ಮುಂದೆ ಲೇಡಿ ಕಾರು ಓಡಿಸಿಕೊಂಡು ಬಂದರು. ಆಗ ಲೇಡಿಗೆ ಟ್ಯಾಂಕರ್ ಚಾಲಕ ಬೈದಿದ್ದರು.
ನಂತರ ಕಾರ್ಪೋರೇಷನ್ ಸಿಗ್ನಲ್‌ನಲ್ಲಿ ಜನ ಹತ್ತಿಸಿಕೊಳ್ಳುವಾಗ ನಾನು ನಿಮ್ಮ ಜಗಳದಲ್ಲಿ ನಮಗೆ ಒಂದು ಸಿಗ್ನಲ್ ಹೋಯ್ತು ಅಂತಾ ಹೇಳಿದೆ. ಅಷ್ಟಕ್ಕೆ ಆ ಯುವತಿ ಕಾರನ್ನು ಬಸ್ ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಹೋದರು.
ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದಾಗ ನನಗೆ ಅವಾಚ್ಯ ಶಬ್ದದಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಲು ಮುಂದಾದ್ರು. ಬಸ್‌ನಿಂದ ಕೆಳಗೆ ಇಳಿ ಅಂತಾ ಅವಾಜ್ ಕೂಡ ಹಾಕಿದ್ರು. ನನ್ನ ತಪ್ಪು ಇಲ್ಲದೇ ನಾನು ಯಾಕೆ ಕೆಳಗೆ ಇಳಿಯಬೇಕು ಅಂತ ನಾನು ಇಳಿದಿಲ್ಲ. ಯುವತಿಯ ಎಡಭಾಗಕ್ಕೆ ಬಸ್ ಚಲಾಯಿಸಿದೇ ಹೊರತು ನಾನು ಯುವತಿ ಮೇಲೆ ನುಗ್ಗಿಸಲು ಪ್ರಯತ್ನಿಸಿಲ್ಲ. ಕಬ್ಬನ್ ಪೇಟೆ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಎಎಫ್‌ಆರ್ ಆಗಿದೆ ಎಂದು ತಿಳಿಸಿದ್ದರು.
ಕಬ್ಬನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಎಫ್‌ಆರ್ ಆಗಿರುವುದಕ್ಕೆ ತಡೆ ನೀಡುವಂತೆ ಚಾಲಕ ಪ್ರಶಾಂತ್ ಹೈ ಕೋರ್ಟ್ ಮೊರೆ ಹೋದರು, ಇವರ ಪರವಾಗಿ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ವಕ್ಕಾಲತ್ತು ಹಾಕಿದರು.
ಇನ್ನು ಮಂಗಳವಾರ ಮತ್ತು ಬುಧವಾರ ನಡೆದ ವಾದ ಪ್ರತಿವಾದದಲ್ಲಿ ನ್ಯಾಯಯೂರ್ತಿಗಳು ಬಸ್ ಓಡಿಸಿದ ವೇಳೆ ಮಹಿಳೆಗೆ ಏನಾದರೂ ಗಾಯವಾಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಇಲ್ಲ ಕಾರಿಗೆ ಸ್ವಲ್ಪ ಹಾಲಿಯಾಗಿದೆ ಎಂದು ವಕೀಲರು ವಾದ ಮಂಡಿಸಿದರು. ಹೀಗೆ ವಾದ ಪ್ರತಿವಾದ ಆಲಿಸಿದ ಬಳಿಕ ಚಾಲಕ ಪ್ರಶಂತ್ ಪ್ರಕರಣಕ್ಕೆ ತಡೆ ನೀಡಿ ಆದೇಶ ಹೊರಡಿಸಿದರು.
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...