NEWSನಮ್ಮಜಿಲ್ಲೆನಮ್ಮರಾಜ್ಯ

BMTC: 10 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಪೋದಿಂದ ಬಸ್‌ ಹೊರ ತೆಗೆಯದೆ ಎಲೆಕ್ಟ್ರಿಕ್‌ ಬಸ್‌ ಚಾಲಕರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಭಾನುವಾರ ಬಸ್‌ಗಳನ್ನು ಡಿಪೋದಿಂದ ಹೊರಕ್ಕೆ ತೆಗೆಯದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ 6 ತಿಂಗಳ ಹಿಂದೆ ನೋವೋ ಬಸ್ ಟ್ರಾನ್ಸಿಟ್ ಸಿಸ್ಟಮ್‌ ಪ್ರೈವೇಟ್ ಲಿಮಿಟೆಡ್ ಮತ್ತು SWITCH ಕಂಪೆನಿಯಿಂದ ಯಲಹಂಕದಲ್ಲಿರುವ ಪುಟ್ಟೇನಹಳ್ಳಿಯ ಬೆಂಮಸಾಸಂ ಘಟಕ -30ರಲ್ಲಿ ಕೆಲಸ ಮಾಡುತ್ತಿದ್ದೇವೆ.

ಆದರೆ ನಮಗೆ ಸರಿಯಾದ ಸೌಲಭ್ಯಗಳನ್ನು ನೀಡುವಲ್ಲಿ ಕಂಪನಿ ಮತ್ತು ಸಂಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ಜಮಾಯಿಸಿರುವ ಚಾಲಕರು ನಮಗೆ ವೇತನ ಸಾಲುತ್ತಿಲ್ಲ, ಮೆಡಿಕಲ್‌ ಸೌಲಭ್ಯವನ್ನೂ ಒದಗಿಸಬೇಕು ಎಂಬುವುದು ಸೇರಿ ಸುಮಾರು 10 ವಿವಿಧ ಬೇಡಿಕೆಗಳನ್ನು ಡಿಪೋ ವ್ಯವಸ್ಥಾಪಕರ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ನೋವೋ ಬಸ್ ಟ್ರಾನ್ಸಿಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು SWITCH ಎಂಬ ಕಂಪೆನಿಯಲ್ಲಿ ಸುಮಾರು 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದೇವೆ, ನಮ್ಮಲ್ಲಿರುವ ಕೆಲ ಸಮಸ್ಯೆಗಳನ್ನು ಹೇಳಿಕೊಂಡರು ತಾವು ಇನ್ನು ಸ್ಪಂದಿಸಿಲ್ಲ ಹೀಗಾಗಿ ನಮ್ಮ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಪಟ್ಟು ಹಿಡಿದು ಒಂದೇ ಒಂದು ಬಸ್‌ಅನ್ನು ಘಟಕದಿಂದ ಹೊರಗೆ ತೆಗೆಯದೇ ಹೋರಾಟ ಮಾಡುತ್ತಿದ್ದಾರೆ.

ಚಾಲಕರ ಬೇಡಿಕೆಗಳು ಏನೇನು?: 1) ಸಂಬಳದ ಚೀಟಿ’ (SALARY SLIP) ಕೊಡಬೇಕು. 2) ಕೆಲಸಕ್ಕೆ ಸೇರಿರುವ ನೇಮಕಾತಿ ಆದೇಶ ಪತ್ರ (APPOINTMENT LETTER) ಕೊಡಬೇಕು.

3) ಚಾಲಕರಿಗೆ ಕ್ಯಾಂಟೀನ್ ವ್ಯವಸ್ಥೆ ಅಥವಾ ಡ್ರೈವರ್ ಬಾಟ – 4) ಮಾಸಿಕ ಪಾಸು (KSRTC BMTC) ಸೌಲಭ್ಯ ಒದಗಿಸಿಕೊಡಬೇಕು. 5) ಪ್ರತಿ ತಿಂಗಳು 5 ರಿಂದ 8 ನೇ ತಾರೀಖಿನ ಒಳಗೆ ಸಂಬಳವನ್ನು ನಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು.

6) ಸಂಬಳವನ್ನು ಈಗಿರುವ ₹25000 ದಿಂದ ₹30000ಕ್ಕೆ ಹೆಚ್ಚಿಸಬೇಕು. 7) ಉತ್ತಮ ಗುಣಮಟ್ಟದ ಸಮವಸ್ತ್ರ ಹಾಗೂ ಶೂ ನೀಡಬೇಕು. 8) ಚಾಲಕರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳುವುದು.

9) ಚಾಲಕರಿಗೆ ಮಾಸಿಕ CL, EL ನೀಡಬೇಕು ಮತ್ತು 10) ಚಾಲಕರಿಗೆ ಅಪಘಾತ ವಿಮೆ ಸೌಲಭ್ಯವನ್ನು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...