ಬೆಂಗಳೂರು: ಸಾರಿಗೆ ಆದಾಯ ಸೋರಿಕೆ ಮಾಡುವ ನಿರ್ವಾಹಕರ ಪಟ್ಟಿಯನ್ನು ನೀಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಎಲ್ಲ ವಲಯಗಳು, ಕೇಂದ್ರ ಕಚೇರಿ ಅಧಿಕಾರಿಗಳಿಗೂ ಸೂಚನೆ ನೀಡಿರುವ ಅವರು, ಬೆಂಗಳೂರು ಮಹಾನಗರವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಾ ಇದ್ದು ಅದರಂತೆ ಸಂಸ್ಥೆಯ ಕಾರ್ಯಚರಣೆ ವ್ಯಾಪ್ತಿಯು ವಿಸ್ತಾರಗೊಂಡು ಪ್ರತಿ ತಿಂಗಳೂ ಸರಿ ಸುಮಾರು 18 ಲಕ್ಷ ಸುತ್ತುವಳಿಗಳನ್ನು ಕಾರ್ಯಚರಣೆಗೊಳಿಸುತ್ತಿದೆ.
ಆದರೆ, ಮಾಹೆವಾರು ಶೇ 1.1 ರಷ್ಟು ಮಾತ್ರ ವಾಹನಗಳು ತನಿಖೆಗೊಳಪಡುತ್ತಿದ್ದು ಹೆಚ್ಚಿನ ಮಟ್ಟದಲ್ಲಿ ವಾಹನಗಳನ್ನು ತನಿಖೆಗೊಳಪಡಿಸಲು ಕಷ್ಟ ಸಾದ್ಯವಾಗುತ್ತಿದೆ. ಆದುದರಿಂದ ಸಾರಿಗೆ ಆದಾಯ ಸೋರಿಕೆಯನ್ನು ತಡೆಗಟ್ಟಲು ಘಟಕಗಳಲ್ಲಿ ಮಾರ್ಗದ ಮೇಲೆ ಸಂಸ್ಥೆಯ ಸಾರಿಗೆ ಆದಾಯವನ್ನು ಸೋರಿಕೆ ಮಾಡುವ ನಿರ್ವಾಹಕರನ್ನು ಗುರುತಿಸಿ ಪ್ರತಿ ತಿಂಗಳೂ ಘಟಕದಿಂದ ಐವರು ನಿರ್ವಾಹಕರ ಪಟ್ಟಿಯನ್ನು ಅನಿರಿಕ್ಷಿತವಾಗಿ ತನಿಖೆ ಮಾಡಲು ಗೌಪ್ಯವಾಗಿ ಕಳುಹಿಸಿಕೊಡಿ ಎಂದು ಸೂಚನೆ ನೀಡಿದ್ದಾರೆ.
ಬಿಎಂಟಿಸಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಅವರು ಏ.17ರಂದು ಈ ಸೂಚನೆ ನೀಡಿದ್ದು, ಇದಕ್ಕೆ ಕೆಲ ನೌಕರರು ನಿರ್ವಾಹಕರನ್ನು ಕಳ್ಳರಂತೆ ಬಿಂಬಿಸಲು ಹೊರಟಿದ್ದಾರೆ. ಆದರೆ ನಿಜವಾದ ಕಳ್ಳರು ಇರುವುದು ಕಚೇರಿಯಲ್ಲೇ ಮೊದಲು ಆ ಕಳ್ಳರನ್ನು ಹಿಡಿದರೆ ಎಲ್ಲವೂ ಸರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಸೂಚನೆ ನೀಡಿರುವ ಜಾಗೃತಾಧಿಕಾರಿ ಅವರು ಎಲ್ಲ ಘಟಕ ವ್ಯವಸ್ಥಾಪಕರಿಗೂ ಮಾಹಿತಿಗಾಗಿ ಹಾಗೂ ಅಗತ್ಯ ಕ್ರಮಕ್ಕಾಗಿ ಪ್ರತಿಯನ್ನು ಕಳಿಸಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳುವುದಕ್ಕಿಂತ ಮೊದಲು ಭ್ರಷ್ಟ ಅಧಿಕಾರಿಗಳ ಪಟ್ಟಿ ಇವರತ್ರ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ನಿರ್ವಾಹಕರ ಪಟ್ಟಿ ಕೇಳುತ್ತಾರೆ ಆದಾಯ ಸೋರಿಕೆ ಆಗುತ್ತಿರುವುದು ಭ್ರಷ್ಟಾಧಿಕಾರಿಗಳಿಂದ ಅವರ ಪಟ್ಟಿಯನ್ನು ಮೊದಲು ತರಿಸಿಕೊಳ್ಳಿ, ನೌಕರರಿಗೆ ನೀಡುತ್ತಿರುವ ಕಿರುಕುಳ ಲಂಚ ವಸೂಲಿತನ ತಪ್ಪಿಸಿದರೆ ಆದಾಯ ಸೋರಿಕೆ ತಾನಾಗಿಯೇ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲ ನೌಕರರು ಈ ರೀತಿ ಆದಾಯ ಸೋರಿಕೆ ಮಾಡುವ ನಿರ್ವಾಹಕರ ಪಟ್ಟಿ ನೀಡುವಂತೆ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಕೇಳಿದರೆ ಘಟಕಗಳಲ್ಲಿ ಲಂಚ ಕೊಡದ ನೌಕರರ ಪಟ್ಟಿಯನ್ನು ಬಹುತೇಕ ಅಧಿಕಾರಿಗಳು ನಿಮಗೆ ಕಳಿಸಿಕೊಡುವ ಮೂಲಕ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಈ ಬಗ್ಗೆ ತಾವು ಎಚ್ಚರಿಕೆ ವಹಿಸಿದರೆ ಒಳ್ಳೆಯದು ಎಂದು ಮನವಿ ಮಾಡಿದ್ದಾರೆ.
Related
