Breaking NewsCRIMENEWSನಮ್ಮರಾಜ್ಯ

KSRTC: ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಚಾಲಕರ ಕಾಯಂ ಮಾಡಿಸುವುದಾಗಿ ನಂಬಿಸಿ ಲಕ್ಷ ರೂ.ಲಪಟಾಯಿಸಿದ ವಂಚಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಚಾಲಕರನ್ನು ಕಾಯಂ (Permanent) ಮಾಡಿಸುತ್ತೇನೆ ಎಂದು ವ್ಯಕ್ತಿಯೊಬ್ಬ 1ಲಕ್ಷ ರೂಪಾಯಿವರೆಗೂ ಫೋನ್‌ ಪೇ ಮಾಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ರೀತಿ ನಂಬಿಸಿ ಹಂತಹಂತವಾಗಿ ಒಂದು ಲಕ್ಷ ರೂಪಾಯಿ ವರೆಗೂ ಫೋನ್‌ ಫೇ ಮಾಡಿಸಿಕೊಂಡಿರುವ ಈತ ಕೆಎಸ್‌ಆರ್‌ಟಿಸಿ ನಿಗಮದ ನೌಕರ ಎಂದು ಹೇಳಲಾಗುತ್ತಿದೆ. ಆದರೆ, ಹಣ ಕೊಟ್ಟಿರುವವರು ಈತನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಈತ ಸಾರಿಗೆ ಸಂಸ್ಥೆಯ ಡ್ರೈವರ್‌ಗಳನ್ನು ಯಾವುದೇ ಚಾಲನಾ ಪರೀಕ್ಷೆ ಮಾಡದೆ ಹಾಗೂ ಯಾವುದೇ ನಿಯಮಗಳು ಇಲ್ಲದಂತೆ ಸಾರಿಗೆ ಸಂಸ್ಥೆಯಲ್ಲಿ ಕಾಯಂ (Permanent) ಮಾಡಿಸುತ್ತೇನೆ ಎಂದು ಕಳೆದ 2024ರ ಸೆಪ್ಟೆಂಬರ್‌ನಿಂದಲೂ ಹಂತಹಂತವಾಗಿ 1 ಲಕ್ಷ ರೂಪಾಯಿವರೆಗೆ ವಸೂಲಿ ಮಾಡಿದ್ದು, ಈತನ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಸಂಸ್ಥೆಯಿಂದ ತನಿಖೆ ನಡೆಯಬೇಕಿದೆ.

ಅಲ್ಲದೆ ಈ ರೀತಿ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವ ಈ ಆರೋಪಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಸಂಸ್ಥೆಗೆ ಯಾವುದೇ ರೀತಿಯ ಅಗೌರವ ಬರದಂತೆ ನೋಡಿಕೊಳ್ಳಬೇಕಿರುವುದು ಸಂಬಂಧಪಟ್ಟ ಕಾನೂನು ವಿಭಾಗದ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ನೌಕರರು ಒತ್ತಾಯಿಸಿದ್ದಾರೆ.

ಇನ್ನು ಒಂದು ಮೂಲಗಳ ಪ್ರಕಾರ ಈ ವ್ಯಕ್ತಿಯು ಸಾರಿಗೆ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಇದೆ. ಈತ ರಾಮನಗರ, ಮಂಡ್ಯ, ಬೆಂಗಳೂರು ಕೇಂದ್ರೀಯ ವಿಭಾಗ, ಚಿಕ್ಕಬಳ್ಳಾಪುರ, ತುಮಕೂರು ಕಡೆಯಲ್ಲೆಲ್ಲ ತನ್ನ ಈ ರೀತಿ ಜಾಲವನ್ನು ಹರಡಿದ್ದು ಹಣ ಲಪಟಾಯಿಸಿ ವಂಚಿಸುವುದೇ ಈತನ ಮುಖ್ಯ ಕಾಯಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಲಂಚದ ಹಣವನ್ನು ಫೋನ್‌ ಪೇ ಮೂಲಕ ತೆಗೆದುಕೊಂಡಿರುವ ಹಾಗೂ ಹಣ ಕೊಟ್ಟಿರುವ ಬಗ್ಗೆ ದಾಖಲೆ ಸಹಿತ ಮತ್ತು ಆಡಿಯೋ ಕೂಡ ಇದೆ. ಈತ ಹಣವನ್ನು ಯಾವ ರೀತಿ ಕಬಳಿಸಲು ಸಂಚು ರೂಪಿಸಿದ್ದಾನೆ ಎಂಬುದರ ಬಗ್ಗೆ ಆಡಿಯೋ ಇದ್ದು, ನಾಗರಾಜು ಎಂಬ ಹೆಸರಿನ ಬ್ಯಾಂಕ್‌ ಖಾತೆಗೆ ಹಣವನ್ನು ಫೋನ್‌ ಪೇ ಮಾಡಿಸಿಕೊಂಡಿದ್ದಾನೆ.

ಈ ನಾಗರಾಜು ಎಂಬಾತ ಯಾರು? ಈತ ಸಾರಿಗೆಯ ಯಾವ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾನೆ? ಈತನ ಹಿನ್ನೆಲೆ ಏನು? ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈತನೊಂದಿಗೆ ಕೈ ಜೋಡಿಸಿದ್ದಾರೆಯೇ? ಇಲ್ಲ ಈತನೊಬ್ಬನೆ ಈರೀತಿ ಮಾಡುತ್ತಿದ್ದಾನೆಯೇ ಎಂಬ ಬಗ್ಗೆ ಸಂಸ್ಥೆಯ ಹಾಗೂ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.

Deva
the authorDeva

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ