CrimeNEWSನಮ್ಮಜಿಲ್ಲೆನಮ್ಮರಾಜ್ಯ

BMTC: ಷರತ್ತುಗಳ ಒಪ್ಪಿದರೆ FIR ಪ್ರಕರಣ ಇರುವ ವಜಾಗೊಂಡ ನೌಕರರ ಮರು ನೇಮಕ- ಎಂಡಿ ರಾಮಚಂದ್ರನ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 2021ರ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ಮುಷ್ಕರದ ವೇಳೆ FIR ಪ್ರಕರಣಗಳು ದಾಖಲಾಗಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೌಕರರು ಒಪ್ಪಿದರೆ ಜಂಟಿ ಮೆಮೋದೊಂದಿಗೆ ಸಂಸ್ಥೆಯ ಸೇವೆಗೆ ಮರುನೇಮಕ ಮಾಡಿಕೊಳ್ಳಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌ ತಿಳಿಸಿದ್ದಾರೆ.

ಈ ಬಗ್ಗೆ ನಿಗಮದ ಮುಖ್ಯ ಕಾನೂನು ಅಧಿಕಾರಿ ಮೂರು ಷರತ್ತುಗಳನ್ನು ವಿಧಿಸಿರುವ ಮೆಮೋವನ್ನಿ ಇಂದು ಬಿಡುಗಡೆ ಮಾಡಿದ್ದು ಈ ಷರತ್ತುಗಳಿಗೆ ಒಪ್ಪಿದರೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಎಂಡಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿವರಿಸಿದ್ದಾರೆ.

ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರನ್ನು ಸಂಸ್ಥೆಯ ಸೇವೆಯಿಂದ ವಜಾಗೊಳಿಸಲಾಗಿದ್ದು, ಕೆಲವು ನೌಕರರ ಮೇಲೆ FIR ದಾಖಲಾಗಿದೆ. ಈ FIR ದಾಖಲಾಗಿರುವ ನೌಕರರನ್ನು ಸಂಸ್ಥೆಯ ಸೇವೆಗೆ ಮರುನೇಮಕ ಮಾಡಿಕೊಳ್ಳುವಂತೆ ನೌಕರರ ಸಂಘಗಳಿಂದ ಮನವಿಗಳು ಬಂದಿದ್ದು, ಆ ಮನವಿಗಳು ಹಾಗೂ ಪ್ರಕರಣಗಳನ್ನು ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿ ಕಾರ್ಮಿಕ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಮೂರು ಷರತ್ತುಗಳನ್ವಯ ಸಂಸ್ಥೆಯ ಸೇವೆಗೆ ಮರುನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯ ಕಾನೂನು ಅಧಿಕಾರಿ ತಿಳಿಸಿದ್ದಾರೆ.

ಜಂಟಿ ಮೆಮೋದ ನಿಬಂಧನೆಗಳು: I. ವಜಾಗೊಳಿಸುವ ಅವಧಿಯಲ್ಲಿ ಅಂದರೆ, ವಜಾಗೊಳಿಸಿದ ದಿನಾಂಕದಿಂದ ಮರು ನೇಮಕವಾಗುವ ದಿನಾಂಕದವರೆಗೆ ಯಾವುದೇ ಸೌಲಭ್ಯಗಳನ್ನು ಕೇಳದೆ ಮತ್ತು ಮಧ್ಯಂತರ ಪರಿಹಾರ ಸೇರಿದಂತೆ ಈ ಅವಧಿಯ ವೇತನವನ್ನೂ ಕೇಳದೆ ಸೇವೆಯ ನಿರಂತರತೆಯೊಂದಿಗೆ ಮರು ನೇಮಕ ಮಾಡಿಕೊಳ್ಳಲಾಗುವುದು.

II. ನೌಕರರು ಸಂಸ್ಥೆಗೆ ಮರು ನೇಮಕಗೊಂಡ ದಿನದಿಂದ 3 ವರ್ಷಗಳ ಅವಧಿಗೆ ಸಂಚಿತ ಪರಿಣಾಮವಿಲ್ಲದೆ 1 ವಾರ್ಷಿಕ ಇನ್ಕ್ರಿಮೆಂಟ್ ಅನ್ನು ಮುಂದೂಡಲು ಒಪ್ಪಿಕೊಳ್ಳಬೇಕು.

III. ಇನ್ನು ಭವಿಷ್ಯದಲ್ಲಿ ನಡೆಯುವ ಸಾರಿಗೆ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಅಥವಾ ಇತರ ನಿಷ್ಠಾವಂತ ಉದ್ಯೋಗಿಗಳನ್ನು ಮುಷ್ಕರಕ್ಕೆ ಹೋಗುವಂತೆ ಪ್ರೇರೇಪಿಸುವುದಿಲ್ಲ ಮತ್ತು ಮುಷ್ಕರದ ಅವಧಿಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗುವುದಿಲ್ಲ ಎಂಬ ಷರತ್ತಿಗೆ ಒಪ್ಪಿಕೊಳ್ಳಬೇಕು.

ಈ ಮೂರು ಷರತ್ತುಗಳನ್ನು ಒಪ್ಪುವುದಾದರೆ ವಜಾಗೊಂಡು ಎಫ್‌ಐಆರ್‌ ಆಗಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಇಂದು ಮೇಮೊ ಹೊರಡಿಸಿದ್ದಾರೆ. ಈ ಬಗ್ಗೆ ನೌಕರರು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ