Please assign a menu to the primary menu location under menu

CrimeNEWSನಮ್ಮಜಿಲ್ಲೆನಮ್ಮರಾಜ್ಯ

KSRTC: 10-20 ರೂ. ಆಸೆಗೆ ಬಿದ್ದು ಚಿನ್ನಕಳವು ದೂರಿನಡಿ ಪೊಲೀಸರ ಅತಿಥಿಯಾದ ಸಂಸ್ಥೆ ಚಾಲಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲನಾ ಸಿಬ್ಬಂದಿಗಳಿಗೆ ಎಷ್ಟೆ ಎಚ್ಚರಿಕೆ ನೀಡಿದರು ಬುದ್ಧಿಕಲಿಯದ ಪರಿಣಾಮ ವಾರಸುದಾರರಿಲ್ಲದ ಲಗೇಜನ್ನು ಬಿಡಿಗಾಸಿನ ಆಸೆಗಾಗಿ ತೆಗೆದುಕೊಂಡು ಹೋದ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಆಭರಣ ಕಳವಾಗಿದೆ ಎಂಬ ದೂರು ದಾಖಲಾಗಿರುವ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.

ಗುರುವಾರ (ಫೆ.29) ಶಿವಮೊಗ್ಗ – ಬೆಂಗಳೂರು ನಡುವೆ ಮಾರ್ಗಚರಣೆ ಮಾಡುತ್ತಿದ್ದ (KA-14 F-0041) ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೆ ತಿಪಟೂರು ಬಸ್‌ ನಿಲ್ದಾಣದಲ್ಲಿ ಓರ್ವ ಮಹಿಳೆ ಒಂದು ಪೇಪರ್‌ ಬ್ಯಾಗನ್ನು ಕೊಟ್ಟು ಇದರಲ್ಲಿ ಬಟ್ಟೆಗಳಿವೆ ಬೆಂಗಳೂರಿನಲ್ಲಿರುವ ನಮ್ಮ ಸಂಬಂಧಿಕರಿಗೆ ಜೋಪಾನವಾಗಿ ತಲುಪಿಸಿ, ಅವರು ಮೆಜೆಸ್ಟಿಕ್‌ನಲ್ಲಿ ಕಲೆಕ್ಟ್‌ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸರಿ ಆಯಿತು ಅಂತ ಬಸ್‌ ಚಾಲಕ ವಿಜಯನಾಯಕ್‌ ಆ ಬ್ಯಾಗ್‌ ತೆಗೆದುಕೊಂಡಿದ್ದಾರೆ. ಈ ವೇಳೆ ಅದರಲ್ಲಿ ಆಭರಣಗಳಿದ್ದ ಬಗ್ಗೆ ಚಾಲಕನಿಗೆ ಹೇಳಿಲ್ಲ. ಇನ್ನು ಬಸ್‌ ಚಾಲಕ ಆ ಬ್ಯಾಗ್‌ ತೆಗೆದುಕೊಂಡು ಆ ಮಹಿಳೆ ಕೊಟ್ಟ 10-20ರೂಪಾಯಿಯನ್ನು ತನ್ನ ಕಿಸೆಗೆ ಹಾಕಿಕೊಂಡು ಬಂದಿದ್ದಾನೆ.

ಇನ್ನು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆ ಮಹಿಳೆಯ ಕಡೆಯವರು ಬ್ಯಾಗನ್ನು ತೆಗೆದುಕೊಂಡು ನೋಡಿ ಅದರಲ್ಲಿದ್ದ ಸುಮಾರು ಎರಡು ಲಕ್ಷ ರೂ. ಬೆಲೆಬಾಳುವ ಚಿನ್ನದ ಎರಡು ಕೈ ಬಳೆಗಳಿದ್ದವು ಆದರೆ, ಈ ಬ್ಯಾಗಲ್ಲಿ ಇಲ್ಲ ಎಂದು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಹಾಗೂ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಸಂಸ್ಥೆಯ ವಾಹನದ ಚಾಲಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಇನ್ನು ವಿಚಾರಣೆ ನಡೆಸುತ್ತಿದ್ದಾರೆ. ಆದರೆ. ಈ ಮಧ್ಯೆ ದೂರು ಕೊಟ್ಟ ಮಹಿಳೆ ಚಾಲಕನಿಗೆ ಕೊಟ್ಟ ಪೇಪರ್‌ ಬ್ಯಾಗಲ್ಲಿ ಬಟ್ಟೆಗಳಿವೆ ಎಂದು ಹೇಳಿದ್ದೆ, ಚಿನ್ನದ ಬಳೆಗಳಿರುವ ಬಗ್ಗೆ ಹೇಳಿರಲಿಲ್ಲ ಎಂದು ಪೊಲೀಸರು ಮತ್ತು ಸಾರಿಗೆ ನಿಗಮದ ಅಧಿಕಾರಿಗಳಿಗೆ ಫೋನ್‌ನಲ್ಲೇ ಹೇಳಿದ್ದಾರೆ.

ಏಕೆ ಚಿನ್ನದ ಬಳೆಗಳಿರುವ ಬಗ್ಗೆ ಹೇಳಿಲ್ಲ ನೀವು ಎಂದು ಈ ಅಧಿಕಾರಿಗಳು ಕೇಳಿದ್ದಕ್ಕೆ ಚಾಲಕನಿಗೆ ಚಿನ್ನದ ಬಳೆಗಳಿವೆ ಎಂದು ಹೇಳಿದರೆ ಆತ ಎಲ್ಲಿ ಕಳವು ಮಾಡಿ ಬಿಡುತ್ತಾನೋ ಎಂದುಕೊಂಡು ಆತನಿಗೆ ಬಟ್ಟೆಗಳಿವೆ ಇದನ್ನು ಜೋಪಾನವಾಗಿ ತಲುಪಿಸಿ ಎಂದಷ್ಟೇ ಹೇಳಿದೆ ಎಂದು ತಿಳಿಸಿದ್ದಾರೆ.

ಆದರೆ, ಈಗ 2 ಲಕ್ಷ ರೂಪಾಯಿ ಮೌಲ್ಯದ ಚನ್ನದ ಬಳೆಗಳಿದ್ದವು ಆ ಬಳೆಗಳನ್ನು ಈತನೆ ಕದ್ದಿರಬಹುದು ಎಂದು ದೂರು ನೀಡಿದ್ದಾರೆ ಆ ಮಹಿಳೆ. ಚಾಲಕ ನನಗೆ ಅವರು ಬಟ್ಟೆಗಳಿಗೆ ಎಂದು ಹೇಳಿದ್ದರು ಅಷ್ಟೆ. ನಾನು ಆ ಬ್ಯಾಗನ್ನು ಬ್ಯಾನೆಟ್‌ ಮೇಲೆ ಇಟ್ಟು ಬಸ್‌ ಚಾಲನೆ ಮಾಡಿಕೊಂಡು ಬಂದೆ. ಈ ವೇಳೆ ಪ್ರಯಾಣಿಕರ ಬ್ಯಾಗ್‌ಗಳು ಬ್ಯಾನೆಟ್‌ ಮೇಲೆ ಇದ್ದವು ಒಂದೆರಡು ಬಾರಿ ಈ ಬ್ಯಾಗ್‌ ಕೆಳಕ್ಕೆ ಬಿದಿತ್ತು ಎಂದು ತಿಳಿದ್ದುದಾರೆ ಎಲ್ಲಲಾಗಿದೆ.

ಇನ್ನು ಮಹಿಳೆಯಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಚಾಲಕ ನನಗೆ ಈ ಬಗ್ಗೆ ಏನು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ