BMTC: QR ಕೋಡ್ ಸ್ಕ್ಯಾನ್ ನೀನೇ ಮಾಡಬೇಕು – ಕೆಲ ಪ್ರಯಾಣಿಕರಿಂದ ಕಂಡಕ್ಟರ್‌ಗಳಿಗೆ ಅವಾಜ್
- ಜನರಿಗೆ ಅರಿವು ಮೂಡಿಸದ ಅಧಿಕಾರಿಗಳು- ನಿತ್ಯ ಒತ್ತಡದಲ್ಲೇ ಕೆಲಸ ಮಾಡುತ್ತಿರುವ ಚಾಲಕರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಪ್ರಯಾಣಿಕರಿಗೂ ನಿಯಮಗಳು ಇವೆ. ಆದರೆ, ಪ್ರಯಾಣಿಕರಿಗೆ ಸಂಸ್ಥೆಗಳಲ್ಲಿ ಇರುವ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಈವರೆಗೂ ಯಾವುದೇ ಅಧಿಕಾರಿಗಳು ಮಾಡುವ ಬಗ್ಗೆ ಆಸಕ್ತಿಯನ್ನೇ ತೋರಿಸಿಲ್ಲ.
ನಿಗಮಗಳ ಉನ್ನತ ಅಧಿಕಾರಿಗಳ ಈ ನಿರಾಸಕ್ತಿಯಿಂದ ನಿತ್ಯ ಜನರ ಒಡನಾಟದಲ್ಲಿ ಇರುವ ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಒಂದಿಲ್ಲೊಂದು ರೀತಿ ಪ್ರತಿದಿನ ಸಂಘರ್ಷ ನಡೆಯುತ್ತಲ್ಲೇ ಇದೆ. ಇದಕ್ಕೆ ಮುಖ್ಯ ಕಾರಣ ಚಾಲನಾ ಸಿಬ್ಬಂದಿಗಳು ನಿಗಮಗಳಲ್ಲಿ ಇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಇಲ್ಲದಿದ್ದರೆ ದಂಡ, ಅಮಾನತು, ವರ್ಗಾವಣೆ ಇದನ್ನು ಮೀರಿ ವಜಾದಂತಹ ಶಿಕ್ಷೆಯನ್ನು ಅಧಿಕಾರಿಗಳು ಕೊಡುತ್ತಾರೆ.
ಅದಂತೆ ಪ್ರಯಾಣಿಕರು ಮಾಡುವ ತಪ್ಪಿಗೆ ಸಾರಿಗೆ ಸಂಸ್ಥೆಗಳಲ್ಲಿಯ ನಿಯಮಗಳಿವೆ. ಆದರೆ ಅವರು ಮಾಡುವ ತಪ್ಪಿಗೆ ಈವರೆಗೂ ಸಮರ್ಪಕವಾದ ಶಿಕ್ಷೆಯನ್ನು ಕೊಟ್ಟಿಲ್ಲ. ಈ ತಾರತಮ್ಯತೆ ಏಕೆ ನಾವು ನಮ್ಮ ಮನೆ ಕೆಲಸ ಮಾಡುತ್ತಿದ್ದೇವಾ? ಏಕೆ ಈ ರೀತಿ ನಿಗಮದ ಉನ್ನತ ಅಧಿಕಾರಿಗಳು ಈ ಬಗ್ಗೆ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ನಿತ್ಯ ಯಾತನೆ ಅನುಭವಿಸುತ್ತಿರುವ 100ಕ್ಕೂ ಹೆಚ್ಚು ನೌಕರರು ವಿಜಯಪಥಕ್ಕೆ ಪತ್ರ ಬರೆಯುವ ಮೂಲಕ ತಮ್ಮ ನೋವವನ್ನು ತೋಡಿಕೊಂಡಿದ್ದಾರೆ.
ಈ ವರದಿಯನ್ನು ಮಾಡುವುದಕ್ಕೆ ಮುಖ್ಯ ಕಾರಣವೂ ಇದೆ. ಹೌದು! ಸಾರಿಗೆಯ ನಿಗಮಗಳಲ್ಲಿ ಒಂದಾದ ಬಿಎಂಟಿಸಿಯಲ್ಲಿ ಆನ್‌ಲೈನ್ ಮೂಲಕ ದಿನದ, ವಾರದ ಮತ್ತು ತಿಂಗಳ ಪಾಸ್ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಆದರೆ, ಆನ್‌ಲೈನ್ ಮೂಲಕ ಪಡೆದ ಪಾಸ್‌ಅನ್ನು ಪ್ರಯಾಣಿಸುವಾಗ ಬಸ್‌ನಲ್ಲಿ ನಿರ್ವಾಹಕರಿಗೆ ತೋರಿಸಲು ಬಸ್‌ನ ಎರಡು ಕಡೆ ಸ್ಕ್ಯಾನಿಂಗ್ QR ಕೋಡ್ ಹಾಕಲಾಗಿದೆ.
ಆದರೆ, ಈ QR ಕೋಡ್‌ನಿಂದ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿ ಓಕೆ ಎಂಬುದನ್ನು ನಿರ್ವಾಹಕರಿಗೆ ತೋರಿಸಬೇಕು. ಬಹುತೇಕ ಆನ್‌ಲೈನ್‌ಪಾಸ್ ಪಡೆದವರು ಇದನ್ನು ಮಾಡುತ್ತಾರೆ. ಆದರೆ, ಇನ್ನು ಕೆಲ ಪ್ರಯಾಣಿಕರು QR ಕೋಡ್ ಸ್ಕ್ಯಾನ್ ಮಾಡಿ ತೋರಿಸುವುದಕ್ಕೆ ಹೋಗುವುದಿಲ್ಲ. ಈ ಬಗ್ಗೆ ನಿರ್ವಾಹಕರು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಜತೆಗೆ ನೀನೆ ಸ್ಕ್ಯಾನಿಂಗ್ ಮಾಡು ಮೊಬೈಲ್ ತೆಗೆದುಕೊ ಎಂದು ಗಲಾಟೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಇಲ್ಲಿ ನಿರ್ವಾಹಕರಿಗೆ ಸ್ಕ್ಯಾನಿಂಗ್ ಮಾಡುವುದಕ್ಕೆ ಅವಕಾಶವಿಲ್ಲ. ಕಾರಣ ಆನ್‌ಲೈನ್‌ನಲ್ಲಿ ಪಾಸ್ ಪಡೆದ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಬೇಕು. ಈ ವೇಳೆ ಸ್ಕ್ಯಾನ್ ಮಾಡದೆ ಕೆಲ ಪ್ರಯಾಣಿಕರು ನಾನು ಆನ್‌ಲೈನ್‌ನಲ್ಲಿ ಪಾಸ್ ಪಡೆದುಕೊಂಡಿದ್ದೇನೆ. ನಾನು ಸುಳ್ಳು ಹೇಳುತ್ತಿಲ್ಲ ಬೇಕಾದರೆ ನೀನೆ ಸ್ಕ್ಯಾನ್ ಮಾಡಿ ನೋಡಿಕೊ ಎಂದು ಉದ್ಧಟತನದಿಂದ ವರ್ತಿಸುತ್ತಿದ್ದಾರೆ.
ಇಲ್ಲ ಇದು ನಿಮ್ಮ ಕೆಲಸ ಮಾಡಿ ಎಂದು ನಿರ್ವಾಹಕರು ಮನವಿ ಮನವಿ ಮಾಡಿದರೆ, ಹೌದ ನಾನು ಮೊಬೈಲ್‌ನಲ್ಲೇ ವಿಡಿಯೋ ಮಾಡುತ್ತೇನೆ ಇದು ನನ್ನ ಕೆಲಸವಲ್ಲ ಅಂಥ ಹೇಳು ಎಂದು ನಿರ್ವಾಹಕರ ಜತೆ ಗಲಾಟೆಗೆ ಇಳಿಯುತ್ತಿದ್ದಾರೆ. ಇದರಿಂದ ನಿರ್ವಾಹಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
ಇನ್ನಾದರೂ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು, ಈ ಬಗ್ಗೆ ಕ್ರಮ ಕೈಗೊಂಡು ಬಸ್‌ನಲ್ಲಿ QR ಕೋಡ್ ಪಕ್ಕದಲ್ಲೇ ನಿರ್ವಾಹಕರಿಗೆ ಏನು ಸೂಚನೆಗಳನ್ನು ಕೊಟ್ಟಿದ್ದೀರಿ, ಅಂದರೆ, ಆನ್‌ಲೈನ್ ಮೂಲಕ ಪಾಸ್ ಪಡೆದ ಪ್ರಯಾಣಿಕರು ಬಸ್ ಹತ್ತಿದ ಕೂಡಲೇ QR ಕೋಡ್ ಸ್ಕ್ಯಾನ್ ಮಾಡಬೇಕು. ಒಂದು ವೇಳೆ ಸ್ಕ್ಯಾನ್ ಆಗಿಲ್ಲ ಎಂದರೆ ಹಣಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸಬೇಕು ಎಂಬುದರ ಬಗ್ಗೆ ಸೂಚನಾ ಫಲಕವನ್ನು ಅಳವಡಿಸಬೇಕು ಎಂದು ನಿರ್ವಾಹಕರು ಮನವಿ ಮಾಡಿದ್ದಾರೆ.
ಚಾಲಕರಿಗೂ ತಪ್ಪದ ಕಿರಿಕಿರಿ: ಇನ್ನು ಚಾಲಕರು ಕೂಡ ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಸಿಗ್ನಲ್‌ಗಳಲ್ಲಿ ಬಸ್ ನಿಲ್ಲಿಸಿದಾಗ ಕೆಲ ಪ್ರಯಾಣಿಕರು ಇಳಿಯಬೇಕು ಎಂದು ಹೇಳುತ್ತಾರೆ. ಈ ವೇಳೆ ಡೋರ್ ಓಪನ್ ಮಾಡುವಂತೆ ಕೇಳುತ್ತಾರೆ. ಆದರೆ ನಿಜವಾಗಿಯೂ ಸಿಗ್ನಲ್‌ಗಳಲ್ಲಿ ಇಳಿಸುವುದಕ್ಕೆ ಚಾಲಕರಿಗೆ ಅನುಮತಿ ಇಲ್ಲ. ಬಸ್‌ನಿಲ್ದಾಣದಲ್ಲೇ ಇಳಿಸಬೇಕು. ಒಂದು ವೇಳೆ ಸಿಗ್ನಲ್‌ನಲ್ಲಿ ಇಳಿಯುವುದಕ್ಕೆ ಡೋರ್ ಓಪನ್ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.
ಆದರೆ, ಕೆಲ ಪ್ರಯಾಣಿಕರು ಸಿಗ್ನಲ್‌ನಲ್ಲಿ ಇಳಿಯುವುದಕ್ಕೆ ಚಾಲಕರು ಡೋರ್ ಓಪನ್ ಮಾಡಿಲ್ಲ ಎಂದು ಡಿಪೋಗಳಿಗೆ ಲಿಖಿತವಾಗಿ ದೂರು ನೀಡಿದರೆ, ಚಾಲಕರನ್ನೇ ಆರೋಪಿಯನ್ನಾಗಿ ಮಾಡಿ ವಿಚಾರಣೆ ಮಾಡುತ್ತಾರೆ ಕೆಳ ಹಂತದ ಅಧಿಕಾರಿಗಳು, ಇದರಿಂದ ಚಾಲಕರು ಕೂಡ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.
ಅಂದರೆ, ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದಾಗ ಇಳಿಸಿದರೂ ಕಷ್ಟ ಇಳಿಸದಿದ್ದರೂ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಚಾಲಕರು ಸಿಲುಕಿ ಒದ್ದಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆಯೂ ಡೋರ್‌ಬಳಿ ಪ್ರಯಾಣಿಕರಿಗೆ ಕಾಣುವಂತೆ ಸೂಚನಾ ಫಲಕವನ್ನು ಅಳವಡಿಸಿದರೆ ಪ್ರಯಾಣಿಕರು ಚಾಲಕರ ಜತೆ ಗಲಾಟೆ ಮಾಡುವುದು ತಪ್ಪುದೆ ಎಂದು ಕೆಲ ಚಾಲಕರು ಮನವಿ ಮಾಡಿದ್ದಾರೆ.
ಶನಿವಾರ (ಡಿ.16) ನಾವು ಮೆಜೆಸ್ಟಿಕ್‌ನಿಂದ ಮಾರ್ಕೆಟ್ ಮಾರ್ಗವಾಗಿ ಬಸ್ ಕಾರ್ಯಾಚರಣೆ ಮಾಡುತ್ತಿದ್ದಾಗ 40ರಿಂದ 45 ವರ್ಷದ ವ್ಯಕ್ತಿಯೊಬ್ಬರು ನಮ್ಮ ಬಸ್ ಹತ್ತಿದ್ದರು, ಈ ವೇಳೆ ಅವರನ್ನು ಟಿಕೆಟ್ ಪಡೆಯುವಂತೆ ಕೇಳಿದೆ, ಅವರು ಇಲ್ಲ ನನ್ನದು ಪಾಸ್ ಎಂದು ಹೇಳಿದರು. ತೋರಿಸಿ ಎಂದು ಕೇಳಿದಕ್ಕೆ ಅವರು ಬೇಕಾದರೆ ನೀನೆ ಸ್ಕ್ಯಾನ್ ಮಾಡಿಕೊ ಎಂದು ಬೇಜವಾಬ್ದಾರಿಯಿಂದ ವರ್ತಿಸಿದರು. ಆದರೂ ತಾಳ್ಮೆಯಿಂದಲೇ ನನ್ನ ಒಂದು ಕೈಯಲ್ಲಿ ಇಟಿಎಂ ಯಂತ್ರವಿದೆ ಮತ್ತೊಂದು ಕೈಯಲ್ಲಿ ಹಣವಿದೆ ಹೇಗೆ ಮಾಡುವುದು ನೀವೆ ಸ್ಕ್ಯಾನ್ ಮಾಡಿ ತೋರಿಸಿ ಎಂದೆ. ಅದಕ್ಕೆ ಈಗ ಹೇಳಿದ್ದನ್ನು ಮತ್ತೊಮ್ಮೆ ಹೇಳು ನಾನು ವಿಡಿಯೋ ಮಾಡಿಕೊಂಡು ನಿಮ್ಮ ಅಧಿಕಾರಿಗಳಿಗೆ ಕಳಿಸುತ್ತೇವೆ ಇದು ನಿನ್ನ ಕೆಲಸವಲ್ಲವಾ ಎಂದು ಏರು ಧ್ವನಿಯಲ್ಲೇ ಹೇಳಿದ. ಆ ಕೋಪದಲ್ಲೇ ಸ್ಕ್ಯಾನ್ ಮಾಡಿ ತೋರಿಸಿದ. ಬಳಿಕ ಪುರಭವನದಲ್ಲೇ ಇಳಿದು ಹೋದ. ಆದರೆ, ಆ ವ್ಯಕ್ತಿ ಮಾಡಿದ ಗಲಾಟೆಯಿಂದ ಇಡೀ ದಿನ ನನಗೆ ಕರ್ತವ್ಯ ಮಾಡುವುದಕ್ಕೆ ಆಗಲೇ ಇಲ್ಲ. ಆದರೂ ಒತ್ತಡದಲ್ಲೇ ಕೆಲಸ ಮಾಡಿದೆ. ಈ ಬಗ್ಗೆ ನಮ್ಮ ಎಂಡಿ ಮೇಡಂ ಅವರು ಸೂಕ್ತ ಗಮನಹರಿಸಬೇಕು.
l ಹೆಸರೇಳಲಿಚ್ಚಿಸದ ಬಿಎಂಟಿಸಿ ನಿರ್ವಾಹಕರು
Related
1 Comment
Leave a Reply Cancel reply
You Might Also Like
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ
ಬೆಂಗಳೂರು: ಪತ್ನಿ ಹಾಗೂ ಪತ್ನಿ ತಂದೆಯ ಅಂದರೆ ಮಾನನ ಕಿರುಕುಳದಿಂದ ಮಾನಸಿಕವಾಗಿ ಭಾರಿ ನೋವು ಅನುಭವಿಸಿದ ಹೆಡ್‌ಕಾನ್‌ಸ್ಟೇಬಲ್ ಒಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ...
9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ
ಮಂಗಳೂರು: ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದ ಆರೋಪಿ ಪಿಡಿಒಗೆ ಮಂಗಳೂರಿನ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷದ...
KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಕುಣಿಗಲ್ ಘಟಕದ ಚಾಲಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದು, ವಿಷಯ ತಿಳಿದ ಕೂಡಲೇ ಅಧಿಕಾರಿಗಳು...
KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳ ಈಡೇರಿಕಗಾಗಿ ಜಂಟಿ ಕ್ರಿಯಾ ಸಮಿತಿ ಇದೇ ಡಿ.31ರಂದು ಮುಷ್ಕರಕ್ಕೆ ಕರೆ ನೀಡಿದೆ. ಅದರ ಮುಂದುವರಿದ ಭಾಗವಾಗಿ...
ಸರ್ಕಾರದ ನಡೆಯೇ BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG
ಬೆಂಗಳೂರು: ರಾಜ್ಯ ಸರ್ಕಾರದ 5 ಮಹತ್ವದ ಗ್ಯಾರಂಟಿ ಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಕರ್ನಾಟಕದಲ್ಲಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾದ ಯೋಜನೆ...
KSRTC ಕುಣಿಗಲ್: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರೊಬ್ಬರ ಮೇಲೆ ಲಾ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರೂ ಸಹ ಅವರನ್ನು ಬಂಧಿಸದಿರುವುದಕ್ಕೆ ಅಸಮಾಧಾನಗೊಂಡ ಹಲ್ಲೆಗೊಳಗಾದ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ....
KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ
ಸಾರಿಗೆ ನೌಕರರತ್ತ ಒಮ್ಮೆ ನೋಡಿ l ವೇತನ ಹೆಚ್ಚಳ ಸಮಸ್ಯೆಗೆ ಇತಿಶ್ರೀ ನಿಮ್ಮಿಂದ ಸಾಧ್ಯ ಬೆಂಗಳೂರು: ತಿಂಗಳು ಪೂರ್ತಿ ದುಡಿದರೂ ಸರಿಯಾದ ಸಮಯಕ್ಕೆ ವೇತನ ಸಿಗದೆ, ಸಿಕ್ಕ...
BMTC: ಆಧಾರ್ ಕಾರ್ಡ್ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಆಧಾರ್ ಕಾರ್ಡ್ ಯಾವುದೇ ಭಾಷೆಯಲ್ಲಿರಲಿ ಅದು ಕರ್ನಾಟಕ ರಾಜ್ಯದ್ದಾಗಿದ್ದರೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಬೇಕು...
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್
ಹಾವೇರಿ: ಚೆಲಿಸುತ್ತಿದ್ದ ಬಸ್ ಹತ್ತಲು ಹೋಗಿ ವೃದ್ಧೆಯೊಬ್ಬರು ಕೆಳಗೆ ಬಿದ್ದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಹರಿದು ಎರಡು ಕಾಲುಗಳು ತುಂಡಾಗಿರುವ ಘಟನೆ ನಗರದ ಕೇಂದ್ರ ನಿಲ್ದಾಣದಲ್ಲಿ...
KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್ ಬಂಧನ
ಮಡಿಕೇರಿ: ನಿತ್ಯ ತಾನು ಬಸ್ ಚಲಾಯಿಸುತ್ತಿದ್ದ ಮಾರ್ಗವನ್ನು ಬದಲಾಯಿಸಿ ಬೇರೆ ಮಾರ್ಗಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ್ದಕ್ಕೆ ಸಹೋದ್ಯೋಗಿ ನಿರ್ವಾಹಕನೆ ಕಾರಣ ಕಾರಣ ಎಂದು ನಿರ್ವಾಹಕನ ಮೇಲೆ ಮುಗಿಬಿದ್ದು ಸಾರ್ವಜನಿಕ...
KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ
ಲಿಂಗಸಗೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಘಟಕ ವ್ಯವಸ್ಥಾಪಕರು ದಿನನಿತ್ಯ ಒಂದಿಲೊಂದು ರೀತಿಯಲ್ಲಿ ಕಿರುಕುಳು ನೀಡುತ್ತಿದ್ದು...
ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟರ್: ನಾಲೆಗೆ ಹಾರಿ ಆತ್ಮಹತ್ಯೆ
ಮೈಸೂರು: ಸಾಲದ ಸುಳಿಯಲ್ಲಿ ಸಿಲುಕಿ ಅದನ್ನು ತೀರಿಸಲಾಗದೆ ಮನಸ್ಸಿನಲ್ಲಿ ಭಾರಿ ನೋವು ಅನುಭವಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗದ ನಿರ್ವಾಹಕರೊಬ್ಬರು ನದಿಗೆ ಹಾರಿ...
ವಿಜಯಪಥ ಪೂರ್ಣ ಮಾಹಿತಿ ಪಡೆದು ಲೇಖನ ಬರೆಯಬೇಕು.ಬಿಎಂಟಿಸಿ ವತಿಯಿಂದ ಹೊರಡಿಸಿರುವ FAQ ಒಮ್ಮೆ ನೋಡಿ. ಕೆಲವೊಂದು ಬಸ್ ಗಳಲ್ಲಿ QR code ಮಾಸಿ ಹೋಗಿರುತ್ತೆ. ನಿರ್ವಾಹಕರು ಉದ್ದಟತನ ಮೆರೆದು ಡ್ರೈವರ್ ಬಳಿ ಇರುವ QR CODE ಸ್ಕ್ಯಾನ್ ಮಾಡೋಕೆ ಕಳಿಸುತ್ತಾರೆ.
How can I validate my pass inside the bus?
There are three ways to validate your ticket/pass.
Once you open your ticket/pass on the Tummoc app:
1. Tap on the Scan QR button in Tummoc app and scan the QR that the conductor presents.
2. Show your QR code to the conductor for him/her to scan with his/her QR code scanner using ETM device/mobile app.
3. Let the conductor go through the ticket/pass details manually to verify the validity and any other vital details.
How do I present the pass to the conductor and the line checker?
You need to show the ticket/pass on the Tummoc app for the conductor/line checker to verify your ticket.
Additionally, in the case of passes, you may be asked for the ID number of the ID that you used while booking your pass.
What happens if my internet is not working?
If your internet isn’t working, then you can give the conductor your ticket number or the registered phone number with which you bought the ticket/pass. He/she will then verify this on his app/ETM device.