NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಏ.5ರೊಳಗೆ ನೌಕರರ ವೇತನ ಪರಿಷ್ಕರಣೆ ಹಿಂಬಾಕಿ ಸೇರಿ ಎಲ್ಲ ಹಿಂಬಾಕಿ  ಬಿಲ್ಲುಗಳ ಸಲ್ಲಿಸಿ – ಲೆಕ್ಕಾಧಿಕಾರಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿಯ ಎಲ್ಲ ಘಟಕಗಳ ಹಿರಿಯ/ ಘಟಕ ವ್ಯವಸ್ಥಾಪಕರು, ಕಾರ್ಯ ವ್ಯವಸ್ಥಾಪಕರು, ಕಾರ್ಯಾಗಾರ, ನಿಲ್ದಾಣಾಧಿಕಾರಿಗಳು 31.03.2024 ರ ಅಂತಿಮ ಜವಾಬ್ದಾರಿ ಮತ್ತು ಹಬ್ಬದ ಮುಂಗಡ ಪಟ್ಟಿ (Outstanding liabilities & Festival Advance Schedule) ನೀಡುವುದಕ್ಕೆ ಸಂಬಂಧಿಸಿದ ವಿವರವನ್ನು  ಏ.5ರೊಳಗೆ ವೇತನ ಶಾಖೆಗೆ ಸಲ್ಲಿಸಬೇಕು ಎಂದು ಸಂಸ್ಥೆಯ ಉಪಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹೌದು! ಈ ಎಲ್ಲ ಮಾಹಿತಿಯನ್ನು ಬರುವ ಏಪ್ರಿಲ್‌ 5ರೊಳಗಾಗಿ ವಿಶೇಷ ಟಪಾಲಿನಲ್ಲಿ ಅಂದರೆ ವೈಯುಕ್ತಿಕವಾಗಿ ವೇತನ ಶಾಖೆಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಗಳಿಗೆ ಬುಧವಾರ ಸೂಚನೆ ನೀಡಿದ್ದಾರೆ.

2023-24 ನೇ ಸಾಲಿನ ಆರ್ಥಿಕ ವರ್ಷವು ಇದೇ ಮಾರ್ಚ್‌ 31ಕ್ಕೆ ಅಂತ್ಯಗೊಳ್ಳಲಿದ್ದು ವೇತನ ಪಾವತಿಗೆ ಸಂಬಂಧಿಸಿದ ಈ ಕೆಳಕಂಡ ಎಲ್ಲ ಹೊಣೆಗಾರಿಕೆಗಳನ್ನು ಲೆಕ್ಕಾಚಾರ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

1. 31.03.2024ರ ಅಂತ್ಯಕ್ಕೆ ಸಂಸ್ಥೆಯ ನೌಕರರಿಗೆ ಪಾವತಿಸಲು ಬಾಕಿ ಇರುವ ರಜಾ ವೇತನ, ಹಿಂಬಾಕಿ ವೇತನ ಪಾವತಿಗಳ ಮೊತ್ತಗಳ ಸಿಬ್ಬಂದಿವಾರು/ ಲೆಕ್ಕಶೀರ್ಷಿಕೆವಾರು ವಿವರಗಳನ್ನು ನೀಡಬೇಕು.

2. 01.01.2020 ರಿಂದ 28.02.2023 ರವರೆಗಿನ ಎಲ್ಲ ಸಿಬ್ಬಂದಿಗಳ ವೇತನ ಪರಿಷ್ಕರಣೆ ಹಿಂಬಾಕಿ ಲೆಕ್ಕಾಚಾರ ಪಟ್ಟಿ (ವಾಸ್ತವಿಕ ಮೊತ್ತ ಲೆಕ್ಕಾಚಾರ ಮಾಡುವುದು, ಹೊಣೆಗಾರಿಕೆ ಕಲ್ಪಿಸಲು ಮಾತ್ರ).

3. 31.03.2024ರ ಒಳಗಾಗಿ ಮಾಸಿಕ ವೇತನ ಪಟ್ಟಿಯಲ್ಲಿ ಅನುಷ್ಠಾನವಾಗಿ ಆದರೆ ಪಾವತಿಸಲು ಬಾಕಿ ಇರುವ ವಾರ್ಷಿಕ ವೇತನ ಬಡ್ತಿಯ ಹಿಂಬಾಕಿ ಮೊತ್ತ, (ಕಳೆದ ವರ್ಷಗಳು ಸೇರಿದಂತೆ ಯಾವುದಾದರೂ ಪಾವತಿ ಬಾಕಿ ಇದ್ದರೆ.)

4. 31.03.2024ರೊಳಗಾಗಿ ಪಾವತಿಸಲು ಬಾಕಿ ಇರುವ ತುಟ್ಟಿ ಭತ್ಯೆ ಹಿಂಬಾಕಿ ಬಿಲ್ಲುಗಳು ಅಂದರೆ, 01.07.2022 ರಿಂದ ಅನ್ವಯವಾಗುವ 3.75% ತುಟ್ಟಿಭತ್ಯೆಯ 05 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ. 01.01.2023 ರಿಂದ ಅನ್ವಯವಾಗುವ 4% ತುಟ್ಟಿಭತ್ಯೆಯ 7 ತಿಂಗಳುಗಳ ತುಟ್ಟಿ ಭತ್ಯೆ ಹಿಂಬಾಕಿ.

01.07.2023 ರಿಂದ ಅನ್ವಯವಾಗುವ 3.75% ತುಟ್ಟಿಭತ್ಯೆ 04 ತಿಂಗಳುಗಳ ಹಿಂಬಾಕಿ ತುಟ್ಟಿ ಭತ್ಯೆ. 01.01.2024 ರಿಂದ ಅನ್ವಯವಾಗುವ 3.75% ತುಟ್ಟಿಭತ್ಯೆಯ ತಿಂಗಳನ (ಫೆಬ್ರವರಿ-2024) ತುಟ್ಟಿ ಭತ್ಯೆ ಹಿಂಬಾಕಿ ಸಂಬಂಧ ಪ್ರತ್ಯೇಕ ವಿವರಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

5. ಮಾಸಿಕ ವೇತನ, ವೇತನ ಹಿಂಬಾಕಿ (ನ್ಯಾಯಾಲಯದ ಪ್ರಕರಣಗಳ ಹಿಂಬಾಕಿ ಮೊತ್ತ ಇತ್ಯಾದಿ) ಧನಾದೇಶಗಳ ಅವಧಿ ಮುಕ್ತಾಯಗೊಂಡಿದ್ದಲ್ಲಿ, ಸಂಬಂಧಿತ ಲೆಕ್ಕಶೀರ್ಷಿಕೆಯಡಿ UDP ಮೊತ್ತವನ್ನು (ನಗದು/ಧನಾದೇಶ) ಕೇಂದ್ರ ಕಚೇರಿಯಲ್ಲಿ 28/03/2024ರೊಳಗಾಗಿ ಸಂದಾಯ ಮಾಡಲು ಕ್ರಮ ವಹಿಸಬೇಕು.

6. 31.03.2024 ರ ಅಂತಿಮಕ್ಕೆ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳ ಹಿಂಬಾಕಿ ವೇತನ ಮೊತ್ತದ ಜವಾಬ್ದಾರಿಯ ಪಟ್ಟಿ (ಕಳೆದ ವರ್ಷಗಳು ಸೇರಿದಂತೆ) ಸಲ್ಲಿಸಬೇಕು.

7. ಪರೀಕ್ಷಣಾರ್ಥಿಗಳ ವೇತನ ವ್ಯತ್ಯಾಸದ ಬಾಕಿ ಮೊತ್ತದ ವಿವರಗಳು (ಲೆಕ್ಕಶೀರ್ಷಿಕೆವಾರು)-(ಕಳೆದ ವರ್ಷಗಳು ಸೇರಿದಂತೆ) ಎಲ್ಲವನ್ನು ಸಲ್ಲಿಸಬೇಕು.

8. ಘಟಕದಲ್ಲಿ ಹಬ್ಬದ ಮುಂಗಡ ಪಡೆದಿರುವ ಉದ್ಯೋಗಿಗಳಿಂದ 31.03.2024 ಕ್ಕೆ ಬಾಕಿಯಿರುವ ಮೊತ್ತದ ವಿವರಣಾ ಪಟ್ಟಿ (ವೇತನದಲ್ಲಿ ಕಡಿತವಾಗಿರುವ ಹಾಗೂ ಘಟಕದಲ್ಲಿ ಸಂದಾಯವಾಗಿರುವ ಮೊತ್ತವನ್ನು ಹಬ್ಬದ ಮುಂಗಡದೊಂದಿಂಗೆ ತಾಳೆ ಮಾಡಿ) ಸಲ್ಲಿಸಬೇಕು.

9. 2018 ನೇ ಸಾಲನ ಬಿ.ಡಿ.ಎ ಹಿಂಬಾಕಿ ಮೊತ್ತದ ವಾಸ್ತವಿಕ ವೆಚ್ಚದ ಬಿಲ್ಲುಗಳನ್ನು ಸಲ್ಲಿಸುವುದು. 10. 2018-19, 2019-20, 2021-22, 2022-23 ಹಾಗೂ 2023-24ನೇ ಸಾಲಿನ ಗಳಿಕೆ ರಜೆ ನಗದೀಕರಣದ ವಾಸ್ತವಿಕ ವೆಚ್ಚದ ಬಿಲ್ಲುಗಳನ್ನು ಸಲ್ಲಿಸಬೇಕು.

ಈ ಎಲ್ಲ ವಿವರವನ್ನು ಸಂಬಂಧಿಸಿದ ಲೆಕ್ಕಪತ್ರ ಮೇಲ್ವಿಚಾರಕರು/ ಅಧೀಕ್ಷಕರು ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ವೈಯಕ್ತಿಕ ಗಮನ ಹರಿಸಿ ಕೋರಿದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ದೃಢೀಕೃತ ಪಟ್ಟಿ ಸಲ್ಲಿಸಲು ಘಟಕ ವ್ಯವಸ್ಥಾಪಕರು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಇನ್ನು ಈ ಎಲ್ಲ ಹಿಂಬಾಕಿ ಲೆಕ್ಕಚಾರ ಪಟ್ಟಿಗಳನ್ನು ಸಲ್ಲಿಸುವಾಗ ಸೇವಾನಿರತ ಹಾಗೂ ಸೇವಾ ವಿಮುಕ್ತಿ ಪ್ರಕರಣಗಳ ಲೆಕ್ಕಾಚಾರ ಪಟ್ಟಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು.

ನಿಧನ ಪ್ರಕರಣಗಳಲ್ಲಿ ಕಡ್ಡಾಯವಾಗಿ ನಾಮನಿರ್ದೇಶಿತರ ಹೆಸರು ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಕಳುಹಿಸಬೇಕು. ಅಂತರ್‌ ನಿಗಮದ ವರ್ಗಾವಣೆ. ಶಾಶ್ವತ ವಿಲೀನಾತಿಯನ್ವಯ ನಿಯೋಜನೆಯ ಪ್ರಕರಣಗಳಲ್ಲಿ ವರ್ಗಾವಣೆ/ ನಿಯೋಜನೆಗೊಂಡ ನಿಗಮ ಹಾಗೂ ವಿಭಾಗಗಳ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು.

ಇನ್ನು ಪ್ರಮುಖವಾಗಿ ಎಲ್ಲ ಹಿಂಬಾಕಿ ಬಿಲ್ಲುಗಳನ್ನು ಪ್ರತ್ಯೇಕವಾಗಿ ಸಲ್ಲಿಸುವುದರ ಜತೆಗೆ ಅಡಕಗೊಳಿಸಿರುವ ವರ್ಗಾವಾರು/ ಲೆಕ್ಕಶೀರ್ಷಿಕೆವಾರು ಪ್ರತ್ಯೇಕಿಸಿ ದೃಢೀಕೃತ ಪಟ್ಟಿಯನ್ನು 5.04.2024 ರೊಳಗಾಗಿ ವೈಯುಕ್ತಿಕವಾಗಿ ವೇತನ ಶಾಖೆಗೆ ಸಲ್ಲಿಸಲುಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯ ಲೆಕ್ಕಾಧಿಕಾರಿ ಸೂಚನೆ ನೀಡಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ