NEWSನಮ್ಮಜಿಲ್ಲೆನಮ್ಮರಾಜ್ಯ

BMTC: ನಿವೃತ್ತ ಪೊಲೀಸ್‌ ಅಧಿಕಾರಿ ಭಾಸ್ಕರ್‌ ರಾವ್‌ ನೇತೃತ್ವದಲ್ಲಿ ಬನಶಂಕರಿ ಡಿಪೋಗೆ ಭೇಟಿ ನೌಕರರ ಕುಂದುಕೊರತೆ ಆಲಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಗುರುವಾರ ಮಧ್ಯಾಹ್ನ ಬಿಎಂಟಿಸಿ ಬನಶಂಕರಿ ಘಟಕ 20ಕ್ಕೆ ಭೇಟಿ ನೀಡಿ ನೌಕರರ ಕುಂದುಕೊರತೆ ಆಲಿಸಿದರು.

ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರ ನೇತೃತ್ವದಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು ನೌಕರರ ಜತೆ ಚರ್ಚಿಸಿದರು.

ಡಿಪೋದಲ್ಲಿ ಸರಿಯಾಗಿ ರಜೆ ಸಿಗುತ್ತಿಲ್ಲ. ನೈಟ್ ಶಿಫ್ಟ್ ಸರಿಯಾಗಿ ಕೊಡ್ತಾ ಇಲ್ಲ. ಶಿಫ್ಟ್ ಆಪರೇಟ್ ಮಾಡಬೇಕು. 8 ಗಂಟೆ ಡ್ಯೂಟಿ ಕೊಡಬೇಕು. ಕೋವಿಡ್‌ನಲ್ಲಿದ್ದ ಫ್ರೀ ರೆಸ್ಟ್ ತೆಗಿಬೇಕು. ಹೆಚ್ಚುವರಿ ಕರ್ತವ್ಯಕ್ಕೆ ಓಟಿ ನೀಡಬೇಕು. ಡಿಪೋಮಟ್ಟದ ಕಿರುಕುಳ ತಪ್ಪಿಸಬೇಕು ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ನೌಕರರು ತಮ್ಮ ಅಳಲು ತೋಡಿಕೊಂಡರು.

ಇದರ ಹೊರತಾಗಿ ಕಳೆದ 2020ರ ಜನವರಿಯಲ್ಲಿ ವೇತನ ಹೆಚ್ಚಳವಾಗಬೇಕಾಗಿದ್ದು, ಈವರೆಗೂ ಅದು ಆಗಿಲ್ಲ. ಹಾಗಾಗಿ ಕೂಡಲೇ ವೇತನ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸರ್ಕಾರ ಸೇರಿದಂತೆ ಆಡಳಿತ ಮಂಡಳಿಯ ಗಮನಕ್ಕೆ ತರಬೇಕು ಎಂಬ ಒತ್ತಾಯ ಮಾಡಿದರು.

ಇನ್ನು ಕೋವಿಡ್‌ ಸಮಯದಲ್ಲಿ ಇದ್ದಂತೆ ಈಗಲೂ ಎರಡರಿಂದ ನಾಲ್ಕುಗಂಟೆವರೆಗೆ ಬಸ್‌ನಲ್ಲಿ ರೆಸ್ಟ್‌ ಮಾಡಬೇಕು. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಅಲ್ಲದೆ ನಾವು 8 ಗಂಟೆಯ ಬದಲಿಗೆ 12ರಿಂದ 13 ಗಂಟೆಗಳು ಕೆಲಸ ಮಾಡಿದಂತಾಗುತ್ತಿದೆ. ಹೀಗಾಗಿ ಈ ರೆಸ್ಟ್‌ ಸಮಯವನ್ನು ಬಿಟ್ಟು 8 ಗಂಟೆಗಳು ಕೆಲಸ ಮಾಡುವುದಕ್ಕೆ ಈ ಹಿಂದೆ ಇದ್ದಂತೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಈಗ ನೌಕರರು ಕಡಿಮೆ ಇದ್ದಾರೆ ಎಂದು ಹೆಚ್ಚು ಸಮಯದ ವರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಆ ಹೆಚ್ಚುವರಿ (ಓಟಿ) ಸಮಯಕ್ಕೆ ಯಾವುದೆ ವೇತನ ಕೊಡುತ್ತಿಲ್ಲ. ನಾವು 8 ಗಂಟೆ ಬಳಿಕ ಮಾಡುವ ಕೆಲಸಕ್ಕೆ ತಕ್ಕ ಓಟಿ ಕೊಡಬೇಕು ಎಂದು ಮನವಿ ಮಾಡಿದರು. ಹೀಗೆ ನೌಕರರ ಸಂಘದ ಪದಾಧಿಕಾರಿಗಳ ಮುಂದೆ ನೌಕರರು ಹತ್ತು ಹಲವು ಸಮಸ್ಯೆಗಳನ್ನು ತೆರೆದಿಟ್ಟರು.

ಎಲ್ಲ ನೌಕರರ ಸಮಸ್ಯೆ ಆಲಿಸಿದ ಸಂಘದ ಪದಾಧಿಕಾರಿಗಳು ಬಳಿಕ ಡಿಪೋ ವ್ಯವಸ್ಥಾಪಕರನ್ನು ಭೇಟಿ ಮಾಡಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಕೊಡಂರು ಆದರೆ ಡಿಎಂ ರಜೆ ಇದ್ದಿದ್ದರಿಂದ ಎಟಿಎಸ್‌ ಅವರ ಜತೆ ಚರ್ಚಿಸಿ ನಿಮ್ಮ ವ್ಯಾಪ್ತಿಗೆ ಬರುವ ರಜೆ, ಫಾರಂ -4 ಇತರ ವಿಷಯದ ಬಗ್ಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮನವಿ ಮಾಡಿದರು.

ಇನ್ನು ನೌಕರರು ರಜೆ ಹಾಕಿಕೊಳ್ಳುವುದಕ್ಕೆ ರಜೆ ನಿರ್ವಾಹಣೆ ಮಷಿನ್‌ ಅನ್ನು ಲಾಕ್‌ ಮಾಡಿರುತ್ತಾರೆ ಮತ್ತು ಈ ಹಿಂದೆ ಸಿಗುತ್ತಿದ್ದ 5 ರಾಷ್ಟ್ರೀಯ ಹಬ್ಬಗಳಂದು ( ಸ್ವಾತಂತ್ಯ್ರ ದಿನಾಚರಣೆ, ಗಾಂಧಿ ಜಯಂತಿ, ಜನವರಿ 26 ಗಣರಾಜ್ಯೋತ್ಸವ, ನವೆಂಬರ್‌ 1 ಕನ್ನಡ ರಾಜ್ಯೋತ್ಸವ ಮತ್ತು ಮೇ 1ರ ಕಾರ್ಮಿಕ ದಿನಚಾರಣೆ) ರಜೆ ತೆಗೆದುಕೊಳ್ಳುತ್ತಿದ್ದೆವು. ಆದರೆ ಈಗ ಅದನ್ನು ಸಹ ತೆಗೆದುಕೊಳ್ಳಲು ಆಗದ ಸ್ಥಿತಿ ಇದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಸಂಘ ಮನವಿ ಮಾಡಿತು.

ಈ ವೇಳೆ ಸಂಘದ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ರಾಮು ಡಿ., ಖಜಾಂಚಿ ಯೋಗೇಶ್ ಎಚ್.ಕೆ., ಉಪಾಧ್ಯಕ್ಷ ಸುಧಾಕರ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಶ್ರೀಧರ್ ತಹಶೀಲ್ದಾರ್, ಸಂಘದ ಎಲ್ಲ ಪದಾಧಿಕಾರಿಗಳು ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ