ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕೊರೊನಾ ನಡುವೆಯೇ ಸಂಸತ್ ಅಧಿವೇಶನ ಆರಂಭವಾಗಿದ್ದು, ಇಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ ಇಲ್ಲ. ಆದರೆ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಯಾವುದೇ ತೆರಿಗೆ ಕಟ್ಟುವಂತ್ತಿಲ್ಲ.
ಕೋವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕಾಗದರಹಿತ ಬಜೆಟ್ ಮಂಡನೆ ಮಾಡುತ್ಡತಿದೆ. ಈಗಾಗಲೇ ಕೇಂದ್ರ ಸರ್ಕಾರ Union Budget Mobile App ಬಿಡುಗಡೆ ಮಾಡಿದ್ದು, ಇದರಲ್ಲಿ ಬಜೆಟ್ನ ಪೂರ್ತಿ ಮಾಹಿತಿ, ದಾಖಲೆಗಳು ಸಿಗಲಿವೆ.
ಸತತ ಮೂರನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ಅಕಾಲಿದಳದ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ಗೆ ಬಂದಿದ್ದರು.
ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡನೆ ಮಾಡಿದ್ದು ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ….
12:51 pm (IST)
ಸೋಲಾರ್, ಇನ್ವರ್ಟರ್ ಮೇಲಿನ ಆಮದು ಸುಂಕ ಏರಿಕೆ
12:51 pm (IST)
ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿ
ಹತ್ತಿ, ಕಚ್ಚಾ ರೇಷ್ಮೆಯ ಅಬಕಾರಿ ಸುಂಕ ಹೆಚ್ಚಳ
ದೇಶ ಈಗ ಮೊಬೈಲ್ ಮತ್ತು ಚಾರ್ಜರ್ ಗಳನ್ನು ರಫ್ತು ಮಾಡುತ್ತಿದೆ. ಮೊಬೈಲ್ ಬಿಡಿಭಾಗಗಳ ಆಮದಿಗೆ ಕಸ್ಟಮ್ ಸುಂಕ ಕಡಿತ.
12:46 pm (IST)
ಮುಂಬರುವ ಜನಗಣತಿಯು ಭಾರತದ ಇತಿಹಾಸದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಿದೆ. ಈ ಕಾರ್ಯಕ್ಕಾಗಿ, 2021-22ರಲ್ಲಿ 3,768 ಕೋಟಿ ಮೀಸಲು
12:46 pm (IST)
ಜಿಎಸ್ ಟಿ ಜಾರಿಯಾಗಿ ನಾಲ್ಕು ವರ್ಷವಾಗಿದೆ. ಜಿಎಸ್ ಟಿಯಲ್ಲಿ 400 ಹಳೇಯ ಮತ್ತು ಅಪ್ರಸ್ತುತ ತೆರಿಗೆಗಳನ್ನು ತೆಗೆದು ಹಾಕಲಾಗಿದೆ.
12:43 pm (IST)
ಅಗ್ಗದ ಗೃಹ ಸಾಲ ಮುಂದುವರಿಸಲು ತೀರ್ಮಾನ, ಗೃಹ ಸಾಲದ ತೆರಿಗೆ ವಿನಾಯತಿ ಒಂದು ವರ್ಷ ವಿಸ್ತರಣೆ
12:43 pm (IST)
2025-26ರ ವೇಳೆಗೆ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇ. 4.5 ಗಿಂತ ಕಡಿಮೆ ಮಾಡಲು ಸರ್ಕಾರ ಬದ್ಧವಾಗಿದೆ: ವಿತ್ತ ಸಚಿವೆ
12:41 pm (IST)
ಎನ್ ಆರ್ ಐಗಳಿಗೆ ಎರಡು ಕಡೆ ತೆರಿಗೆ ಕಟ್ಟುವುದರಿಂದ ವಿನಾಯ್ತಿ, 5 ಕೋಟಿ ವಹಿವಾಟು ನಡೆಸುವ ಚಾರಿಟೆಬಲ್ ಟ್ರಸ್ಟ್ ಗಳಿಗೆ ತೆರಿಗೆ ವಿನಾಯಿತಿ
12:41pm (IST)
15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ರಾಜ್ಯಗಳು 41 ಶೇ. ತೆರಿಗೆ ಪಾಲನ್ನು ಪಡೆಯುತ್ತವೆ, ಸರ್ಕಾರವು ಆಯೋಗದ ಶಿಫಾರಸನ್ನು ಅಂಗೀಕಾರ ಮಾಡಿದೆ.
12:39 pm (IST)
ಖಾಸಗಿ ಬಳಕೆ ವಾಹನಗಳಿಗೆ 20 ವರ್ಷ, ವಾಣಿಜ್ಯ ಬಳಕೆ ವಾಹನಗಳಿಗೆ 15 ವರ್ಷ, ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ನಿರ್ಮಾಣ
12:39 pm (IST)
ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಯೋಜನೆಗಾಗಿ 1,500 ಕೋಟಿ ರೂ ನಿಗದಿ.
12:38 pm (IST)
1 ಲಕ್ಷದ 10 ಸಾವಿರ ಜನರು ತೆರಿಗೆ ಕಟ್ಟುವ ವಿವಾದ ಬಗೆಹರಿಸಿಕೊಂಡಿದ್ದಾರೆ. ಡಿವಿಡೆಂಡ್ ಮೇಲಿನ ಬಡ್ಡಿ ಇಳಿಕೆ
12:37 pm (IST)
ರಾಷ್ಟ್ರೀಯ ಭಾಷಾ ಅನುವಾದ ಉಪಕ್ರಮಕ್ಕೆ( national language translation initiative) ಸರ್ಕಾರ ಪ್ರಸ್ತಾವನೆ
12:36 pm (IST)
ಐದು ವರ್ಷಗಳಲ್ಲಿ 4,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ವಿನಿಯೋಗಿಸುವ ಮೂಲಕ ಆಳ ಸಾಗರ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಪ್ರಸ್ತಾಪ.
12:35 pm (IST)
1 ಲಕ್ಷದ 10 ಸಾವಿರ ಜನರು ತೆರಿಗೆ ಕಟ್ಟುವ ವಿವಾದ ಬಗೆಹರಿಸಿಕೊಂಡಿದ್ದಾರೆ.
12:32 pm (IST)
ಮುಂಬರುವ ಜನಗಣತಿಗಾಗಿ 3,726 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು ಇದು ಮೊಟ್ಟ ಮೊದಲ ಡಿಜಿಟಲ್ ಜನಗಣತಿಯಾಗಿದೆ.
ಹಿರಿಯ ನಾಗರಿಕರಿಗೆ ತೆರಿಗೆಯಲ್ಲಿ ರಿಲೀಫ್, 75 ವರ್ಷ ಮೇಲ್ಪಟ್ಟವರು ತೆರಿಗೆ ಕಟ್ಟುವಂತಿಲ್ಲ
12:29 pm (IST)
ತೆರಿಗೆ ಸುಧಾರಣಾ ನಿಯಮ ಜಾರಿಗೆ ತರಲು ನಿರ್ಧಾರ
12:28 pm (IST)
ಲೇಹ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು
12:27 pm (IST)
ಗೋವಾ ಸರ್ಕಾರಕ್ಕೆ 300 ಕೋಟಿ ರೂ ಅನುದಾನ
ಟೀ ಕಾರ್ಮಿಕರಿಗೆ 300 ಕೋಟಿ ರೂ. ಅನುದಾನ
ಜಲಜೀವನ ಮಿಷನ್ಗೆ 2.87 ಲಕ್ಷ ಕೋಟಿ ರೂ. ಅನುದಾನ ಮೀಸಲು
12:27 pm (IST)
ಕೃಷಿ ಮೂಲಸೌಕರ್ಯಕ್ಕಾಗಿನ ನಿಧಿ 40,000 ಕೋಟಿ ರೂ.ಗೆ ಏರಿಕೆ, ಸಣ್ಣ ನೀರಾವರಿ ಬೆಳೆಗೆಳ ಸೌಕರ್ಯಕ್ಕೆ 10,000 ಕೋಟಿ ರೂ. ಮೀಸಲು.
12:25 pm (IST)
ಡಿಜಿಟಲ್ ಮೋಡ್ ಪೇಮೆಂಟ್ ಉತ್ತೇಜನಕ್ಕೆ 1500 ಕೋಟಿ ರೂ.
12:24 pm (IST)
ಎಲೆಕ್ಟ್ರಾನಿಕ್ ರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಇನ್ನೂ 1,000 ಮಂಡಿಗಳ ಸಂಯೋಜನೆಗೆ ಅಸ್ತು.
12:24pm (IST)
ಸಂಶೋಧನಾ ವಲಯಕ್ಕೆ 50 ಸಾವಿರ ಕೋಟಿ ರೂ.
12:21 pm (IST)
ಕೃಷಿ ಸಾಲದ ಗುರಿಯನ್ನು 2021-22ರಲ್ಲಿ 16.5 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ
ಮುಂದಿನ ಹಣಕಾಸು ವರ್ಷದಲ್ಲಿ ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುವ ಹಣವನ್ನು 40,000 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ.
12:19 pm (IST)
ಗೋಧಿ ಬೆಳೆದ ರೈತರು ಎಂಎಸ್‌ಪಿ ಆಧಾರದಲ್ಲಿ 75,100 ಕೋಟಿ ರೂ ಪಡೆದಿದ್ದಾರೆ. ಇದು 43.36 ಲಕ್ಷ ಗೋಧಿ ಬೆಳೆಯುವ ರೈತರಿಗೆ ಈ ಹಿಂದೆ 35.57 ಲಕ್ಷಕ್ಕೆ ಹೋಲಿಸಿದರೆ ಹೆಚ್ಚಿನ ಲಾಭ ದೊರಕಿಸಿದೆ.
12:17 pm (IST)
ಕೌಶಲ್ಯಾಭಿವೃದ್ದಿಗೆ ಮೂರು ಸಾವಿರ ಕೋಟಿ ರೂಪಾಯಿ ಅನುದಾನ. ಭಾರತ್ ಜಪಾನ್ ನಡುವೆ ಕೌಶಲ್ಯ ಅಭಿವೃದ್ದಿ ಒಪ್ಪಂದ.
12:16pm (IST)
ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ. ಎಲ್ಲಾ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ
12:15 pm (IST)
100 ಹೊಸ ಸೈನಿಕ ಶಾಲೆಗಳ ಸ್ಥಾಪನೆ
ಲೇಹ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
12:14 pm (IST)
ಎಲ್ಲ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಕಡ್ಡಾಯ
ಗ್ರಾಮೀಣ ಮೂಲ ಸೌಕರ್ಯಕ್ಕೆ 40 ಸಾವಿರ ಕೋಟಿ ಅನುದಾನ
ಎಲ್ಲ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಕಡ್ಡಾಯ. ಗ್ರಾಮೀಣ ಮೂಲ ಸೌಕರ್ಯಕ್ಕೆ 40 ಸಾವಿರ ಕೋಟಿ ಅನುದಾನ
12:13 pm (IST)
ಬ್ಯಾಂಕುಗಳ ಆಸ್ತಿಗಾಗಿ ಆಸ್ತಿ ಪುನರ್ನಿರ್ಮಾಣ ಮತ್ತು ನಿರ್ವಹಣಾ ಕಂಪನಿ (Asset reconstruction and management company) ಸ್ಥಾಪನೆಗೆ ನಿರ್ಧಾರ.
12:12 pm (IST)
ಕೃಷಿ ಸಾಲಕ್ಕೆ 16.5 ಲಕ್ಷ ಕೋಟಿ ರೂ. ಅನುದಾನ
12:10pm (IST)
ಪ್ರಸ್ತುತ 50 ಲಕ್ಷ ರೂ.ಗಳಿರುವ ಸಣ್ಣ ಉದ್ಯಮಗಳ ಬಂಡವಾಳದ ಮೂಲವನ್ನು 2 ಕೋಟಿ ರೂ.ಗೆ ಏರಿಸುವ ಮೂಲಕ ಆ ಕ್ಷೇತ್ರದ ವ್ಯಾಖ್ಯಾನವನ್ನು ಪರಿಷ್ಕರಣೆ ಮಾಡಬೇಕಿದೆ.
ಎನ್ ಜಿ ಒ ಸಹಭಾಗಿತ್ವದಲ್ಲಿ 100 ಸೈನಿಕ್ ಶಾಲೆಗಳ ನಿರ್ಮಾಣಕ್ಕೆ ಒತ್ತು
12:09pm (IST)
ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿ
12:08pm (IST)
ಹಣಕಾಸು ವರ್ಷ 2022ರಲ್ಲಿ ಎಲ್‌ಐಸಿ ಐಪಿಒ ಪ್ರಾರಂಭ.
12:07pm (IST)
ಧಾನ್ಯ ಖರೀದಿಗೆ 10.500 ಕೋಟಿ ರೂಪಾಯಿ ಅನುದಾನ ಮೀಸಲು. ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ.
12:06 pm (IST)
ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ನಿರ್ಮಾಣ ಹಾಗೆಯೇ ಇನ್ನೂ 100 ಜಿಲ್ಲೆಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಸರಬರಾಜಿಗೆ ನಿರ್ಧಾರ.
12:05 pm (IST)
ಎಲ್ಲಾ ರಾಜ್ಯಗಳಿಗೂ ಸ್ವಾಮಿತ್ವ ಯೋಜನೆ ವಿಸ್ತರಣೆ
12:04 pm (IST)
ಹಸಿರು ವಿದ್ಯುತ್ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಮುಂದಿನ ಹಣಕಾಸು ವರ್ಷದಲ್ಲಿ ಹೈಡ್ರೋಜನ್ ಎನರ್ಜಿ ಮಿಷನ್ ಪ್ರಾರಂಭಿಸಲು ಸರ್ಕಾರ ಪ್ರಸ್ತಾಪ.
12:03 pm (IST)
ನಗರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2021 ರಿಂದ 5 ವರ್ಷಗಳಲ್ಲಿ 1,41,678 ಕೋಟಿ ರೂಪಾಯಿ ಮೀಸಲು
12:03 pm (IST)
ಭಾರತದಲ್ಲಿ ವ್ಯಾಪಾರಿ ಹಡಗುಗಳ ಫ್ಲ್ಯಾಗಿಂಗ್ ಅನ್ನು ಉತ್ತೇಜಿಸುವ ಯೋಜನೆ ಇದ್ದು ಇದಕ್ಕಾಗಿ ಸಬ್ಸಿಡಿ ಬೆಂಬಲವನ್ನು ನೀಡುವ ಮೂಲಕ ಯೋಜನೆ ಪ್ರಾರಂಭ ಮಾಡಲಾಗುವುದು: ವಿತ್ತ ಸಚಿವೆ
12:02 pm (IST)
ಭತ್ತ ಬೆಳೆಗಾರರಿಗೆ 1 ಲಕ್ಷದ 72 ಸಾವಿರ ಕೋಟಿ ರೂ ಅನುದಾನ ಬಿಡುಗಡೆ
12:01 pm (IST)
ಧಾನ್ಯಗಳ ಖರೀದಿಗೆ 10,500 ಕೋಟಿ ರೂ ಮೀಸಲು
ರೈಲ್ವೆ ಇಲಾಖೆಗೆ 1.1 ಲಕ್ಷ ಕೋಟಿ ರೂ. ಅನುದಾನ
ವಿದ್ಯುತ್ ವಲಯಕ್ಕೆ 3 ಲಕ್ಷ ಕೋಟಿ ರೂ. ಅನುದಾನ ಘೋಷಣೆ
12:00 pm (IST)
ಬ್ಯಾಂಕ್ಗಳಿಗೆ 20 ಸಾವಿರ ಕೋಟಿ ರೂ. ಅನುದಾನ
ನಷ್ಟದಲ್ಲಿರುವ ಬ್ಯಾಂಕ್ಗಳು ನಿರಾಳ
11:59 am (IST)
ಐಡಿಬಿಐ ಬ್ಯಾಂಕ್ನಲ್ಲಿನ ಹೂಡಿಕೆ ಹಿಂಪಡೆಯಲು ನಿರ್ಧಾರ
11:58 am (IST)
Union Budget 2021: ಬೆಂಗಳೂರು ಮೆಟ್ರೋ ಫೇಸ್-2ಗೆ 48,788 ಕೋಟಿ ; 2023ರ ಒಳಗೆ ಬ್ರಾಡ್ಗೇಜ್ ಮಾರ್ಗ ಸಂಪೂರ್ಣ ವಿದ್ಯುತೀಕರಣ
11:58 am (IST)
ಬಿಪಿಸಿಎಲ್, ಏರ್ ಇಂಡಿಯಾದಿಂದ ಬಂಡವಾಳ ಹಿಂಪಡೆಯಲು ನಿರ್ಧಾರ
ಎಲ್ಐಸಿಯಲ್ಲಿನ ಬಂಡವಾಳ ಹಿಂತೆಗೆತಕ್ಕೆ ನಿರ್ಧಾರ
ವಿಮಾ ಕ್ಷೇತ್ರದಲ್ಲಿ ವಿದೇಶೀ ಬಂಡವಾಳ ಹೂಡಿಕೆ ಶೇ. 49 ರಿಂದ ಶೇ. 74ಕ್ಕೆ ಏರಿಕೆ
11:57 am (IST)
ಚುನಾವಣೆ ಸಮೀಪದಲ್ಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಬಜೆಟ್ನಲ್ಲಿ ಭಾರೀ ಅನುದಾನ
11:56 am (IST)
ಹಸಿರು ವಿದ್ಯುತ್ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಮುಂದಿನ ಹಣಕಾಸು ವರ್ಷದಲ್ಲಿ ಹೈಡ್ರೋಜನ್ ಎನರ್ಜಿ ಮಿಷನ್ ಪ್ರಾರಂಭಿಸಲು ಸರ್ಕಾರ ಪ್ರಸ್ತಾಪ
11:56am (IST)
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ 25 ಸಾವಿರ ಕೋಟಿ ವೆಚ್ಚದ ರಸ್ತೆ ಯೋಜನೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್
11:55 am (IST)
8 ಕೋಟಿಗಿಂತ ಹೆಚ್ಚಿನ ಮತ್ತು 1 ಕೋಟಿ ಹೆಚ್ಚು ಫಲಾನುಭವಿಗಳನ್ನು ಸೇರಿಸಲು ಉಜ್ವಲಾ ಎಲ್ ಪಿಜಿ ಯೋಜನೆ: ಹಣಕಾಸು ಸಚಿವೆ
11:55am (IST)
ಗ್ರಾಹಕರ ಬಂಡವಾಳದ ಭದ್ರತಾ ವಿಮೆಯನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಬ್ಯಾಂಕ್ ಠೇವಣಿದಾರರ ವಿಮೆ ಮೊತ್ತ ಏರಿಕೆ.
11:54 am (IST)
ರೈಲ್ವೆಗಾಗಿ 1,10,055 ಕೋಟಿ ರೂ.ಗಳನ್ನು ಒದಗಿಸಲಾಗಿದೆ, ಅದರಲ್ಲಿ 2021-22ರಲ್ಲಿ ಬಂಡವಾಳ ವೆಚ್ಚಕ್ಕಾಗಿ 1,07,100 ಕೋಟಿ ರೂ ಸೇರಿದೆ.
11:54 am (IST)
ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ಮತ್ತು ಇನ್ನೂ 100 ಜಿಲ್ಲೆಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಒದಗಿಸಲಾಗುವುದು
11:53am (IST)
ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲು ಮಾರ್ಚ್ 2022 ರೊಳಗೆ 8,500 ಕಿ.ಮೀ ರಸ್ತೆ, ಹೆದ್ದಾರಿ ಯೋಜನೆ
11:53 am (IST)
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 2,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 7 ಬಂದರು ಯೋಜನೆಗಳನ್ನು ಪ್ರಕಟಿಸಿದ ಹಣಕಾಸು ಸಚಿವೆ
11:52am (IST)
ಬಂಡವಾಳ ವೆಚ್ಚವನ್ನು ಪೂರೈಸಲು ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ 2 ಲಕ್ಷ ಕೋಟಿ ರೂ.ಗಳನ್ನು ನೀಡಲು ಕೇಂದ್ರ ತೀರ್ಮಾನ
11:52am (IST)
ಕೇಂದ್ರ ಬಜೆಟ್ 2021: ರೇಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲು
11:50 am (IST)
ಗೇಲ್ (ಇಂಡಿಯಾ) ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ) ಮತ್ತು ಎಚ್‌ಪಿಸಿಎಲ್‌ನ ಪೈಪ್‌ಲೈನ್‌ಗಳನ್ನು ವಾಣಿಜ್ಯೀಕರಣ ಮಾಡಲಾಗುವುದು ಎಂದು 2021-22ರ ಬಜೆಟ್ ನಲ್ಲಿ ವಿತ್ತ ಸಚಿವೆ ಹೇಳಿದ್ದಾರೆ.
11:50 am (IST)
ಸೌರ ಶಕ್ತಿ ವಲಯಕ್ಕೆ 1 ಸಾವಿರ ಕೋಟಿ, ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳಲ್ಲಿ ಗ್ಯಾಸ್ ಪೈಪ್ ಲೈನ್ ಸ್ಥಾಪನೆ.
11:49 am (IST)
ವಿಮಾ ಕಾಯ್ದೆಗೆ ತಿದ್ದುಪಡಿ.
11:48 am (IST)
1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳಿಗೆ ಅವಕಾಶ, ಜಮ್ಮು ಕಾಶ್ಮೀರದಲ್ಲೂ ಗ್ಯಾಸ್ ಪೈಪ್ ಲೈನ್ ಅಳವಡಿಕೆಗೆ ನಿರ್ಧಾರ
11:47 am (IST)
ಮುಂದಿನ ಹಣಕಾಸು ವರ್ಷಕ್ಕೆ ಬಂಡವಾಳ ವೆಚ್ಚವನ್ನು 5.54 ಲಕ್ಷ ಕೋಟಿಗಳಿಗೆ ಹೆಚ್ಚಿಸಲು ಪ್ರಸ್ತಾಪ. ಇದು ಕಳೆದ ವರ್ಷ 4.39 ಲಕ್ಷ ಕೋಟಿ ರೂ ನಷ್ಟಿತ್ತು.
11:47 am (IST)
ವಾಯುಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು ಮಿಲಿಯನ್ ಗಿಂತಲೂ ಅಧಿಕ ಜನಸಂಖ್ಯೆಗೆ 42 ನಗರ ಕೇಂದ್ರಗಳಿಗೆ 2,217 ಕೋಟಿ ರೂಪಾಯಿ ಬಿಡುಗಡೆ
11:47 am (IST)
ವಿಮೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ49 ರಿಂದ ಶೇ.74ಕ್ಕೆ ಏರಿಕೆ
11:46 am (IST)
ಬಂಡವಾಳ ವೆಚ್ಚವನ್ನು ಪೂರೈಸಲು ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ 2 ಲಕ್ಷ ಕೋಟಿ ರೂ.ಮೀಸಲು
11:45am (IST)
ಜಲ ಜೀವನ್ ಮಿಷನ್ 2.8 ಕೋಟಿ ಮನೆಗಳಿಗೆ ಟ್ಯಾಪ್ ಸಂಪರ್ಕವನ್ನು ನೀಡುವ ಉದ್ದೇಶವನ್ನು ಹೊಂದಿದ್ದು, 2.87 ಲಕ್ಷ ಕೋಟಿ ರೂ ಮೀಸಲು
11:45 am (IST)
ಹಳೆಯ ವಾಹನಗಳನ್ನು ಬದಲಿಸಲು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು(voluntary vehicle scrapping policy) ಪ್ರಕಟಿಸಿದ ವಿತ್ತ ಸಚಿವೆ, ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್‌ನೆಸ್ ಪರೀಕ್ಷೆಗೆ ತೀರ್ಮಾನ
11:45 am (IST)
ಆರು ವರ್ಷಗಳಲ್ಲಿ 2.8 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ
11:44 am (IST)
2021-22ನೇ ಸಾಲಿನ ಬಜೆಟ್ ಆರು ಆಧಾರ ಸ್ತಂಭಗಳನ್ನು ಹೊಂದಿದೆ. ಆರೋಗ್ಯ ಮತ್ತು ಸ್ವಾಸ್ಥ್ಯ, ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲಭೂತ ಸೌಕರ್ಯ, ಮಹಾತ್ವಾಕಾಂಕ್ಷೆಯ ಭಾರತಕ್ಕಾಗಿ ಆಂತರಿಕ ಬೆಳವಣಿಗೆ, ಮಾನವ ಬಂಡವಾಳ ಪುನರುಜ್ಜೀವನ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತಗಳೇ ಆರು ಪ್ರಮುಖ ಆಧಾರ ಸ್ತಂಭಗಳಾಗಿವೆ
11:42 am (IST)
2022 ರಲ್ಲಿ ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್ ಗೆ ಚಾಲನೆ
11:42 am (IST)
ಈ ಹಣಕಾಸು ವರ್ಷದಿಂದ 5 ವರ್ಷಗಳವರೆಗೆ 1.97 ಲಕ್ಷ ಕೋಟಿ ರೂ.ಗಳ ವಿನಿಯೋಗದೊಂದಿಗೆ ಪಿಎಲ್ಐ ಯೋಜನೆ ಪ್ರಾರಂಭ
11:41 am (IST)
ಮಾರಕ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ತೊಡಗಿಸಿರುವ ಭಾರತ, ದೇಶಾದ್ಯಂತ ಕೋವಿಡ್ ಲಸಿಕೆ ವಿಚರಣೆಗೆ 35 ಸಾವಿರ ಕೋಟಿ ರೂ ಗಳನ್ನು ಮೀಸಲಿರಿಸಿದೆ.
11:40 am (IST)
ಬೆಂಗಳೂರು ಮೆಟ್ರೋ ಫೇಸ್ 2ಎ, 2ಬಿಗೆ 14,788 ಕೋಟಿ ರೂಪಾಯಿ. 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ.
11:40 am (IST)
20,000 ಕೋಟಿ ರೂ.ಗಳ ವಿನಿಯೋಗದೊಂದಿಗೆ ಅಭಿವೃದ್ಧಿ ಹಣಕಾಸು ಸಂಸ್ಥೆ( development financial institution )ಯನ್ನು ಸ್ಥಾಪಿಸುವ ಮಸೂದೆ ಮಂಡನೆಗೆ ಸರ್ಕಾರ ಚಿಂತನೆ: ವಿತ್ತ ಸಚಿವೆ
11:38 am (IST)
ಬೆಂಗಳೂರು ಮುಂದಿನ ಹಂತದ ಮೆಟ್ರೋ ರೈಲ್ವೆ ಯೋಜನೆಗೆ 14,788 ಕೋಟಿ ರೂಪಾಯಿ
46 ಸಾವಿರ ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ
2023ರ ಡಿಸೆಂಬರ್ ಒಳಗೆ ಎಲ್ಲ ಬ್ರಾಡ್ಗೇಜ್ ಹಳಿಗಳ ವಿದ್ಯುದೀಕರಣ ಪೂರ್ಣಗೊಳಿಸುವ ಭರವಸೆ.
11:37 am (IST)
ಸ್ವಚ್ಚ ಭಾರತ್ 2.0 ಗೆ ಐದು ವರ್ಷಗಳಲ್ಲಿ 1,41,678 ಕೋಟಿ ರೂ. ವಿನಿಯೋಗಿಸುವುದಾಗಿ ವಿತ್ತ ಸಚಿವೆ ಘೋಷಣೆ
11:35am (IST)
20 ವರ್ಷ ಹಳೆಯದಾದ ಎಲ್ಲಾ ವಾಹನಗಳನ್ನು ಸ್ಕ್ರಾಪ್ ಮಾಡಲು ಆದ್ಯತೆ, ವಾಹನ ಸ್ಕ್ರಾಪಿಂಗ್ ಯೋಜನೆಗೆ 4.12 ಲಕ್ಷ ಕೋಟಿ ರೂ.
11:35 am (IST)
11 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿ. ತಮಿಳುನಾಡಿನಲ್ಲಿ 3.500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ
11:34 am (IST)
ತಮಿಳುನಾಡಿನಲ್ಲಿ 3.500 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
11:33 am (IST)
ಕೇರಳದಲ್ಲಿ 55 ಸಾವಿರ ಕೋಟಿ ರೂಪಾಯಿ 1,100 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ರಾಷ್ಟ್ರೀಯ ಹೆದ್ದಾರಿಗಳಿಗೆ 1 ಲಕ್ಷ 18 ಸಾವಿರ ಕೋಟಿ ರೂಪಾಯಿ ವೆಚ್ಚ
11:30 am (IST)
ಪಿಜಿಸಿಐಎಲ್ ಗೆ ಮೂಲ ಬಂಡವಾಳವಾಗಿ 7ಸಾವಿರ ಕೋಟಿ ರೂಪಾಯಿ
11:30 am (IST)ಮುಂದಿನ 3 ವರ್ಷಗಳಲ್ಲಿ ರೂ.20 ಸಾವಿರ ಕೋಟಿ ಆರಂಭಿಕ ಬಂಡವಾಳದ ಮೂಲಕ ಡಿಎಫ್ ಐ ಸ್ಥಾಪನೆ. ಪಿಜಿಸಿಐಎಲ್ ಗೆ ಮೂಲ ಬಂಡವಾಳವಾಗಿ 7 ಸಾವಿರ ಕೋಟಿ.
11:28 am (IST)
7 ಜವಳಿ ಪಾರ್ಕ್ ಗಳ ನಿರ್ಮಾಣ
11:26 am (IST)
ಕೇಂದ್ರ ಬಜೆಟ್ 2021: ‘ಮಿಷನ್ ಪೋಷಣ್ 2.0’ ಘೋಷಣೆ, ಆರೋಗ್ಯ ವಲಯಕ್ಕೆ 2.23.846 ಕೋಟಿ ರೂ ಮೀಸಲು, ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ್ ಭಾರತ್ ಯೋಜನೆಗೆ 64,180 ಕೋಟಿ ರೂಪಾಯಿ ಅನುದಾನ, ಆರೋಗ್ಯಕ್ಕೆ ₹ 2.23.846 ಕೋಟಿ ಖರ್ಚು ಮಾಡಲು ಉದ್ದೇಶಿಸಿದ್ದೇವೆ. ಇದು ಶೇ 137ರಷ್ಟು ಹೆಚ್ಚಾಗಿದೆ.
11:26 am (IST)
ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆಯನ್ನು ಬಲಪಡಿಸಲು 64,180 ಕೋಟಿ ರೂ.ಗಳ ಮೌಲ್ಯದ ಪಿಎಂ ಆತ್ಮ ನಿರ್ಭ ಸ್ವಸ್ಥ ಯೋಜನೆಯನ್ನು ಬಜೆಟ್ ನಲ್ಲಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್
11:25 am (IST)
ಈ ಬಜೆಟ್ ಈ ದಶಕ ಆರಂಭದ ಮೊದಲ ಬಜೆಟ್. ಇದು ಮೊದಲ ಡಿಜಿಟಲ್ ಬಜೆಟ್ ಕೂಡ ಹೌದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
11:23 am (IST)
ಕೋವಿಡ್-19 ಲಸಿಕೆಗೆ 35 ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ-ನಿರ್ಮಲಾ ಸೀತಾರಾಮನ್
11:22 am (IST)
ಭಾರತದಲ್ಲಿ ಈಗ ಪ್ರತಿ ಮಿಲಿಯನ್ ಜನಸಂಖ್ಯೆಗೆ 112 ರಂತೆ ಕೋವಿಡ್-19 ಸಾವಿನ ಪ್ರಮಾಣವನ್ನು ಹೊಂದಿದೆ ಮತ್ತು ಪ್ರತಿ ಮಿಲಿಯನ್‌ಗೆ 130 ರಷ್ಟು ಕಡಿಮೆ ಸಕ್ರಿಯ ಪ್ರಕರಣಗಳಿಗೆ ಇಳಿಕೆಯಾಗಿದೆ. ಆರ್ಥಿಕ ಪುನರುಜ್ಜೀವನ ಕಂಡುಬರುತ್ತಿದೆ:ಹಣಕಾಸು ಸಚಿವೆ
11:21 am (IST)
ದೇಶದ ಮೇಲೆ ಪರಿಣಾಮ ಬೀರುವ ವಿಪತ್ತುಗಳ ದೃಷ್ಟಿಯಿಂದ, ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶಿಷ್ಟ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ.
11:19am (IST)
ಮೇ 2020 ರಲ್ಲಿ, ಸರ್ಕಾರವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಘೋಷಿಸಿತು, ಕೋವಿಡ್-19ನ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ನಾವು ಇನ್ನೂ ಎರಡು ಆತ್ಮನಿರ್ಭರ್ ಪ್ಯಾಕೇಜುಗಳನ್ನು ಹೊರತಂದಿದ್ದೇವೆ. ಆರ್‌ಬಿಐ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಪ್ಯಾಕೇಜ್‌ಗಳ ಒಟ್ಟು ಆರ್ಥಿಕ ಮೊತ್ತ ಸುಮಾರು 27.1 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ: ನಿರ್ಮಲಾ ಸೀತಾರಾಮನ್
11:18am (IST)
ಆರೋಗ್ಯ ಕ್ಷೇತ್ರದ ಮೇಲಿನ ಹೂಡಿಕೆ ಹೆಚ್ಚಳ
ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರ ಘೋಷಣೆ
ಎಲ್ಲಾ ಜಿಲ್ಲೆಗಳಲ್ಲಿ ಉನ್ನತ ಮಟ್ಟದ ಲ್ಯಾಬ್ ನಿರ್ಮಾಣ
11:17 am (IST)
ಆರ್‌ಬಿಐ ಕೈಗೊಂಡ ಕ್ರಮಗಳನ್ನು ಒಳಗೊಂಡಂತೆ ಎಲ್ಲಾ ಆತ್ಮ ನಿರ್ಭರ ಭಾರತ್ ಪ್ಯಾಕೇಜ್‌ಗಳ ಒಟ್ಟು ಆರ್ಥಿಕ ಮೊತ್ತವು ಸುಮಾರು 27.1 ಲಕ್ಷ ಕೋಟಿ ರೂ. ಆಗಿದ್ದು, ಇದು ಜಿಡಿಪಿಯ ಶೇಕಡಾ 13ಕ್ಕಿಂತ ಹೆಚ್ಚು: ವಿತ್ತ ಸಚಿವೆ
17 ಸಾವಿರ ಗ್ರಾಮೀಣ ವೆಲ್ ನೆಸ್ ಕೇಂದ್ರಗಳಿಗೆ ಬೆಂಬಲ
11:16 am (IST)
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಜಯ ಗಳಿಸಿದ ಭಾರತ ತಂಡವನ್ನು ಬಜೆಟ್ ಪ್ರತಿ ಮಂಡನೆ ವೇಳೆ ಶ್ಲಾಘಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
11:15am (IST)
ಬಡವರ ಅನುಕೂಲಕ್ಕಾಗಿ ಸರ್ಕಾರ ತನ್ನ ಸಂಪನ್ಮೂಲಗಳನ್ನು ವಿಸ್ತರಿಸಿದೆ. ಪಿಎಂ ಗರಿಬ್ ಕಲ್ಯಾಣ್ ಯೋಜನೆ, ಮೂರು ಆತ್ಮ ನಿರ್ಭರ ಭಾರತ್ ಪ್ಯಾಕೇಜುಗಳು ಮಿನಿ ಬಜೆಟ್ ಗಳಂತೆ ಮಂಡಿಸಲ್ಪಟ್ಟವು.
11:10 am (IST)
ಭಾರತದಲ್ಲಿ ಶೀಘ್ರವೇ ಮತ್ತೆರಡು ಕೋವಿಡ್ ಲಸಿಕೆ ಲಭ್ಯ
11:04 am (IST)
2021-2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭ